ತಿರುವನಂತಪುರಂ: ವ್ಯಕ್ತಿಯೊಬ್ಬರು ತಮ್ಮ ಮಗಳ ಮದುವೆ ಜೊತೆ 5 ಬಡ ಹೆಣ್ಣುಮಕ್ಕಳಿಗೆ ಮದುವೆಯನ್ನು ಮಾಡಿದ್ದಾರೆ. ಈ ಒಳ್ಳೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೇರಳದ ಕಣ್ಣೂರು ಮೂಲದ ಮುಸ್ಲಿಂ ಸಲೀಂ ತನ್ನ ಮಗಳು ರಮೀಸಾ ಮದುವೆ ಜೊತೆಗೆ ವಯನಾಡು, ಎಡಚೆರಿ, ಗುಡಲೂರ್, ಮಲಪ್ಪುರಂ ಮತ್ತು ಮೆಪ್ಪಯ್ಯುರ್ ಮೂಲದ ಬಡ ಕುಟುಂಬದ ಯುವತಿಯರಿಗೆ ಅವರವರ ಧರ್ಮಕ್ಕೆ ಅನುಗುಣವಾಗಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದಾರೆ. ಈ ಮೂಲಕ ಧರ್ಮಕ್ಕಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಸಾರಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಲೀಂ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಲೀಂ ಮಗಳು ರಮೀಸಾ ಸೇರಿದಂತೆ ಎಲ್ಲರೂ ಒಂದೇ ರೀತಿಯ ಸೀರೆಯನ್ನು ಧರಿಸಿದ್ದರು. ಸಲೀಂ ಐದೂ ಹೆಣ್ಣುಮಕ್ಕಳಿಗೂ ತಲಾ 10 ಸವರನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ
ಸಲೀಂ ತನ್ನ ಮಗಳನ್ನು ವರದಕ್ಷಿಣೆ ಕೇಳದ ವ್ಯಕ್ತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರಂತೆ. ಅದರಂತೆ ವರದಕ್ಷಿಣೆ ಪಡೆಯದ ವರನು ಕೂಡ ತನ್ನ ಮಗಳಿಗೆ ಹುಡುಕಿ ಮದುವೆ ಮಾಡಿದ್ದಾರೆ. ಅಲ್ಲದೇ ತಮ್ಮ ಮಗಳ ಮದುವೆ ಜೊತೆ ಬಡ ಹೆಣ್ಣಮಕ್ಕಳಿಗೂ ಮದುವೆ ಮಾಡಬೆಕೇಂದು ಸಲೀಂ ಮೊದಲೇ ನಿರ್ಧಾರ ಮಾಡಿದ್ದರು. ಅವರ ಆಸೆ ಅಂತೆ ತಮ್ಮ ಮಗಳ ಮದುವೆ ದಿನವೇ ಬಡ ಹೇಣ್ಣು ಮಕ್ಕಳಿಗೂ ಉಚಿತವಾಗಿ ಮದುವೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.