ಪ್ರತಿಯೊಬ್ಬರು ತಮ್ಮ ಮದುವೆಯ ದಿನ ಸದಾ ನೆನಪಿನಲ್ಲಿ ಉಳಿಯಬೇಕು ಎಂದು ಬಯಸುತ್ತಾರೆ. ಮದುವೆ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ದೊಡ್ಡ ಕನಸಾಗಿರುತ್ತದೆ. ಮದುವೆಗೂ ಮುನ್ನ ಮಾಡಿದ ಪ್ಲಾನ್ಗಳು ಕೆಲವೊಮ್ಮೆ ಮದುವೆ ಸಮಯದಲ್ಲಿ ಅಂದುಕೊಂಡಂತೆ ನಡೆಯುವುದಿಲ್ಲ. ಸದ್ಯ ಜೋಡಿಯೊಂದು ಮದುವೆಯ ದಿನ ವೇದಿಕೆ ಮೇಲೆ ನೃತ್ಯ ಮಾಡುವಾಗ ಕೆಳಕ್ಕೆ ಬಿದ್ದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ನವ ದಂಪತಿಗಳು ಹುಮ್ಮಸಿನಿಂದ ವೇದಿಕೆ ಮೇಲೆ ನೃತ್ಯ ಮಾಡುತ್ತಾ ಬರುವುದನ್ನು ಕಾಣಬಹುದಾಗಿದೆ. ವೇದಿಕೆ ಮೇಲೆ ಬರುತ್ತಿದ್ದಂತೆ ವಧುವನ್ನು ವರ ತನ್ನ ಬೆನ್ನ ಮೇಲೆ ಎತ್ತಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ವರ ಬ್ಯಾಲೆನ್ಸ್ ತಪ್ಪಿ ಇಬ್ಬರು ವೇದಿಕೆಯಿಂದ ಕೆಳಗೆ ಬೀಳುತ್ತಾರೆ. ಇದನ್ನೂ ಓದಿ: ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ
View this post on Instagram
ಆದರೂ ಇಬ್ಬರು ಮತ್ತೆ ಅದೇ ಉತ್ಸಾಹದಿಂದ ಮೇಲಕ್ಕೆ ಎದ್ದು ವೇದಿಕೆಯತ್ತಾ ಮರಳುತ್ತಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವರೆಗೂ ಸುಮಾರು 2.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ