ಬೆಂಗಳೂರು: ಕೇಂದ್ರ ಸರ್ಕಾರದಿಂದ (Central Government) ದುರುಪಯೋಗ ಆಗುವುದನ್ನು ತಡೆಯಲು ಸಿಬಿಐಗೆ (CBI) ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (Cheluvarayaswamy) ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಎಲ್ಲರ ಮೇಲೆ ಮುಗಿಬೀಳ್ತಿದೆ. ಕೇಂದ್ರ ಸರ್ಕಾರ ತನ್ನ ಕೆಲಸ ಮಾಡಬೇಕು. ಇದು ಒಕ್ಕೂಟ ವ್ಯವಸ್ಥೆ. ಸಿಬಿಐ ತರಹದ ಸಂಸ್ಥೆಗಳ ದುರುಪಯೋಗ ಆಗ್ತಿದೆ. ಹೀಗಾಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ದುರ್ಗಾ ಪೂಜೆಯಂದು ರಜೆ ನೀಡಬಾರದು, ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದು: ಬಾಂಗ್ಲಾ ಹಿಂದೂಗಳಿಗೆ ಎಚ್ಚರಿಕೆ
ಕೋಳಿವಾಡ (K.B Koliwada) ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ (Congress) ಇದ್ದಾಗ ತನಿಖಾ ಸಂಸ್ಥೆಗಳ ದುರುಪಯೋಗ ಆಗಿರಲಿಲ್ಲ, ಈಗ ಆಗ್ತಿದೆ. ಕೋಳಿವಾಡ ಅವರು ಯಾಕೆ ಆ ರೀತಿ ಹೇಳಿದರು ಎನ್ನುವುದನ್ನು ಅವರೇ ಹೇಳಬೇಕು. ಎಲ್ಲರನ್ನೂ ಕಂಟ್ರೋಲ್ ಮಾಡಕ್ಕಾಗಲ್ಲ. ಸಿದ್ದರಾಮಯ್ಯ ಜತೆ ನಮ್ಮ ಸಚಿವರು, ಶಾಸಕರು, ಹೈಕಮಾಂಡ್‌ವರು ಇದ್ದಾರೆ. ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಲ್ಲ, ಅವರೇ ಮುಂದುವರೀತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಪರಿಷತ್ ಸದಸ್ಯ ಸಲೀಂ ಅಹಮದ್ (Saleem Ahmed) ಮಾತನಾಡಿ, ರಾಜ್ಯಪಾಲರಿಗೆ ಸಂಪುಟದಲ್ಲೇ ಚರ್ಚಿಸಿ ಉತ್ತರ ಕೊಡಬೇಕು. ಈ ತೀರ್ಮಾನ ಒಳ್ಳೆಯದು, ಸ್ವಾಗತಾರ್ಹ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡಲ್ಲ, ಕೊಡಲೂಬಾರದು. ಕೋಳಿವಾಡ ಹೇಳಿಕೆ ಅವರ ವೈಯಕ್ತಿಕವಾದ ಹೇಳಿಕೆಯಾಗಿದೆ. ಆದರೆ ನಮ್ಮ ನಾಯಕರು, ಕಾರ್ಯಕರ್ತರು ಸಿಎಂ ಪರ ಒಟ್ಟಾಗಿ ಇದ್ದೀವಿ ಎಂದರು.ಇದನ್ನೂ ಓದಿ: ಸ್ವಚ್ಛ ಭಾರತ್ ಮಿಷನ್ ಯೋಜನೆ – ಕೋಲಾರ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್!