ಲಕ್ನೋ: ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಉತ್ತರಪ್ರದೇಶದ ಮೆಹಮದ್‍ಪುರದಲ್ಲಿ ನಡೆದಿದೆ.
ಸೈಫ್ ಅಲಿ (25) ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿಯಾಗಿದ್ದಾನೆ. ಈತನಿಗೆ ಬೇರೆ ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಇದರಿಂದಾಗಿ ಊರಿನಿಂದ ಹೋಗುವ ಮೊದಲು ಗೆಳತಿಯನ್ನು ಒಮ್ಮೆ ಭೇಟಿಯಾಗಲು ಬಯಸಿದ್ದ. ಆದರೆ ಮೆಹಮದ್‍ಪುರದಲ್ಲಿ ಹೆಚ್ಚು ಜನರು ಪರಿಚಯಸ್ಥರೇ ಇದ್ದಿದ್ದರಿಂದ ಆತ ಗೆಳತಿಯನ್ನು ಭೇಟಿ ಮಾಡುವಾಗ ಯಾರಾದರೂ ನೋಡಿ ಏನನ್ನಾದರೂ ಹೇಳುತ್ತಾರೆ ಎನ್ನುವ ಭಯದಿಂದ ತನ್ನ ಗುರುತನ್ನು ಮರೆಮಾಚಲು ಬುರ್ಕಾವನ್ನು ಧರಿಸುವ ಯೋಚನೆಯನ್ನು ಮಾಡಿಕೊಂಡ. ಇದನ್ನೂ ಓದಿ: ನಮ್ಗೆ ಮೊಟ್ಟೆ ಎಸೆಯೋಕೆ ಬರಲ್ವಾ, ನಾವು ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ: ಸಿದ್ದರಾಮಯ್ಯ
ಸೈಫ್ ಅಲಿ ಮಾರನೇ ದಿನ ತನ್ನ ಯೋಚನೆಯಂತೆ ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗಿದ್ದ. ಆದರೆ ಅಲ್ಲಿದ್ದ ಸ್ಥಳೀಯರಿಗೆ ಬುರ್ಕಾ ಧರಿಸಿದವನು ಹುಡುಗ ಎಂದು ತಿಳಿದು ಏನೋ ತೊಂದರೆ ಮಾಡಲು ಬಂದಿದ್ದಾರೆ ಎನ್ನುವ ಅನುಮಾನ ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ವೀಡಿಯೋವನ್ನು ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ ಹೋರಾಟಗಾರರಲ್ಲ, ಸಾವರ್ಕರ್ ಒಬ್ಬ ಮೂಲಭೂತವಾದಿ: ಯತೀಂದ್ರ ಸಿದ್ದರಾಮಯ್ಯ