ಬೆಳಗಾವಿ: ಮುಸ್ಲಿಂ ವೇಷಧರಿಸಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಆಂದ್ರಪ್ರದೇಶ ಮೂಲದ ಐವರನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿಯ ವೀರಭದ್ರ ನಗರದಲ್ಲಿ ಆಂದ್ರ ಮೂಲದ ಐವರು ಪ್ರತಿ ಮನೆಗಳನ್ನು ನೋಡುತ್ತಾ ಅನುಮಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಪದೇ ಪದೇ ಒಂದೇ ಏರಿಯಾದಲ್ಲಿ ಓಡಾಡೋದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಾವು ಆಂದ್ರ ಮೂಲದ ಹಿಂದುಗಳು. ಹೊಟ್ಟೆಪಾಡಿಗಾಗಿ ನಾವು ಮುಸ್ಲಿಂ ವೇಷವನ್ನು ಧರಿಸಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಬಾವಿಗೆ ಬಿದ್ದ ಅತಿಥಿಗಳು – 11 ಮಂದಿ ಸಾವು
ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಐವರನ್ನು ಹಿಡಿದು ಥಳಿಸಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ವಶಕ್ಕೆ ಪಡೆದು ಐವರನ್ನು ಪ್ರಾಥಮಿಕ ವಿಚಾರಣೆ ನಡೆಸಿ ಪೊಲೀಸ್ ಠಾಣೆಗೆ ಕರೆದ್ಯೊಯ್ದಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ಗೆಂದು ನದಿಗೆ ಹಾರಿ ಪ್ರಾಣ ಬಿಟ್ಟ ಯುವಕ