ನವದೆಹಲಿ: ಕೇಸರಿ ಶಾಲು (Saffron Shawl) ಧರಿಸುವುದು ನಂಬಿಕೆಯ ಮುಗ್ಧ ಅಭಿವ್ಯಕ್ತಿಯಲ್ಲ, ಕೇಸರಿ ಶಾಲು ಧರಿಸುವುದು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನವಾಗಿದೆ. ರುದ್ರಾಕ್ಷಿ, ನಾಮ, ಇತ್ಯಾದಿಗಳು ನಂಬಿಕೆಗಳಿಗೆ ಮುಗ್ಧ ಅಭಿವ್ಯಕ್ತಿಗಳಿಗೆ ಸಂವಿಧಾನದ 25ನೇ ವಿಧಿಯಡಿ ರಕ್ಷಣೆ ಇದೆ. ಕೇಸರಿ ಶಾಲು ಧರಿಸುವುದಕ್ಕಿಲ್ಲ ಎಂದು ಹಿರಿಯ ವಕೀಲ ದೇವದತ್ ಕಾಮತ್ (Devadatt Kamat) ವಾದ ಮಂಡಿಸಿದ್ದಾರೆ.
ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ (Hijab Row) ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ (Supreme Court) ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಕಾಮತ್ ತಮ್ಮ ಎರಡನೇ ದಿನದ ವಾದವನ್ನು ಮುಂದಿಟ್ಟಿದ್ದಾರೆ. ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠ ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ: ಶಾಲಾ ವಿದ್ಯಾರ್ಥಿಗಳನ್ನು ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ – ಸುಪ್ರೀಂಕೋರ್ಟ್‌ನಲ್ಲಿ 2 ಗಂಟೆ ಮಹತ್ವದ ವಿಚಾರಣೆ
Advertisement
Advertisement
ಎರಡನೇ ದಿನದ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಭಾರತೀಯ ಸಂವಿಧಾನದ 25 ನೇ ವಿಧಿಯ ಪ್ರಕಾರ ನಾನು ನನ್ನ ಹಕ್ಕನ್ನು ಚಲಾಯಿಸುವ ವಾತಾವರಣವನ್ನು ಸೃಷ್ಟಿಸುವುದು ನಿಮ್ಮ ಕರ್ತವ್ಯ. ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಒತ್ತಾಯಿಸಿದ ನಂತರ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಹೇಳಿದ್ದರು. ಹೀಗೆ ಒತ್ತಡಕ್ಕೆ ಒಳಗಾಗಿ ಸರ್ಕಾರ ಆದೇಶಗಳನ್ನು ಮಾಡಬಹುದೇ ಎಂದು ಪ್ರಶ್ನಿಸಿದರು.
Advertisement
ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವ ಆತಂಕವಿದ್ದ ಮಾತ್ರಕ್ಕೆ ಹಿಜಬ್ ಅನ್ನು ಹೇಗೆ ನಿಷೇಧಿಸಬಹುದು. ಕೆಲವು ಚಲನಚಿತ್ರಗಳ ವಿರುದ್ಧ ಆಕ್ಷೇಪ ಕೇಳಿ ಬಂದಾಗ ‘ಹೆಕ್ಲರ್ಸ್ ವೀಟೋ’ ಜಾರಿಗೊಳಿಸುವುದಿಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್ ಹೇಳಿದೆ. ಹಿಜಬ್ ಧರಿಸಿದ ಹುಡುಗಿಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ವಾದಿಸಿದರು.
Advertisement
ಇದಕ್ಕೆ ಮಧ್ಯಪ್ರದೇಶ ಮಾಡಿದ ನ್ಯಾ.ಹೇಮಂತ್ ಗುಪ್ತಾ
ಹಿಜಬ್ ಧರಿಸಿದ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಕ್ಕೆ ಶಾಲೆಗಳಿಂದ ಲಿಖಿತ ಆದೇಶ ಇದಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲ ಕಾಮತ್ ಯಾವುದೇ ಲಿಖಿತ ಆದೇಶಗಳಿಲ್ಲ. ಏಕತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸಮವಸ್ತ್ರವನ್ನು ಧರಿಸಿ ಎಂದು ಸರ್ಕಾರ ಹೇಳುತ್ತದೆ ಎಂದರು. ಇದಕ್ಕೆ ನಿಮ್ಮ ಸಮಸ್ಯೆ ಏನು ಎಂದು ನ್ಯಾ. ಧುಲಿಯಾ ಪ್ರಶ್ನಿಸಿದರು. ಇದಕ್ಕೆ ಪೂರಕ ಪ್ರಶ್ನೆ ಇಟ್ಟ ನ್ಯಾ. ಹೇಮಂತ್ ಗುಪ್ತಾ, ಸರ್ಕಾರ ಸ್ಕಾರ್ಫ್ ನಿಷೇಧವು ಆರ್ಟಿಕಲ್ 25 ರ ಉಲ್ಲಂಘನೆಯಲ್ಲ ಎಂದು ಹೇಳುತ್ತದೆ. ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದರು. ಇದನ್ನೂ ಓದಿ: Hijab Row: ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲ್ಲ ಎಂದ ಶಿಕ್ಷಣ ಸಚಿವರ ನಿಲುವು ಖಂಡನೀಯ: ಕ್ಯಾಂಪಸ್ ಫ್ರಂಟ್
ಇದಕ್ಕೆ ಉತ್ತರಿಸಿ ದೇವದತ್ ಕಾಮತ್, ಕೇಸರಿ ಶಾಲು ಧರಿಸುವುದು ನಂಬಿಕೆಯ ಮುಗ್ದ ಪ್ರದರ್ಶನವಲ್ಲ. ರುದ್ರಾಕ್ಷಿ, ನಾಮ ಇತ್ಯಾದಿಗಳು ನಂಬಿಕೆಯ ಮುಗ್ಧ ಪ್ರದರ್ಶನವಾಗಿದೆ. ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯ ಪರಸ್ಪರ ಹೊರಗಿಡುವುದು ಎಂದು ಹೈಕೋರ್ಟ್ ಹೇಳಿದೆ. ಕಾನೂನಿನಡಿಯಲ್ಲಿ ತಲೆ ಸ್ಕಾರ್ಫ್ ಧರಿಸಲು ನಿರ್ಬಂಧವಿದೆಯೇ ಎಂದರೇ ಅಂತಹ ಯಾವುದೇ ನಿಯಮಗಳಿಲ್ಲ.
ಸರ್ಕಾರದ ಸಾರ್ವಜನಿಕ ಆದೇಶಗಳು ನೈಜವಾಗಿರಬೇಕು ಅಥವಾ ನೈಜತೆಗೆ ಸಮೀಪದಲ್ಲಿರಬೇಕು, ದೂರವಿರಬಾರದು. ಸರ್ಕಾರ ಆದೇಶ ಗಂಗಾಜಲದಂತೆ ಸ್ಪಷ್ಟವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆದರೆ ಅದು ಸಂಪೂರ್ಣವಾಗಿ ಕೆಸರುಮಯವಾಗಿದೆ ಎಂದು ನಾನು ಹೇಳುತ್ತೇನೆ. ಹಿಂದೂ ಧರ್ಮದಲ್ಲಿ ನಾವು ದೇವತೆಗಳನ್ನು ಪೂಜಿಸುತ್ತೇವೆ. ಜೇಬಿನಲ್ಲಿ ಕೃಷ್ಣ ಅಥವಾ ರಾಮನ ಫೋಟೋವನ್ನು ಇಟ್ಟುಕೊಂಡಿರುತ್ತಾರೆ. ಫೋಟೋವನ್ನು ತೆಗೆದುಕೊಂಡು ಹೋಗುತ್ತಿದ್ದರೇ ಅದು ನನಗೆ ಭದ್ರತೆಯನ್ನು ನೀಡಿತು ಎನ್ನುವುದು ನಂಬಿಕೆ. ಇದು ಧಾರ್ಮಿಕ ಸ್ವಾತಂತ್ರ್ಯ, ನಂಬಿಕೆ ಅಥವಾ ಆತ್ಮಸಾಕ್ಷಿಯಾಗಿದೆ. ಇದನ್ನೂ ಓದಿ: Hijab Row: ಅನ್ಯ ಧರ್ಮೀಯರು ಜಾತ್ರೆಯಲ್ಲಿ ವ್ಯಾಪಾರ ಮಾಡಬಾರದು – ಕಾಪು ಮಾರಿಗುಡಿಗೆ ಪತ್ರ
ಅಲ್ಲದೇ ಸರ್ಕಾರ ಶಾಲಾ ಆಡಳಿತ ಮಂಡಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರ ನೀಡಿದೆ. ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ? ಆಡಳಿತ ಮಂಡಳಿಯಲ್ಲಿ ಸ್ಥಳೀಯ ಶಾಸಕರಿದ್ದಾರೆ. ಪೋಷಕರು, ಇತರೆ ಪ್ರಮುಖರು ಸದಸ್ಯರಾದರು, ಸ್ಥಳೀಯ ಶಾಸಕರು ಅಧ್ಯಕ್ಷರಾಗಿದ್ದಾರೆ. ಇದರ ಪರಿಣಾಮಗಳೇನು ಎಂದು ದಯವಿಟ್ಟು ನ್ಯಾಯಾಲಯ ಅರ್ಥ ಮಾಡಿಕೊಳ್ಳಬೇಕು ಎಂದರು. ಇದಕ್ಕೆ ಮರು ಪ್ರಶ್ನೆ ಮಾಡಿದ ನ್ಯಾ.ಹೇಮಂತ್ ಗುಪ್ತಾ, ಹಾಗಾದರೆ ಅಲ್ಲಿ ಜನಪ್ರತಿನಿಧಿಗಳು ಇರುವುದು ನಿಮಗೆ ಇಷ್ಟವಿಲ್ಲವೇ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಕಾಮತ್, ಶಾಸಕರು ರಾಜ್ಯ ಸರ್ಕಾರದ ಅಧೀನದ ಅಧಿಕಾರವಲ್ಲ ಎಂದು ಈ ಹಿಂದೆ ನ್ಯಾಯಾಲಯ ಹೇಳಿದೆ. ಈ ಶಾಸಕರು ಯಾವುದು ನೈತಿಕತೆ ಎಂಬುದನ್ನು ನಿರ್ಧರಿಸಬಹುದೇ? ಸಂಪೂರ್ಣ ಕಾನೂನು ಬಾಹಿರವಾದ ಇಂತಹ ನಿರ್ಧಾರಗಳ ಅಗಾಧತೆಯನ್ನು ಕೋರ್ಟ್ ಅರ್ಥ ಮಾಡಿಕೊಳ್ಳಬೇಕು. ಇಡೀ ಪ್ರಕರಣದಲ್ಲಿ ಇನ್ನು ಹಲವು ಮಹತ್ವದ ಅಂಶಗಳಿದ್ದು, ಇದನ್ನು ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿ ವಾದ ಅಂತ್ಯಗೊಳಿಸಿದರು.