ನವದೆಹಲಿ: ಉತ್ತರಪ್ರದೇಶದಲ್ಲಿ ಮೆಡಿಕಲ್ ಓದುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ಮದುವೆಯಾಗಿರುವ ವಿಚಾರ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ತನಿಖೆಯ ವೇಳೆ ಬೆಳಕಿಗೆ ಬಂದಿದೆ.
2016ರ ಮೇ ತಿಂಗಳಿನಲ್ಲಿ ಮುಸ್ಲಿಮ್ ಸಂಪ್ರದಾಯದಂತೆ ಐಸಿಸ್ ಉಗ್ರ ಅಮ್ಜಾದ್ ಖಾನ್ ಎಂಬಾತನ್ನು ಅಜಮ್ ಘರ್‍ನ ಜಿಲ್ಲೆಯ ಸರೈ ಮೀರ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೊಬೈಲ್ ಫೋನಿನ ಮೂಲಕ ಮದುವೆಯಾಗಿದ್ದಾಳೆ.
Advertisement
ಅಮ್ಜಾದ್ ಖಾನ್ ಯಾರು?
ರಾಜಸ್ಥಾನ ಮೂಲದ ಅಮ್ಜಾದ್ ಖಾನ್ 2005ರಲ್ಲಿ ಯುಎಇಗೆ ತೆರಳಿದ್ದ. 2014ರಲ್ಲಿ ಅಲ್ಲಿಂದ ಸೌದಿಗೆ ತೆರಳಿದ್ದ ಈತ ಐಸಿಸ್ ಉಗ್ರ ಸಂಘಟನೆಗೆ ಭಾರತೀಯ ವ್ಯಕ್ತಿಗಳನ್ನು ನೇಮಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ. ಉಗ್ರ ಚಟುವಟಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಈತನನ್ನು ಗಡೀಪಾರು ಮಾಡಿತ್ತು. ಈಗ ಎನ್‍ಐಎ ಈತನನ್ನು ವಿಚಾರಣೆ ನಡೆಸುತ್ತಿದ್ದಾಗ ಈ ಮದುವೆಯ ವಿಚಾರ ಬೆಳಕಿಗೆ ಬಂದಿದೆ.
Advertisement
ಲವ್ ಆಗಿದ್ದು ಹೇಗೆ?
ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿದ್ದ ಈತ ಸೌದಿಯಿಂದಲೇ ಭಾರತೀಯರಿಗೆ ಗಾಳ ಹಾಕುತ್ತಿದ್ದ. ಈ ವೇಳೆ ಫೇಸ್‍ಬುಕ್ ಮೂಲಕ ಮೆಡಿಕಲ್ ವಿದ್ಯಾರ್ಥಿನಿ ಪರಿಚಯವಾಗಿದ್ದಾಳೆ. ತನ್ನ ಚಾಟಿಂಗ್ ವೇಳೆ ಈತನ ಧಾರ್ಮಿಕ ಜ್ಞಾನಕ್ಕೆ ಮನಸೋತು ಪ್ರಭಾವಿತಳಾಗಿದ್ದಳು. ನೀನು ಐಸಿಸ್‍ಗೆ ಸೇರ್ಪಡೆಯಾಗಬೇಕು. ಇಸ್ಲಾಮಿಕ್ ಸಂಪ್ರದಾಯದಂತೆ ನೀನು ಸಿರಿಯಾದಲ್ಲಿ ಜೀವನ ಮಾಡಬೇಕು ಎಂದು ಮನವೊಲಿಸಿದ್ದ. ಆದರೆ 2015ರಲ್ಲಿ ಈತ ತನ್ನ ನಿಲುವು ಬದಲಾಯಿಸಿ ನೀನು ಸಿರಿಯಾಗೆ ಹೋಗುವುದು ಬೇಡ, ನನ್ನ ಜೊತೆಗೆ ಸೌದಿಯಲ್ಲಿ ಇದ್ದು ಬಿಡು ಎಂದು ಹೇಳಿದ್ದ.
Advertisement
ಅಮ್ಜಾದ್ ಹೆಚ್ಚಾಗಿ ಫೇಸ್‍ಬುಕ್ ಮತ್ತು ನಿಂಬುಜ್ ಅಪ್ಲಿಕೇಶನ್ ಮೂಲಕ ಸಂವಹನ ನಡೆಸುತ್ತಿದ್ದ. ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಅಧ್ಯಯನ ಮುಗಿದ ಬಳಿಕ ಸೌದಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಳು. ಅಷ್ಟರಲ್ಲಾಗಲೇ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಜಾದ್ ಬಂಧನವಾಗಿದ್ದ.
Advertisement
ಮೆಡಿಕಲ್ ವಿದ್ಯಾರ್ಥಿನಿಯ ಜೊತೆ ಚಾಟ್ ಮಾಡುವ ಮೊದಲೇ ಅಮ್ಜಾದ್ ಖಾನ್‍ಗೆ ಮದುವೆಯಾಗಿತ್ತು. ಎರಡೂ ಮಕ್ಕಳಿದ್ದರೂ ಈತ ವಿದ್ಯಾರ್ಥಿನಿಯನ್ನು ಐಸಿಸ್ ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದ.