ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಎಂಟ್ರಿಯಾಗಿದೆ. ಬಾಲ್ಯ ಜೀವನ, ಶಿಕ್ಷಣ, ಸಿನಿಮಾ ಕೆರಿಯರ್, ಡ್ಯಾನ್ಸ್, ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರಭುದೇವ ಅವರು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಭುದೇವ (Prabhudeva) ಅವರ ಕನ್ನಡಕ್ಕೆ (Kannada) ಕನ್ನಡಿಗರು ಫಿದಾ ಆಗಿದ್ದಾರೆ.
Advertisement
ಮೈಸೂರು (Mysore) ಮೂಲದ ಪ್ರಭುದೇವ್ ಅವರು ಇತರೆ ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ಪ್ರಭುದೇವ ನಟ ನಿರ್ದೇಶಕ ಡ್ಯಾನ್ಸರ್ ಆಗಿದ್ದಾರೆ. ಈಗ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಸಾಧಕನಾಗಿ ಪ್ರಭುದೇವ ಆಗಮಿಸಿದ್ದಾರೆ. ಮೊದಲ ಸಂಚಿಕೆಯಲ್ಲಿ ರಮ್ಯಾ ಸ್ಪೂರ್ತಿಯ ಕಥೆ ಎಲ್ಲರಿಗೂ ಮೋಡಿ ಮಾಡಿತ್ತು. ಆದರೆ ಅವರ ಅತಿಯಾದ ಇಂಗ್ಲಿಷ್ ಬಳಕೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಇನ್ನೂ ಬಾಲಿವುಡ್‌ನ ಬಹುಬೇಡಿಕೆ ನಟ, ನಿರ್ದೇಶಕ ಕೊರಿಯೋಗ್ರಾಫರ್ ಪ್ರಭುದೇವ ಬರುತ್ತಾರೆ ಎಂದಾಗ ಹಿಂದಿ & ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಅಂದುಕೊಂಡವರೇ ಜಾಸ್ತಿ. ಆದರೆ ಆಗಿದ್ದೇ ಬೇರೆ.
Advertisement
Advertisement
ಪ್ರಭುದೇವ ಅವರು ಅಪರೂಪಕ್ಕೆ ಇಂಗ್ಲಿಷ್ ಪದ ಬಳಸಿದ್ದರು ಕೂಡ ಅತೀ ಹೆಚ್ಚು ಕನ್ನಡದಲ್ಲಿಯೇ ಮಾತನಾಡಿದರು. ಅವರ ತಂದೆ ಮೂಗೂರು ಸುಂದರಂ, ತಾಯಿ, ಸಹೋದರ ನಾಗೇಂದ್ರ ಪ್ರಸಾದ್ ಸೇರಿ ಅವರ ಬಳಗ ಎಲ್ಲವೂ ಕನ್ನಡದಲ್ಲಿಯೇ ಮಾತನಾಡಿದ್ದರು. ಕೆಲವರಿಗೆ ಇದು ತಮಿಳು ಮಿಶ್ರಿತ ಕನ್ನಡ ಅಂತ ಅನಿಸಿರಬಹುದು. ಆದರೆ ಅದು ತಮಿಳು ಮಿಶ್ರಿತ ಕನ್ನಡ ಅಲ್ಲವೇ ಅಲ್ಲ. ಚಾಮರಾಜನಗರ ಭಾಷೆಯ ಕನ್ನಡವಿದು, ಕಾಡು ಭಾಷೆ ಅಂತಲೂ ಹೇಳುತ್ತಾರೆ. ಡಾ ರಾಜ್‌ಕುಮಾರ್ ಅವರು ಚಾಮರಾಜನಗರದ ಕಡೆಯವರು ಬಂದ್ರು ಅಂದ್ರೆ ನಮ್ಮ ಕಾಡಿನವ್ರು ಅಂತ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ, ದೋಸೆ ಕೊಡು ಎನ್ನಲು ತತ್ತಾಯ್ಯಾ ಒಂದ್ ದ್ಯಾಸ್ಯಾ ಅಂತ ಹೇಳುತ್ತಿದ್ದರಂತೆ. ಮನೆಯಲ್ಲಿ ಅಣ್ಣಾವ್ರು ಹೀಗೆ ಮಾತನಾಡ್ತಿದ್ರಂತೆ. ಒಟ್ನಲ್ಲಿ ರಮ್ಯಾ (Ramya) ಕನ್ನಡ ಬಳಕೆಗೆ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಪ್ರಭುದೇವ ಅವರ ಕನ್ನಡಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ದಶಕದ ನಂತರ ಮತ್ತೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಗುರುಕಿರಣ್
Advertisement
ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ. ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆ ದಿನ ಮಗು ಜನಿಸಿದ್ರೆ ಹೇಗಾಗಿರಬೇಡ, ಆದರೆ ಮೂಗೂರು ಸುಂದರ್ ಅವರು ತಮ್ಮ ಮಗ ಅಮಾವಾಸ್ಯೆ ದಿನ ಹುಟ್ಟಿದ ಎಂದು ತುಂಬಾ ಖುಷಿಯನ್ನ ಪಟ್ಟಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿದ್ದಾರೆ. ನನ್ನ ಮಗ ಅಮಾವಾಸ್ಯೆಯ ದಿನ ಹುಟ್ಟಿದ್ದು ನನಗಂತೂ ತುಂಬಾ ಸಂತಸವನ್ನು ತಂದಿದೆ ಎಂದು ವೇದಿಕೆಯ ಮೇಲೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಪ್ರಭುದೇವ ಅವರಿಗೆ ಹಪ್ಪಳ ಎಂದರೆ ತುಂಬಾ ಇಷ್ಟ. ಇದರಿಂದಾಗಿ ಹಪ್ಪಳದ ಕಥೆಯನ್ನ ಹೇಳಿದ್ದಾರೆ. ನಾವು ಮನೆಯಲ್ಲಿ ಇದ್ದಾಗ ಹಪ್ಪಳವನ್ನು ಜೋಡಿಸಿಕೊಂಡು ತಿನ್ನುತ್ತಿದ್ದೆವು ಎಂದು ನಟ ರಮೇಶ್ ಬಳಿ ಹೇಳಿದ್ದಾರೆ. ಇನ್ನು ಇದೇ ವೇಳೆ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ತಂದೆ ಮಗ ಇಬ್ಬರು ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
`ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ.