Weekend With Ramesh ಸಾಧಕರ ಕುರ್ಚಿಯಲ್ಲಿ ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್

Public TV
1 Min Read
v nagendra prasad

ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಹಲವು ಸಾಧಕರು ಭಾಗಿಯಾಗಿ ತಮ್ಮ ಜೀವನದ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ರಮ್ಯಾ, ಡಾಲಿ, ಪ್ರೇಮ್, ಮಂಡ್ಯ ರಮೇಶ್ ಸೇರಿದಂತೆ ಹಲವು ಸ್ಟಾರ್ಸ್ ಸಾಧಕರ ಕುರ್ಚಿಯನ್ನ ಅಲಂಕರಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನ (Sandalwood) ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಈ ವಾರದ ಅತಿಥಿಯಾಗಿ ಭಾಗಿಯಾಗಿದ್ದಾರೆ.

ramesh aravind

ಮಂಡ್ಯ ಜಿಲ್ಲೆಯವರಾದ ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಬಂದು ಎರಡು ದಶಕಗಳಾಗಿವೆ. 2000ರಲ್ಲಿ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಗೀತ ರಚನೆ ಮಾಡಿದ್ದರು. ಆ ನಂತರ ಸಾಲು ಸಾಲು ಕನ್ನಡದ ಅನೇಕ ಹಿಟ್-ಸೂಪರ್ ಸಿನಿಮಾಗಳಿಗೆ ಸೂಪರ್-ಡೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಸದ್ಯ ಕಾರ್ಯಕ್ರಮ ಪ್ರೋಮೋ ಕೂಡ ರಿವೀಲ್ ಆಗಿದೆ.‌ ಇದನ್ನೂ ಓದಿ:ಲವ್ ಮಿ OR ಹೇಟ್ ಮಿ ಅಂತಿದ್ದಾರೆ ಬಿಗ್‌ ಬಾಸ್‌ ರೂಪೇಶ್ ಶೆಟ್ಟಿ

FotoJet 1 25

ನಾನು ಯಾವ ಉದ್ಯೋಗ ಬಯಸಿದ್ದೆನೋ ಅದೇ ಉದ್ಯೋಗ ನನಗೆ ಸಿಕ್ಕಿದ್ದೆ ನನ್ನ ಗೆಲುವು ಎಂದಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್‌ಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಇನ್ನು ಹಲವು ಮಂದಿ ಆಗಮಿಸಿದ್ದಾರೆ. ಎಪಿಸೋಡ್‌ನಲ್ಲಿ ವಿ.ನಾಗೇಂದ್ರ ಪ್ರಸಾದ್ ರಚಿಸಿರುವ ಹಲವು ಹಾಡುಗಳನ್ನು ಹಾಡಲಾಗಿದೆ ಮಾತ್ರವಲ್ಲ ಸಾಧಕರ ಕುರ್ಚಿ ಮೇಲೆ ಕುಳಿತು ನಾಗೇಂದ್ರ ಪ್ರಸಾದ್ ಅವರು ಈ ಕಾರ್ಯಕ್ರಮದ ಕುರಿತಾಗಿ ಹಾಡೊಂದನ್ನು ಕಟ್ಟಿ ಅಲ್ಲಿಯೇ ಗಾಯಕರ ಕೈಯಲ್ಲಿ ಹಾಡಿಸಿದ್ದಾರೆ.

v nagendra prasad

ನಾಗೇಂದ್ರ ಪ್ರಸಾದ್ ಎಪಿಸೋಡ್‌ನಲ್ಲಿ ಕನ್ನಡದ ಅತ್ಯುತ್ತಮ ಸಂಗೀತಗಾರ, ಗೀತ ಸಾಹಿತಿ ಹಂಸಲೇಖ ಕರೆ ಮಾಡಿದ್ದು, ನಾನು ಕುಳಿತುಕೊಳ್ಳಬೇಕಾದ ಸ್ಥಾನದಲ್ಲಿ ನಾಗೇಂದ್ರ ಪ್ರಸಾದ್ ಕುಳಿತುಕೊಳ್ಳಬೇಕು ಎಂಬುದೇ ನನ್ನ ಹಾರೈಕೆ ಎಂದಿದ್ದಾರೆ. ಗುರುಗಳ ಈ ಮಾತು ನಾಗೇಂದ್ರ ಪ್ರಸಾದ್ ಅವರನ್ನು ಭಾವುಕಗೊಳಿಸಿದೆ. ಅಂದಹಾಗೆ, ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ವಿ.ನಾಗೇಂದ್ರ ಪ್ರಸಾದ್‌ ಎಪಿಸೋಡ್‌ (ಮೇ.20) ಶನಿವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

Share This Article