ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh Election Result) ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಾವು ಮತ್ತೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತೇವೆ ಎಂದು ಸಚಿವ, ಬಿಜೆಪಿ ನಾಯಕ ನರೋತ್ತಮ್ ಮಿಶ್ರಾ (Narottam Mishra) ಹೇಳಿದ್ದಾರೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗ್ಗೆ 8 ಗಂಟೆಯಿಂದ ಮತಣಿಕೆ ನಡೆಯಲಿದೆ ಎಂದರು.
Advertisement
Advertisement
ಈ ಬಾರಿಯ ಚುನಾವಣೆಯಲ್ಲಿ ನಾವು 125 ರಿಂದ 150 ಮತಗಳೊಂದಿಗೆ ಭರ್ಜರಿ ಜಯಗಳಿಸುತ್ತೇವೆ. ಈ ಮೂಲಕ ರಾಜ್ಯದಲ್ಲಿ ನಾವು ಮತ್ತೆ ಆಡಳಿತ ನಡೆಸುತ್ತೇವೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರವಿರೋ ಮಧ್ಯಪ್ರದೇಶದಲ್ಲಿ ಈ ಬಾರಿಗೆ ಗೆಲುವು ಯಾರಿಗೆ?
Advertisement
Counting of votes in Madhya Pradesh to begin at 8am
State minister & BJP leader Narottam Mishra says " We will win 125-150 seats in the state. BJP will form govt in the state. It is a matter of a few hours now." pic.twitter.com/g9IEd4FkSH
— ANI (@ANI) December 3, 2023
Advertisement
ಒಟ್ಟಿನಲ್ಲಿ ಸದ್ಯ ಬಿಜೆಪಿ ಸರ್ಕಾರವಿರುವ ಮಧ್ಯಪ್ರದೇದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇರಲಿದೆ ಎಂಬುದಾಗಿ ಬಹುತೇಕ ಸಮೀಕ್ಷೆಗಳು ತಿಳಿಸಿದ್ದು, ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದನ್ನು ಕಾದುನೋಡಬೇಕು. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.