ಮೈಸೂರು: ಸದ್ಯ ರಾಜ್ಯಾದ್ಯಂತ ಬಿಜೆಪಿ – ಕಾಂಗ್ರೆಸ್‌ನ ನಾಯಕರು ಪರಸ್ಪರ ಕಿಡಿ ಕಾರುತ್ತಿದ್ದಾರೆ. ಬುಲ್ಡೋಜರ್ ನೀತಿ, ಹುಬ್ಬಳ್ಳಿ ಗಲಭೆ, ಹಿಜಬ್ ವಿವಾದ, ಪಿಎಸ್‌ಐ ನೇಕಮಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ನಾಯಕರೂ ಸಹ ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
Advertisement
ಇಂತಹ ಹೊತ್ತಿನಲ್ಲೇ ಬಿಜೆಪಿ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಸ್ವ ಪಕ್ಷದ ನೀತಿಗಳ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವ ವಿಶ್ವನಾಥ್, ಚುನಾವಣೆ ಸಮೀಪ ಇರುವಾಗಲೇ ಸಿದ್ದರಾಮಯ್ಯ ಪರ ಮಾತನಾಡಿರುವುದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡ್ತಿದ್ರು: ಸಿಎಂ ಇಬ್ರಾಹಿಂ
Advertisement
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರಿಗೆ ಹುಣಸೂರು ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಆಹ್ವಾನಿಸುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ರೆ ನಾವು ಗೆಲ್ಲಿಸುತ್ತೇವೆ. ಅಂತಹ ಶೆಟ್ರು ಮಂಜನನ್ನೆ (ಎಚ್.ಪಿ.ಮಂಜುನಾಥ್) ಗೆಲ್ಸಿದ್ದೀವಿ, ಇನ್ನೂ ನಿಮ್ಮನ್ನ ಗೆಲ್ಲಿಸಲ್ವಾ? ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಡ್ ಬುಷ್ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿದ ಡಾಲಿ ಧನಂಜಯ್
Advertisement
Advertisement
ರಾಜ್ಯದಲ್ಲಿ ಸಿಎಂ ಆದವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ಏಕೆಂದರೆ ಸಿದ್ದರಾಮಯ್ಯ 5 ವರ್ಷಗಳ ಕಾಲ ಯಶಸ್ವಿ ಆಡಳಿತ ಕೊಟ್ಟಿದ್ದಾರೆ. ಅಂತವರು ವಿಧಾನಸಭೆಯಲ್ಲಿರಬೇಕು. 5 ವರ್ಷಗಳ ಅನುಭವ ಹಂಚಿಕೊಳ್ಳಲು ಅನುಕೂಲ ಆಗುತ್ತದೆ. ನಾನು ಈ ಹಿಂದೆಯೇ ಅವರಿಗೆ ಹುಣಸೂರಿನಿಂದ ಸ್ಪರ್ಧಿಸಲಿ ಅಂತ ಹೇಳಿದ್ದೆ ಎಂದು ವಿವರಿಸಿದರು.