ಕೋಲಾರ: ಕ್ಷೇತ್ರದಲ್ಲಿ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಎಂದು ಅವರು ಘೋಷಣೆ ಮಾಡಲಿ ಮಾಡದೆ ಇರಲಿ, ಅವರು ಬರಲಿ ಬರದೆ ಇರಲಿ, ಅದು ನಮಗೆ ಬೇಡವಾದ ವಿಷಯ. ಆದರೆ ನಾವು ಕೋಲಾರ (Kolar) ವನ್ನ ಗೆದ್ದೇ ಗೆಲ್ಲುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ (Muniratna) ಹೇಳಿದ್ರು.
Advertisement
ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿಯ ಬೂತ್ ವಿಜಯ ಅಭಿಯಾನ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರ ಸಂಬಂಧ ಮಾತನಾಡಿದ ಅವರು, ರಾಜಕೀಯ ಎನ್ನುವುದು ಯಾರೂ ಊಹೆ ಮಾಡಲಾಗುವುದಿಲ್ಲ, ನಮ್ಮಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿ ಇದ್ದಾರೆ, ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಗಳಾಗಿದ್ದವರು ಬಂದು ಗೆಲ್ತಾರೆ ಎನ್ನುವುದು ಭ್ರಮೆ ಎಂದು ಟಾಂಗ್ ನೀಡಿದ್ರು. ಅಲ್ಲದೆ ಅವತ್ತಿಗೆ ಸಿದ್ದುನ್ಯಾಮಗೌಡರು ಸಣ್ಣವರಾಗಿದ್ದು, ಹೆಗಡೆ ಅವರನ್ನ ಸೋಲಿಸಿದ್ರು, ಹಾಗಾಗಿ ನಾನೇ ಗೆದ್ದು ಬಿಡುವೆ ಎಂದುಕೊಳ್ಳುವುದು ಭ್ರಮೆ ಎಂದು ಹೇಳಿದ್ರು. ಇದನ್ನೂ ಓದಿ: ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ
Advertisement
Advertisement
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತನಾಡಿದ ಅವರು ಅದು ಮುಖ್ಯ ಮಂತ್ರಿಗಳಿಗಿರುವ ಪರಮಾಧಿಕಾರ ಅವರು ಯಾವ ನಿರ್ಧಾರವನ್ನಾದರೂ ತೆಗದುಕೊಳ್ಳಬಹುದು ಜಾರಕಿಹೊಳಿ ಅವರು ಒಳ್ಳೆಯ ವ್ಯಕ್ತಿ, ಶಾಸಕ, ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ ಕೆಲವು ಘಟನೆಗಳು, ಕುತಂತ್ರದ ಸಂಚು ಹಾಗಾಗಿ ಅವರು ಮೋಸ ಹೋಗಿದ್ದಾರೆ ಅವರಿಬ್ಬರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೆ ಅಡ್ಡಿಯಿಲ್ಲ. ಮುಖಂಡರು, ಶಾಸಕರು ಪಕ್ಷಾಂತರ ವಿಚಾರಕ್ಕೆ ಮಾತನಾಡಿದ ಅವರು ಬಿಜೆಪಿಗೆ ಬರುವವರು ಕ್ಯೂ ಹೆಚ್ಚಿಗೆ ಇದೆ, ಯಾರನ್ನ ತಗೊಬೇಕು ಯಾರನ್ನ ತಗೊಬಾರದು ಎಂಬ ಆಯ್ಕೆ ನಮ್ಮಲ್ಲಿದೆ. ಚುನಾವಣಗೆ ಮೊದಲು ಹಾಗೂ ಚುನಾವಣೆ ಆದ ನಂತರ ಏನೂ ಬೇಕಾದರೂ ಆಗಬಹುದು ಎಂದ್ರು.
Advertisement
ಇದೇ ವೇಳೆ ಅರವಿಂದ ಲಿಂಬಾವಳಿ (Aravind Limbavali) ಹೆಸರು ಬರೆದಿಟ್ಟು, ಉದ್ಯಮಿ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವ್ಯಕ್ತಿಯಾದರೂ ಕಾನೂನು ಏನು ಮಾಡಬೇಕೋ ಅದು ಮಾಡುತ್ತೆ, ಉದ್ಯಮಿ ಇರಬಹುದು ರಾಜಕಾರಣಿ ಇರಬಹುದು, ಅದರಲ್ಲಿ ನಮ್ಮ ಹಸ್ತಕ್ಷೇಪವೇನಿಲ್ಲ, ಯಾರೂ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಂತೆ ಈಶ್ವರಪ್ಪ ಪ್ರಕರಣದಲ್ಲಿ ಸತ್ಯಕ್ಕೆ ದೂರವಾಗಿದೆ, ಬಿ ರಿಪೋರ್ಟ್ ಬಂದಾಗಿದೆ ಎಂದು ಹೇಳಿದ್ರು.