– 24 ಗಂಟೆಯಲ್ಲಿ ಕರಾವಳಿಯಲ್ಲಿ ದಾಖಲೆ ಮಳೆ
ಬೆಂಗಳೂರು: ಕರಾವಳಿಯಲ್ಲಿ (Coastal Karnataka) ಮಳೆಯ ಅಬ್ಬರ ಜೋರಾಗಿದ್ದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ತತ್ತರಗೊಂಡಿವೆ. ಮತ್ತೆ ಮೂರು ಗಂಟೆಯ ಒಳಗಡೆ ಭಾರೀ ಮಳೆಯಾಗಲಿದೆ (Heavy Rains) ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
Advertisement
ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆ ಬಿದ್ದಿದ್ದು, ಈಗಾಗಲೇ ಈ ಭಾಗದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಉಡುಪಿಯಲ್ಲಿ (Udupi) 24 ಗಂಟೆಯಲ್ಲಿ 210.5 ಮೀ.ಮೀ ಮಳೆ ಬಿದ್ದ ಪರಿಣಾಮ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
Advertisement
ಕರ್ನಾಟಕದ ಕರಾವಳಿ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ ಇಂದು ಭಾರೀ ಮಳೆಯಾಗಲಿದ್ದು ಐಎಂಡಿ ರೆಡ್ ಅಲರ್ಟ್ (Red Alert) ಘೋಷಣೆ ಮಾಡಿದೆ. ಮುಂದಿನ 4-5 ದಿನ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೇವಲ 6 ಗಂಟೆಯಲ್ಲಿ 300 ಮಿ.ಮೀ ಮಳೆ – ಮಹಾಮಳೆಗೆ ಮುಳುಗಿದ ಮುಂಬೈ
Advertisement
Advertisement
24 ಗಂಟೆಯಲ್ಲಿ ಎಲ್ಲಿ ಎಷ್ಟು ಮಳೆಯಾಗಿದೆ?
ಉತ್ತರ ಕನ್ನಡ : 264 ಮಿ.ಮೀ.
ಉಡುಪಿ: 210.5 ಮಿ.ಮೀ.
ದಕ್ಷಿಣ ಕನ್ನಡ : 168 ಮಿ.ಮೀ.
ಶಿವಮೊಗ್ಗ : 118.5 ಮಿ.ಮೀ.
ವಿಜಯಪುರ : 89 ಮಿ.ಮೀ.
ಬೆಳಗಾವಿ : 87.5 ಮಿ.ಮೀ.
ಚಿಕ್ಕಮಗಳೂರು: 67.5 ಮಿ.ಮೀ.
ಕೊಡಗು: 58.5 ಮಿ.ಮೀ.