ಮದುವೆ ಮನೆಯ ಊಟ ಎಂದರೆ ಎಲ್ಲರಿಗೂ ಇಷ್ಟ. ತರಹೇವಾರಿ ಸಿಹಿತಿಂಡಿಗಳು ಸವಿಯಲು ಸಿಗುತ್ತವೆ. ಇತ್ತೀಚೆಗೆ ಮದುವೆಯನ್ನು ವಿಶೇಷವಾಗಿ ಮಾಡಬೇಕು, ವಿಶೇಷವಾಗಿ ಕಾಣಿಸಿಕೊಳ್ಳಬೇಕು ಎಂದು ವಧು, ವರರು ಪ್ರಯತ್ನಿಸುತ್ತಾರೆ. ಇಲ್ಲೊಂದು ಕುಟುಂಬ ಮರದ ಸ್ಕೇಲ್‍ನಲ್ಲಿ ಮದುವೆಯ ಊಟದ ಮೆನು ಬರೆಸಿರುವುದು ಸಖತ್ ವೈರಲ್ ಆಗಿದೆ.
Advertisement
2013ರಲ್ಲಿ ನಡೆದ ಬೆಂಗಾಲಿ ಮದುವೆಯೊಂದರ ಊಟದ ಮೆನು ಕಾರ್ಡ್ ಇದಾಗಿದೆ. ಸುಶ್ಮಿತಾ ಹಾಗೂ ಅನಿಮೇಶ್ ಅವರ ಮದುವೆಯಲ್ಲಿ ಈ ರೀತಿ ಮೆನು ಕಾರ್ಡ್ ತಯಾರಿಸಲಾಗಿದೆ. ಇದನ್ನೂ ಓದಿ: ಹಸುಗೂಸನ್ನು ಹೊತ್ತೊಯ್ದು ವಾಟರ್ ಟ್ಯಾಂಕ್‍ಗೆ ಹಾಕಿದ ಖತರ್ನಾಕ್ ಕೋತಿಗಳು
Advertisement
মেপে খাবেন, সেই জন্য। #tradition #WeddingMenu pic.twitter.com/F4C3R98Hhq
— Stereotypewriter (@babumoshoy) January 9, 2022
Advertisement
ಮೆನು ಕಾರ್ಡ್‍ನಲ್ಲಿ ಏನಿದೆ?: 30 ಸೆಂ ಮೀ ಉದ್ದದ ಸ್ಕೇಲ್‍ನಲ್ಲಿ ಊಟದ ಮೆನುವನ್ನು ಬರೆಯಲಾಗಿದೆ. ಮೆನುವುನಲ್ಲಿ ಫ್ರೈಡ್ ರೈಸ್, ಮಟನ್ ಮಸಾಲಾ, ಫಿಶ್ ಕಲಿಯಾ ಸೇರದಂತೆ ವಿವಿಧ ರೀತಿಯ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ. ಸ್ಟೀರಿಯೋ ಟೈಪ್‍ರೈಟರ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ಸ್ಕೆಲ್ ಮೆನುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಹಾರ ತಿಂದಿದ್ದಕ್ಕೆ ಇದೇ ಸ್ಕೇಲಿನಿಂದ ತಿರುಗಿಸಿ ಹೊಡೆಯಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆ