ನವದೆಹಲಿ: ದೇಶದಲ್ಲಿ 5ಜಿ ಸೇವೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ 5ಜಿ ಸೇವೆ ಆರಂಭಿಸುತ್ತೇವೆ. ಜೊತೆಗೆ 6ಜಿ ಸೇವೆ ಬಗ್ಗೆ ಈಗಾಗಲೇ ಕೆಲಸ ಆರಂಭವಾಗಿದ್ದು 2030ರ ಒಳಗಾಗಿ 6ಜಿ ಸೇವೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Advertisement
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ತಂತ್ರಜ್ಞಾನಗಳ ಬೆಳವಣಿಗೆ ಸಾಕಷ್ಟು ವೇಗವಾಗಿ ನಡೆಯುತ್ತಿದೆ. ಈಗಾಗಲೇ ಡ್ರೋನ್‌ಗಳನ್ನು ಕೃಷಿ ಮತ್ತು ಆರೋಗ್ಯ ವಿಭಾಗದಲ್ಲಿ ಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ಗೇಮಿಂಗ್ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಿಂದ ಯುವ ಸಮೂಹಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ
Advertisement
Advertisement
ಯುವ ಸಮೂಹ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು. ಗ್ರಾಮೀಣ ಭಾಗಗಳಲ್ಲೂ ಕೂಡ 5ಜಿ ಸೇವೆ ಆರಂಭಕ್ಕೆ ಸರ್ಕಾರ ಸಿದ್ಧವಿದೆ. ಕಳೆದ 7-8 ವರ್ಷಗಳಿಂದ ದೇಶದಲ್ಲಿ ತಂತ್ರಜ್ಞಾನಗಳ ಉನ್ನತ ಮಟ್ಟದ ಬೆಳವಣಿಗೆ ಆಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 3 ವರ್ಷಗಳ ನಂತರ ದಲೈಲಾಮಾ ದೆಹಲಿಗೆ ಭೇಟಿ
Advertisement
ಆಕ್ಟೋಬರ್ 12ಕ್ಕೆ 5ಜಿ ಸೇವೆ ಆರಂಭ:
ದೇಶದಲ್ಲಿ ಅಕ್ಟೋಬರ್ 12ರಿಂದ 5ಜಿ ಸೇವೆ ಆರಂಭಗೊಳ್ಳಲಿದ್ದು, ಮುಂದಿನ ಕೆಲವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲೂ 5ಜಿ ಸೇವೆ ದೊರಕುವಂತೆ ಮಾಡುತ್ತೇವೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Addressing the Grand Finale of Smart India Hackathon 2022. It offers a glimpse of India's Yuva Shakti. https://t.co/7TcixPgoqD
— Narendra Modi (@narendramodi) August 25, 2022
ಮೂಲಗಳ ಪ್ರಕಾರ ಮೊದಲ ಭಾಗವಾಗಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‍ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದ 5ಜಿ ಸೇವೆ ಆರಂಭವಾಗಲಿದೆ. ಈ ನಗರಗಳಲ್ಲಿ ಆಯ್ದ ಕೆಲ ಪ್ರದೇಶಗಳಲ್ಲಿ ಜನರಿಗೆ 5ಜಿ ಸೇವೆ ದೊರಕುವ ಸಾಧ್ಯತೆ ಇದೆ.