ಹೈದರಾಬಾದ್: ಪೋಷಕರು ಆಯ್ಕೆ ಮಾಡಿದ ವ್ಯಕ್ತಿಯನ್ನು ಮದುವೆಯಾಗಲು ಇಚ್ಛಿಸದ ಯುವತಿಯೊಬ್ಬಳು, ಆತನನ್ನು ಮೀಟ್ ಮಾಡಲು ತಿಳಿಸಿ ಸರ್ಪ್ರೈಸ್ ನೀಡುತ್ತೇನೆ ಎಂದು ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
Advertisement
ರಾಮು ನಾಯ್ಡು ಗಾಯಗೊಂಡ ವ್ಯಕ್ತಿಯಾಗಿದ್ದು, ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ನಲ್ಲಿ ವಿಜ್ಞಾನಿಯಾಗಿದ್ದಾರೆ. ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಿಳೆಯ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ – ವೀಡಿಯೋ ವೈರಲ್
Advertisement
Advertisement
ವಿಶಾಖಪಟ್ಟಣಂನ ಚೋಡವರಂನಲ್ಲಿ ಈ ಘಟನೆ ನಡೆದಿದ್ದು, ಶಾಲೆ ಬಿಟ್ಟು ಮನೆಯಲ್ಲಿಯೇ ಇದ್ದ 22 ವರ್ಷದ ಪುಷ್ಪಾಗೆ ರಾಮು ನಾಯ್ಡು ಅವರೊಂದಿಗೆ ಮದುವೆ ನಿಶ್ಚಯಗೊಂಡಿದ್ದು, ಮುಂದಿನ ತಿಂಗಳು ಇಬ್ಬರ ಮದುವೆಯಾಗಬೇಕಿತ್ತು. ಆದರೆ ರಾಮು ಅವರಿಗೆ ಸರ್ಪ್ರೈಸ್ ನೀಡುವುದಾಗಿ ತಿಳಿಸಿ ಭೇಟಿಯಾಗುವಂತೆ ಹೇಳಿದ್ದಾಳೆ.
Advertisement
ರಾಮು ಬರುವ ಮುನ್ನವೇ ಆರೋಪಿ ಮೂರು ಚಾಕುಗಳನ್ನು ಖರೀದಿಸಿದ್ದ ಪುಷ್ಟಾ ನಂತರ ಸರ್ಪ್ರೈಸ್ ನೀಡುತ್ತೇನೆ ಎಂಬ ನೆಪ ಹೇಳಿ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದ ಬಳಿ ಆತನ್ನು ಕರೆದುಕೊಂಡು ಹೋಗಿ ಕುತ್ತಿಗೆಯನ್ನು ಸೀಳಿ ಗಂಭೀರವಾಗಿ ಗಾಯಗೊಳಿಸಿದ್ದಾಳೆ. ಆದರೆ ಯುವತಿ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್.ಗೌತಮಿ ಹೇಳಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ
ನಂತರ ಘಟನೆ ಕುರಿತಂತೆ ವಿಚಾರಣೆ ವೇಳೆ ತನ್ನ ಪೋಷಕರು ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಮದುವೆಗೆ ನಿರಾಕರಿಸಿದರೂ ತನ್ನ ಪೋಷಕರು ಒತ್ತಾಯ ಪೂರ್ವಕವಾಗಿ ಮದುವೆ ಮಾಡುತ್ತಿದ್ದು, ತನ್ನ ಮಾತಿಗೆ ಕಿವಿಗೊಡಲಿಲ್ಲ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ.