ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಲುಲ್ಲಕ ವಿಚಾರಕ್ಕಾಗಿ ಮದುವೆಗಳು (Marriage Cancel) ರದ್ದಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅಂಥದ್ದೇ ಘಟನೆಯೊಂದು ನಡೆದು ಹೋಗಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಹೌದು. ವಧುವಿನ ಕಡೆಯವರು ಊಟದ ಮೆನುವಿನಲ್ಲಿ ಮಟನ್ ಬೋನ್ ಮ್ಯಾರೋ (Mutton Bone Marrow) ಸೇರಿಸಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ನಿಜಾಮಾಬಾದ್‍ನ ವಧು ಹಾಗೂ ಜಗ್ತಿಯಾಳ್ ಮೂಲದ ವರನಿಗೂ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಕಳೆದ ನವೆಂಬರ್ ತಿಂಗಳಲ್ಲಿ ವಧುವಿನ ಮನೆಯಲ್ಲಿ ನೆರವೇರಿತ್ತು. ಆದರೆ ಇದೀಗ ಸಣ್ಣ ವಿಚಾರವೊಂದಕ್ಕೆ ಮದುವೆಯೇ ರದ್ದಾಗಿದೆ.
Advertisement
Advertisement
ನಿಶ್ಚಿತಾರ್ಥದ (Engagement) ಬಳಿಕ ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ಆದರೆ ಈ ಮೆನುವಿನಲ್ಲಿ ಮಟನ್ ಐಟಮ್ ಇರಲಿಲ್ಲ. ಇದನ್ನು ಗಮನಿಸಿದ ವರನ ಕಡೆಯವರು ಮಟನ್ ಬೇಕು ಎಂದು ಹಠಕ್ಕೆ ಬಿದ್ದರು. ಈ ಸಂಬಂಧ ಎರಡೂ ಮನೆಯವರಿಗೂ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.
Advertisement
ಘಟನಾ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ವರನ ಕುಟುಂಬದವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ವಧುವಿನ ಕಡೆಯವರು ನಮಗೆ ಅವಮಾನ ಮಾಡಿದರೆಂದು ಹೇಳಿ ವರನ ಕಡೆಯವರು ಆಕ್ರೋಶಗೊಂಡರು.
Advertisement
ವಧುವಿನ ಕಡೆಯವರು ಉದ್ದೇಶಪೂರ್ವಕವಾಗಿಯೇ ಮಟನ್ ಕರ್ರಿ ಮಾಡಿಲ್ಲ ಎಂದು ವರನ ಕಡೆಯವರು ಆರೋಪಿಸಿದರು. ಈ ಜಗಳ ತಾರಕಕ್ಕೇರಿ ಕೊನೆಗೆ ಮದುವೆಯನ್ನೇ ರದ್ದು ಮಾಡುವುದಾಗಿ ನಿರ್ಧಾರ ಮಾಡಲಾಯಿತು.