ಕಿರುತೆರೆಯ ಜನಪ್ರಿಯ Weekend With Ramesh ಶೋಗೆ ಈ ವಾರ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ (Dr. Manjinath) ಎಂಟ್ರಿ ಕೊಟ್ಟಿದ್ದಾರೆ. ಅದೆಷ್ಟೋ ಜೀವಗಳಿಗೆ ಮರು ಜೀವ ಕೊಟ್ಟಿರುವ ಸ್ಪೂರ್ತಿಯ ಕಥೆಯನ್ನ ಏಳೆ ಏಳೆಯಾಗಿ ನಟ ರಮೇಶ್ ಅರವಿಂದ್ (Ramesh Aravind) ಬಿಚ್ಚಿಟ್ಟಿದ್ದಾರೆ. ಡಾ. ಮಂಜುನಾಥ್ ಅವರು ಕೂಡ ಸಾಕಷ್ಟು ತೆರೆಮರೆಯ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸದಾ ನಗಿಸುವ ಸುಧಾ ಬರಗೂರು (Sudha Baragur) ಅವರ ಪತಿಯ ಜೀವ ಉಳಿದಿದ್ದೇ ಡಾ.ಮಂಜುನಾಥ್ ಅವರ ಅರೈಕೆ ಮತ್ತು ಚಿಕಿತ್ಸೆಯಿಂದ ಎಂದು ಅಸಲಿ ಸಂಗತಿಯನ್ನ ಮಾತನಾಡಿದ್ದಾರೆ.
Advertisement
ವೈದ್ಯೋ ನಾರಾಯಣೋ ಹರಿಃ ಎಂಬುದು ಅಕ್ಷರಶಃ ಸತ್ಯ. ಅದಕ್ಕೆ ತಾಜಾ ಉದಾಹರಣೆ ಪದ್ಮಶ್ರೀ ಡಾ.ಮಂಜುನಾಥ್ ಅವರು ಎಂದರೆ ತಪ್ಪಾಗಲಾರದು. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. 50 ಲಕ್ಷ ಹೃದಯ ಸಮಸ್ಯೆಯುಳ್ಳ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನೂ ಮಾತಿನ ಕಟ್ಟೆಯಲ್ಲಿ ಸುಧಾ ಬರಗೂರು ಕೂತರೆ ಅವರ ಹಾಸ್ಯದಿಂದಾನೇ ಅದೆಷ್ಟೋ ಮನಸ್ಸುಗಳು ನಕ್ಕು ನಕ್ಕು ತಣ್ಣಗಾಗುತ್ತವೆ. ಆದರೆ, ಸದಾ ನಗಿಸುವ ಸುಧಾ ಬರಗೂರು ಜೀವನದಲ್ಲೂ ಅಳುವ ಸನ್ನಿವೇಶಗಳು ಬಂದಿದ್ದವು. ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಅವರ ಹಾರ್ಟ್‌ನಲ್ಲಿ ಸಮಸ್ಯೆ ಇದ್ದಂತಹ ದಿನ. ಆ ವೇಳೆ ಸುಧಾ ಬರಗೂರು ಅವರ ಪತಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿದ್ದು ಡಾ. ಮಂಜುನಾಥ್.
Advertisement
Advertisement
ವೀಕೆಂಡ್ ಟೆಂಟ್‌ನಲ್ಲಿ ನಡೆದ ಸತ್ಯವನ್ನೆಲ್ಲಾ ಸುಧಾ ಬರಗೂರು ತಿಳಿಸಿದ್ದಾರೆ. ನಾನು ಇವತ್ತೇನಾದರೂ ಚೆನ್ನಾಗಿದ್ದರೆ ಅದರ ಮೊದಲ ಕ್ರೆಡಿಟ್ ಡಾಕ್ಟರ್‌ಗೆ ಎರಡನೇ ಕ್ರೆಡಿಟ್ ನನ್ನ ಗಂಡನಿಗೆ. ನಾನು ನಗಿಸೋದನ್ನ ಕರ್ನಾಟಕ ಜನತೆ ನೋಡಿದ್ದಾರೆ. ಆದರೆ ಅಳುವ ಸುಧಾರನ್ನ ನೋಡಿ, ಕಣ್ಣೀರು ಒರೆಸುವ ಕೆಲಸ ಮಾಡಿದ್ದರೆ ಅದು ಇವರೇ ಎಂದು ಡಾ.ಮಂಜುನಾಥ್ ಬಗ್ಗೆ ಗೌರವ ಪೂರ್ವಕವಾಗಿ ಮಾತನಾಡಿದ್ದಾರೆ. ಡಾ.ಮಂಜುನಾಥ್ ಅಭಿಮಾನಿ ಸಂಘದ ಅಜೀವ ಸದಸ್ಯೆ ನಾನು. ನನ್ನ ಗಂಡನಿಗೆ ಹಾರ್ಟ್ ಪ್ರಾಬ್ಲಮ್. ಹೌದು, ನನ್ನಂತಹ ಬಾಯಾಳಿನ ಮದುವೆ ಆದ್ಮೇಲೆ ಹಾರ್ಟ್ ಪ್ರಾಬ್ಲಮ್ ಬರಲೇಬೇಕು. 15-16 ವರ್ಷದ ಹಿಂದೆ. ನಂಜನಗೂಡು ದೇವಸ್ಥಾನದಲ್ಲಿ ಇವರು ಬಿದ್ದು ಹೋದ್ರು. ತಕ್ಷಣ ಮಂಜುನಾಥ್ ಸರ್‌ಗೆ ಕರೆ ಮಾಡಿ, ಯಜಮಾನ್ರು ಹೀಗೆ ಬಿದ್ದು ಹೋದ್ರು ಅಂದೆ. ಕರೆದುಕೊಂಡು ಬನ್ನಿ ಅಂದ್ರು. ಕೇವಲ ಹದಿನೈದು ನಿಮಿಷದಲ್ಲಿಯೇ ಐಸಿಯೂ ವಾರ್ಡ್‌ನಲ್ಲಿ ಎಲ್ಲಾ ರೆಡಿಯಾಗಿತ್ತು. ನಾನು ಕಲಾವಿದೆ ಅಂತಲ್ಲ, ಮಂಜುನಾಥ್ ಸರ್ ಹೇಳಿದ್ರು ಅನ್ನೋ ಕಾರಣಕ್ಕೆ. ಇದನ್ನೂ ಓದಿ: ವಾಯುಪಡೆ ಅಧಿಕಾರಿಯಾದ ನಟ ವರುಣ್ ತೇಜ್
Advertisement
ಡಾಕ್ಟರ್‌ಗೂ ದೇವರಿಗೂ ಕೋಪ ಬರಿಸಬಾರದು. ಯಾಕಂದ್ರೆ, ದೇವರಿಗೆ ಕೋಪ ಬಂದ್ರೆ ಡಾಕ್ಟರ್ ಬಳಿ ಕಳಿಸ್ತಾನೆ. ಡಾಕ್ಟರ್‌ಗೆ ಕೋಪ ಬಂದ್ರೆ ದೇವರ ಬಳಿಯೇ ಕಳುಹಿಸಿ ಬಿಡ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳ ದೂರ ಅಲ್ವಾ. ಅದಕ್ಕೆ ಆಗಾಗ ಇಲ್ಲೆ ಇರುವ ಮಂಜುನಾಥ ಸ್ವಾಮಿ ದರ್ಶನ ಮಾಡಿಕೊಂಡು ಬಂದರೆ ನಮ್ಮಮನೆ ಸ್ವಾಮಿ ಖುಷಿಯಾಗಿ ಇರುತ್ತಾರೆ. ಇದು ನನ್ನ ವೈಯಕ್ತಿಕ ಅನುಭವ ಎಂದು ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದಾರೆ.