ಬೆಂಗಳೂರು: ಹಾಫ್ ಹೆಲ್ಮೆಟ್ ಬಗ್ಗೆ ಅಘಾತಕಾರಿ ಸುದ್ದಿ ಹೊರಬಿದ್ದಿದೆ. ಹಾಫ್ ಹೆಲ್ಮೆಟ್ ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿದೆ ಎಂಬ ಅಘಾತಕಾರಿ ಸುದ್ದಿ ತಜ್ಞ ವೈದ್ಯರ ಅಧ್ಯಯನದಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಹಾಫ್ ಹೆಲ್ಮೆಟ್‍ಗೆ ಬ್ರೇಕ್ ಹಾಕಲು ಅಖಾಡಕ್ಕಿಳಿದ್ದಿದ್ದಾರೆ.
Advertisement
ಅಪಘಾತದಲ್ಲಿ ಮೃತಪಟ್ಟಿರೋ ಬೈಕ್ ಸವಾರರು ಹಾಫ್ ಹೆಲ್ಮೆಟ್ ಹಾಕಿರೋದ್ರಿಂದಲ್ಲೆ ಅನ್ನೋದು ದೃಢಪಟ್ಟಿದೆ. ಯಾಕೆ ಹಾಫ್ ಹೆಲ್ಮೆಟ್ ಬೈಕ್ ಸವಾರರ ಪಾಲಿಗೆ ಮಾರಕವಾಗ್ತಾಯಿದೆ ಅನ್ನೋದನ್ನ ಅಧ್ಯಾಯನ ಮಾಡಿದಾಗ ಹಾಫ್ ಹೆಲ್ಮೆಟ್ ಅಪಘಾತಕ್ಕೆ ಒಳಗಾದ ಬೈಕ್ ಸವಾರನ ಮೇದುಳು ಬಳ್ಳಿಗೆ ಬಲವಾದ ಪೆಟ್ಟುಕೊಡ್ತಾ ಇದೆ. ಅದು ಚಿಕಿತ್ಸೆ ನೀಡಿದ್ರು ಫಲಪ್ರದವಾಗೋದಿಲ್ಲ. ಹಾಗಾಗಿ ಬೈಕ್ ಸವಾರರು ಅಪಘಾತದಲ್ಲಿ ಹೆಚ್ಚು ಮೃತಪಡ್ತಿದ್ದಾರೆ ಅನ್ನೋ ಸತ್ಯ ಸಂಗತಿ ಹೊರಬಿದ್ದಿದೆ.
Advertisement
Advertisement
ಹಾಫ್ ಹೆಲ್ಮೆಂಟ್‍ನಿಂದಾಗುವ ಅನಾಹುತದ ಬಗ್ಗೆ ಸಂಚಾರಿ ಪೊಲೀಸರು, ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಗರದಾದ್ಯಂತ ಬೈಕ್ ಸವಾರರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ಮನವಿ ಮಾಡಿದ್ರು. ಕೆಎಸ್ ಲೇಔಟ್‍ನಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿಮ ನೂರಕ್ಕು ಹೆಚ್ಚು ಹಾಫ್ ಹೆಲ್ಮೆಟ್‍ಗಳನ್ನು ರಸ್ತೆಯಲ್ಲಿ ಜೋಡಿಸಿ, ಲಾರಿ ಹರಿಸಿ ನಾಶ ಮಾಡಿದ್ರು. ಇದನ್ನೂ ಓದಿ: ಜೈಲಿನಲ್ಲೇ ವೈಭೋಗ – ಜೆಸಿಬಿ ನಾರಾಯಣನ ರಾಯಲ್ ಜೈಲ್ ಲೈಫ್ ಸ್ಟೋರಿ
Advertisement
ಪೊಲೀಸರ ಜಾಗೃತಿ ಕಾರ್ಯಕ್ರಮಕ್ಕೆ ಕೆಲವರು ಸ್ಪಂದಿಸಿದ್ರೆ, ಮತ್ತೆ ಕೆಲ ಬೈಕ್ ಸವಾರರು ಪೊಲೀಸರ ಜೊತೆಯೇ ವಾಗ್ವಾದಕ್ಕಿಳಿದ ದೃಶ್ಯ ಕಂಡು ಬಂತು. ಒಟ್ಟಾರೆ ಹಾಫ್ ಹೆಲ್ಮೆಟ್ ಧರಿಸಿ ಜೀವಕ್ಕೆ ಆಪತ್ತು ತಂದುಕೊಳ್ಳುವ ಬದಲು, ಸೇಫ್ ಮತ್ತು ಗುಣಮಟ್ಟದ ಹೆಲ್ಮೆಟ್ ಬಳಸಿ.