ಕೋಲ್ಕತ್ತಾ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಷ್ಟೋ ಮದುವೆ, ಸಭೆ, ಸಮಾರಂಭಗಳು ಮುಂದೂಡಲಾಗಿದೆ. ಆದರೆ ಇಲ್ಲೋಂದು ಜೋಡಿಯು ಅದ್ದೂರಿಯಾಗಿ ಮದವೆ ಆಗಿ ಕುಟುಂಬಸ್ಥರಿಗೆ ಊಟವನ್ನು ಹಾಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
Advertisement
ಸಂದೀಪನ್ ಹಾಗೂ ಅಧಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಈ ಜೋಡಿ ಇದೇ ಜನವರ 24ರಂದು ಹಸೆಮಣೆ ಏರಲು ನಿರ್ಧರಿಸಿದ್ದಾರೆ ಗೂಗಲ್ ಮೀಟ್ ಮೂಲಕ ಸಂಬಂಧಿಕರನ್ನು ಆಹ್ವಾನಿಸಿ, ಊಟವನ್ನು ಝೊಮ್ಯಾಟೊ ಮೂಲಕ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ
Advertisement
Advertisement
ಮದುವೆಯ ಕುರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ವರ ಸಂದೀಪ ಕಳೆದ ವರ್ಷವೇ ಮದುವೆಯಾಗಲು ನಿರ್ಧರಿಸಿದ್ದೆವು. ಈ ಬಾರಿಯೂ ಕೊರೊನಾ ಕಾಡುತ್ತಿದೆ. ಹೀಗಾಗಿ ವರ್ಚುವಲ್ ಮೂಲಕ ಮದುವೆಯಾಗಲು ನಿರ್ಧರಿಸದ್ದೇವೆ. ಮದುವೆಗೆ 450 ಜನರಿಗೆ ಗೂಗಲ್ ಮೀಟ್ ಲಿಂಕ್‍ಅನ್ನು ಕಳುಹಿಸಲಾಗುವುದು. ಊಟವನ್ನು ಝೊಮ್ಯಾಟೊ ಮೂಲಕ ಸಂಬಂಧಿಕರ ಮನೆಗಳಿಗೇ ತಲುಪಿಸುವ ವ್ಯಸವಸ್ಥೆ ಮಾಡಲಾಗಿದೆ ಮದುವೆಯನ್ನು ಗೂಗಲ್ ಮೀಟ್‍ನಲ್ಲಿ ಪ್ರಸಾರ ಮಾಡಲು ಅಧಿತಿ ಹಾಗೂ ಸಂದೀಪ್ ಟೆಕ್ನಿಕಲ್ ಟೀಮ್ ಅನ್ನು ನೇಮಿಸಿದ್ದಾರೆ ಎಂದು ಮದುವೆ ಕುರಿತಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್
Advertisement