ಚೆನ್ನೈ: ರಣಧೀರ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ನಟಿ ಖುಷ್ಬೂ ಸುಂದರ್ ಅವರು ತೂಕವನ್ನು ಇಳಿಸಿಕೊಂಡಿರುವ ಮತ್ತೆ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.
Advertisement
10 ಕಿಲೋ ತೂಕವನ್ನು ವರ್ಕೌಟ್ ಮೂಲಕವಾಗಿ ಇಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10ಕೆಜಿ ತೂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದಾರೆ. ನಟಿ ಖುಷ್ಬೂ ಸುಂದರ್ ಅವರ ಸಣ್ಣಗಾಗಿ ಅಚ್ಚರಿ ಮೂಡಿಸಿದ್ದಾರೆ. ಇದೀಗ ಕಠಿಣ ಪರಿಶ್ರಮವು ಫಲಿತಾಂಶಗಳನ್ನು ನೀಡಿದಾಗ, ಸಂತೋಷವನ್ನು ವಿವರಿಸಲು ಸಾಧ್ಯವಿಲ್ಲ ಎಂದು ತೂಕ ಇಳಿಸಿಕೊಂಡ ನಂತರ ತೆಗೆಸಿರುವ ಕೆಲವು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗೆ ಖುಷ್ಬೂ ಸುಂದರ್ ತೂಕ ಇಳಿಸಿಕೊಂಡರು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Advertisement
When hard work yields results, the happiness cannot be explained. ❤❤ pic.twitter.com/x68fEjFBTg
— KhushbuSundar (@khushsundar) August 21, 2021
Advertisement
ಕಳೆದ ನವೆಂಬರ್‍ನಿಂದ ತನ್ನ ದೇಹದ ಕಡಿಮೆ ಮಾಡಲು ಕೆಲಸ ಮಾಡುತ್ತಿದ್ದೇನೆ. ಈ ವರ್ಷದ ಮೇ ತಿಂಗಳಿನಿಂದ ವ್ಯತ್ಯಾಸವನ್ನು ಕಾಣಲಾರಂಭಿಸಿದೆ. ನಾನು ಮೊದಲು ಕೆಲಸ ಮಾಡಲು ಪ್ರಾರಂಭಿಸಿದಾಗ, ನನಗೆ 93 ಕಿಲೋ ಇತ್ತು, ಈಗ ನನಗೆ 79 ಆಗಿದೆ ಮತ್ತು 69 ಆಗಲು ನಾನು ಇನ್ನೊಂದು 10 ಕಿಲೋ ಕಡಿಮೆ ಮಾಡಲು ಬಯಸುತ್ತೇನೆ ಎಂದು ಮಾಧ್ಯಮವೊಂದದಕ್ಕೆ ಖುಷ್ಬೂ ಅವರು ಹೇಳಿಕೆ ನೀಡಿದ್ದಾರೆ.
Advertisement
Don’t let anyone ever dull your sparkle!! ❤❤❤ pic.twitter.com/ArAqDJDuOA
— KhushbuSundar (@khushsundar) August 18, 2021
ರಣಧೀರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಖುಷ್ಬೂ ಸುಂದರ್ ಸರಿ ಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಬಳುಕುವ ಬಳ್ಳಿಯಂತಿದ್ದ ದುಂಡು ಮುಖದ ನಟಿ ಖುಷ್ಬೂ ಮದುವೆ, ಮಕ್ಕಳಾದ ಮೇಲೆ ಸಹಜವಾಗಿಯೇ ದಪ್ಪಗಾಗಿದ್ದರು. ಸದ್ಯ ರಾಜಕೀಯ, ಚಿತ್ರರಂಗ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ನೆರೆಹಾನಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಲು ಸಿಎಂ ಸೂಚನೆ
ಖುಷ್ಬೂ ತೂಕ ಕಳೆದುಕೊಳ್ಳಲು ಲಾಕ್‍ಡೌನ್ ಕಾರಣವಂತೆ. ಹೌದು, ಲಾಕ್‍ಡೌನ್ ಸಮಯದಲ್ಲಿ 70 ದಿನಗಳ ಕಾಲ ಮನೆಯ ಎಲ್ಲ ಕೆಲಸವನ್ನು ತಾವೇ ಮಾಡಿದ್ದ ಖುಷ್ಬೂ ಸಹಜವಾಗಿ ತೂಕ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಖುಷ್ಬೂ ಯೋಗ ಕೂಡ ಮಾಡಿದ್ದರು. ಊಟ-ತಿಂಡಿ ಇಷ್ಟಪಡುತ್ತಿದ್ದ ಖುಷ್ಬೂ ಸ್ವಲ್ಪ ಸ್ವಲ್ಪವೇ ಆಹಾರ ಸೇವನೆಗೆ ಕಡಿವಾಣ ಹಾಕುತ್ತ ಬಂದಿದ್ದರು.
View this post on Instagram
ಕೆಲವು ದಿನಗಳ ಹಿಂದೆ ಸೆಲ್ಫಿ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಅದರ ಜೊತೆಗೆ ಖುಷ್ಬೂ ನೋವಿನಲ್ಲಿ ನಗುವುದನ್ನು ಕಲಿಯಿರಿ. ಒಂದು ನಗು ಸೋಲು-ಗೆಲುವು, ಒಳ್ಳೆಯದು-ಕೆಟ್ಟದ್ದನ್ನು ಹಾದು ಹೋಗಲು ಸಹಾಯ ಮಾಡುತ್ತದೆ. ಆರೋಗ್ಯಕರ ಮನಸ್ಸು, ದೇಹ ಇದ್ದರೆ ಅದು ನೀವಾಗುತ್ತೀರಿ. ಖುಷಿಯಾಗಿ, ಆರೋಗ್ಯವಾಗಿರಿ ಎಂದು ಕಿವಿಮಾತು ಹೇಳಿದ್ದರು.
View this post on Instagram
ಖುಷ್ಬೂ ಸಣ್ಣಗಾಗಿರುವುದಕ್ಕೆ ಹಲವರು ಅಚ್ಚರಿಗೊಂಡಿದ್ದರೆ, ಕೆಲವರು ಲಾಕ್‍ಡೌನ್ ಟೈಮ್‍ನಲ್ಲಿ ಇದೆಲ್ಲ ಬೇಕಿತ್ತಾ ಅಂತ ಕೂಡ ಪ್ರಶ್ನಿಸಿದ್ದಾರೆ. ಇದಕ್ಕೆ ಖುಷ್ಬೂ, ಟಾಯ್ಲೆಟ್ ಕ್ಲೀನಿಂಗ್, ಬಟ್ಟೆ ಒಗೆಯುವುದರಿಂದ ಹಿಡಿದು ಎಲ್ಲ ಕೆಲಸವನ್ನು ನಾನು ಮಾಡಿದ್ದೇನೆ, ಅದರ ಜೊತೆಗೆ ಯೋಗ, ವ್ಯಾಯಾಮ ಕೂಡ ಮಾಡಿದ್ದೇನೆ ಎಂದು ಖುಷ್ಬೂ ಸುಂದರ್ ಅವರು ಈ ಹಿಂದೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು