ಕಿರುತೆರೆ ಪ್ರೇಕ್ಷಕರು ಕಾದು ಕುಳಿತಿದ್ದ Weekend With Ramesh 5 ಮೊದಲ ಸಂಚಿಕೆಗೆ ತೆರೆಬಿದ್ದಿದೆ. ಸಾಧಕರ ಸಾಲಿನಲ್ಲಿ ಸಾಧಕಿಯಾಗಿ ರಮ್ಯಾ ಅವರ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ (Rakshitha) ಜೊತೆಗಿನ ಕಾಂಪಿಟೇಷನ್ ಬಗ್ಗೆ ರಮ್ಯಾ (Ramya) ಬಾಯ್ಬಿಟ್ಟಿದ್ದಾರೆ. ನಮ್ಮ ಮಧ್ಯೆ ಈ ಜಟಾಪಟಿ ಶುರು ಆಗಿದ್ಹೇಗೆ ಎಂಬುದನ್ನ ಹೇಳಿದ್ದಾರೆ. ಬಾಲ್ಯದಲ್ಲಿ ರಮ್ಯಾ ನೆಚ್ಚಿನ ಚಿತ್ರಾನ್ನ, ಅಪ್ಪು ಕೊಟ್ಟ ಫಸ್ಟ್ ಚೆಕ್, ಎಕ್ಸ್‌ಕ್ಯೂಸ್ ಮಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಬಾಲ್ಯದ ದಿನಗಳಲ್ಲಿ ರಮ್ಯಾ ತುಂಬಾ ತುಂಟಿ ಆಗಿದ್ರಂತೆ. ಬೋರ್ಡಿಂಗ್ ಶಾಲೆಯಲ್ಲಿ ಓದ್ದಿದ್ದ ರಮ್ಯಾ, ಚಿತ್ರಾನ್ನ ಹಾಗೂ ಜಿಲೇಬಿ ಮೇಲಿರುವ ಪ್ರೀತಿಯನ್ನು ಹಾಗೂ ಅವರು ಹೇಗೆ ಚಿಪ್ಸ್ ಅನ್ನು ಸ್ಪೂನ್‌ನಂತೆ ಬಳಸಿ ಚಿತ್ರಾನ್ನ ತಿನ್ನುತ್ತಾರೆಂಬುದು ಅವರ ಸಹೋದರಿಯರು ಈ ಬಗ್ಗೆ ತಿಳಿಸಿದರು. ಶಾಲೆಯಲ್ಲಿನ ಕಠಿಣ ನಿಯಮಗಳು, ಅಲ್ಲಿನ ಶಿಕ್ಷಕರು, ಅಲ್ಲಿನ ಗೆಳೆಯರ ನೆನಪುಗಳನ್ನೆಲ್ಲ ಮಾಡಿಕೊಂಡರು. ರಮ್ಯಾರನ್ನು ಕಾಣಲು ಅವರ ಬಾಲ್ಯದ ಗೆಳತಿಯರಿಬ್ಬರೂ ಬಹು ದೂರದಿಂದ ಬಂದಿದ್ದರು. ರಮ್ಯಾ ಹೇಗೆ ಕತ್ತಲಾಗುತ್ತಿದ್ದಂತೆ ದೆವ್ವದ ಕತೆಗಳನ್ನು ಹೇಳಿ ಎಲ್ಲರನ್ನೂ ಹೆದರಿಸುತ್ತಿದ್ದರು. ರಮ್ಯಾ ಬಹಳವಾಗಿ ಹೆದರುವ ಅವರ ಗಣಿತ ಶಿಕ್ಷಕಿ ಸಹ ಶೋಗೆ ಬಂದು ಶೋನಲ್ಲಿಯೂ ಗಣಿತದ ಲೆಕ್ಕ ಬಿಡಿಸಲು ಹೇಳಿದರು. ಆದರೆ ರಮ್ಯಾ ಲೆಕ್ಕ ಬಿಡಿಸಿ ಭೇಷ್ ಎನಿಸಿಕೊಂಡಿದ್ದು ಆಪ್ತವಾಗಿತ್ತು.
ನಂತರ ರಮ್ಯಾ, ಚಿತ್ರರಂಗಕ್ಕೆ ಬರಲು ಅವಕಾಶ ಸಿಕ್ಕಿದ್ದು ಹೇಗೆ? ಎಂಬುದನ್ನ ನಟಿ ವಿವರಿಸಿದರು. ಅಂದು ರಾಘಣ್ಣ, ರಮ್ಯಾರನ್ನು ನೋಡಿದ ಕೂಡಲೇ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಆದರೆ ಅಪ್ಪು ಸಿನಿಮಾದ ಅವಕಾಶ ತಮಗೆ ತಪ್ಪಿ ನಂತರ `ಅಭಿ’ ಸಿನಿಮಾದ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಅಣ್ಣಾವ್ರವನ್ನು ಭೇಟಿಯಾಗಿದ್ದು, ಪಾರ್ವತಮ್ಮನವರು ತಮಗೆ ರಮ್ಯಾ ಎಂದು ಹೆಸರಿಟ್ಟ ಆ ಕ್ಷಣ. ಮೊದಲ ಸಿನಿಮಾದಲ್ಲಿ ಅಪ್ಪು ತಮಗೆ ಮಾಡಿದ ಸಹಾಯ. ಮೊದಲ ಚೆಕ್ ಅನ್ನು ಅಪ್ಪುವಿಂದ ಪಡೆದುಕೊಂಡಿದ್ದು, ಎಲ್ಲವನ್ನೂ ನೆನಪಿಸಿಕೊಂಡರು. ರಾಘಣ್ಣ (Raganna) ಹಾಗೂ ಶಿವಣ್ಣ (Shivanna) ಅವರುಗಳು ವಿಡಿಯೋ ಸಂದೇಶ ಕಳಿಸಿ, ರಮ್ಯಾಗೆ ಶುಭ ಹಾರೈಸಿದರು. ನಮ್ಮ ಸಂಸ್ಥೆಯಿಂದ ನೀವು ಬೆಳೆಯಲಿಲ್ಲ. ನಿಮ್ಮ ಪ್ರತಿಭೆಯಿಂದ ಬೆಳೆದಿರಿ ಎಂದು ರಾಘಣ್ಣ ಹಾಡಿ ಹೊಗಳಿದರು.
`ಅಭಿ’ (Abhi) ಸಿನಿಮಾದ ಸಹಾಯಕ ನಿರ್ದೇಶಕ ಮಹೇಶ್ ಬಾಬು (Mahesh Babu) , ಹಾಗೂ ಅಪ್ಪು-ರಮ್ಯಾರ ಅರಸು, ಆಕಾಶ್ ಸಿನಿಮಾಗಳಿಗೆ ನಿರ್ದೇಶನ ಮಾಡಿದರು. ಬಂದು ರಮ್ಯಾರ ಸಿಟ್ಟಿನ ಬಗ್ಗೆ ಹೇಳಿದರು. ನನಗೆ ರಕ್ಷಿತಾಗೆ (Rakshitha) ಕಾಂಪಿಟೇಶನ್ ತಂದು ಇಟ್ಟಿದ್ದೆ ಇವರು ಎಂದು ರಮ್ಯಾ ಮಹೇಶ್‌ರ ಕಾಲೆಳೆದಿದ್ದಾರೆ. ಈ ಮಾತಿನ ನಡುವೆ ಪುನೀತ್ ಸ್ಮರಿಸಿದ ರಮ್ಯಾ, ಅಪ್ಪುವಿನಿಂದ ತಾವು ಕಲಿತ ಕೆಲವು ವಿಷಯಗಳ ಬಗ್ಗೆ ಮತ್ತು ತಾವು ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡರು. ಅಪ್ಪು ಅಗಲಿಕೆಯಿಂದ ಅನುಭವಿಸಿದ ನೋವು, ಅಪ್ಪು ಅಗಲಿದ ಆ ದಿನದ ಬಗ್ಗೆಯೂ ರಮ್ಯಾ ನೆನಪಿಸಿಕೊಂಡು ಕಣ್ಣೀರು ಹಾಕಿದರು.
ಆ ನಂತರ ರಮೇಶ್ ಅರವಿಂದ್ Excuse Me ಸಿನಿಮಾದ ವಿಷಯ ತೆಗೆದರು. ಆ ಸಿನಿಮಾದ ಇಬ್ಬರು ನಾಯಕರಾದ ನಿರ್ಮಾಪಕರು ಸುನಿಲ್ ರಾವ್ ಹಾಗೂ ಅಜಯ್ ಅವರುಗಳು ರಮ್ಯಾ ಕುರಿತಾಗಿ ಮಾತನಾಡಿದರು. ನಟಿಯ ಮುಂದಿನ ಜರ್ನಿಗೆ ಶುಭಹಾರೈಸಿದರು. ಇನ್ನೂ `ವೀಕೆಂಡ್ ವಿತ್ ರಮೇಶ್ʼ ಮೊದಲ ಸಂಚಿಕೆಯು ನಗು, ಭಾವುಕತೆ, ನೆನಪು, ಪ್ರೀತಿ, ಸಾರ್ಥಕತೆ ಭಾವನೆಗಳಿಂದ ಕೂಡಿತ್ತು.