ಬೆಂಗಳೂರು: ಹವಾಮಾನ ಇಲಾಖೆಯು ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿಗರಿಗೆ ವೆದರ್ ಬಾಂಬ್ ಹಾಕಿತ್ತು. ವೆಬ್‍ಸೈಟ್‍ನಲ್ಲಿ ಸೋಮವಾರ ಗರಿಷ್ಠ ಬಿಸಿಲಿನ ತಾಪಮಾನ 99.9 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆಯಾಗುತ್ತೆ ಎಂದು ದಾಖಲಾಗಿತ್ತು. ಈಗ ಇದರ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಕಣ್ತಪ್ಪಿನಿಂದ ಈ ಎಡವಟ್ಟು ಆಗಿರೋದಾಗಿ ಇಲಾಖೆ ಸ್ಪಷ್ಟನೆ ನೀಡಿದೆ. ವೆಬ್ ಸೈಟ್ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಜನ ಕಾಲ್ ಮೇಲೆ ಕಾಲ್ ಮಾಡಿ ಈ ಸುದ್ದಿ ನಿಜನಾ ಎಂದು ಗಾಬರಿಯಾಗಿ ಪ್ರಶ್ನೆಗಳ ಸುರಿಮಳೆಗೈದಿದ್ದರು. “ಏನ್ರೀ ಏಪ್ರಿಲ್ ಫೂಲ್ ಮಾಡ್ತೀರ ಅಂದಾಗ” ಇದು ಕಣ್ತಪ್ಪಿನಿಂದ ಆಗಿದ್ದು ತಪ್ಪು ಯಾರೂ ಮಾಡಲ್ಲ ಬಿಡಿ ಎಂದು ಉತ್ತರ ನೀಡಿದ್ದಾರೆ.
Advertisement
Advertisement
ಹಾರ್ಟ್‍ಬ್ರೇಕಿಂಗ್ ಸುದ್ದಿ ಏನು?
ಶುಕ್ರವಾರ ಬೆಳ್ಳಂಬೆಳಗ್ಗೆ ನಿದ್ದೆಯಿಂದ ಎದ್ದು ಬೆಂಗಳೂರು ಜನ ಟೀ-ಕಾಫಿ ಕುಡಿಯೋ ಹೊತ್ತಿನಲ್ಲಿ ಹವಾಮಾನ ಇಲಾಖೆ ಹಾರ್ಟ್ ಬ್ರೇಕಿಂಗ್ ಸುದ್ದಿಯನ್ನು ವೆಬ್ ಸೈಟ್‍ನಲ್ಲಿ ಅಪ್ಡೇಟ್ ಮಾಡಿತ್ತು.
Advertisement
ಇದೇ ಬರುವ ಸೋಮವಾರ ಬೆಂಗಳೂರು ಉಷ್ಣಾಂಶ ಶೇ 99.99 ಡಿಗ್ರಿ ಸೆಲ್ಸಿಯಸ್‍ನಷ್ಟು ಇರುತ್ತದೆ ಎಂದು ವೆಬ್‍ಸೈಟ್‍ನಲ್ಲಿ ಹಾಕಿದೆ. ಜನ ಈ ಸುದ್ದಿ ನೋಡಿ ಗಾಬರಿಗೊಂಡಿದ್ದರು. ಅಲ್ಲದೆ ಬೆಂಗಳೂರಿನ ಉಷ್ಣಾಂಶ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಇದೆ. ಈ ಬಿಸಿಲನ್ನೇ ನಮ್ಮ ಕೈಯಲ್ಲಿ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತದ್ರಲ್ಲಿ ಇಲಾಖೆಯ ಈ ಸುದ್ದಿ ನೋಡಿ ಶಾಕ್ ಆಗಿದ್ದರು.
Advertisement
ಕೊನೆಗೆ ದಿನಾಂಕ ನೋಡಿದಾಗ ಏಪ್ರಿಲ್ 1 ಅಂದ್ರೆ ಇದು ಹವಾಮಾನ ಇಲಾಖೆ ಅಡ್ವಾನ್ಸ್ ಆಗಿಯೇ ಏಪ್ರಿಲ್ ಫೂಲ್ ಮಾಡೋಕೆ ಈ ಸುದ್ದಿ ಹಾಕಿದೆ ಎಂದು ಜನ ತಿಳಿದಿದ್ದರು.