ವಾಷಿಂಗ್ಟನ್: ಯುದ್ಧದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದ ಅಫ್ಘನ್ನರಿಗೆ ಆಶ್ರಯ ನೀಡೋದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ.
ಅಫ್ಘಾನಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ನರಕ ರೂಪ ಪಡೆದುಕೊಳ್ಳುತ್ತಿದ್ದು, ತಾಲಿಬಾನಿಗಳು ತಾವು ರಕ್ತಪಿಪಾಸುಗಳು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗೆ ಅಮೆರಿಕದ ತೆಗೆದುಕೊಂಡ ನಿರ್ಧಾರವೇ ಕಾರಣ ಎಂದು ಆರೋಪಗಳು ಕೇಳಿ ಬಂದಿವೆ. ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
Advertisement
Advertisement
ಅಮೆರಿಕದಲ್ಲಿ ಆಶ್ರಯ:
ಅಮೆರಿಕ ಅಫ್ಘನ್ನರಿಗೆ ಆಶ್ರಯ ನೀಡಲು ನಿರ್ಧರಿಸಿದೆ. ಯುದ್ಧದ ಸಮಯದಲ್ಲಿ ತಮಗೆ ನೆರವು ನೀಡಿದವರಿಗೆ ಆಶ್ರಯ ನೀಡಲಾಗುತ್ತದೆ. ಒಮ್ಮೆ ಸ್ಕ್ರೀನಿಂಗ್ ಮತ್ತು ಔಪಚಾರಿಕ ಮಾತುಕತೆಗಳು ಅಂತಿಮವಾಗಬೇಕಿದೆ. ನಾವು ಅಫ್ಘನ್ನರನ್ನು ಅಮೆರಿಕಾಗೆ ಸ್ವಾಗತಿಸುತ್ತೇವೆ. ನಾವು ಇರೋದು ಹೀಗೆ. ಇದುವೇ ಅಮೆರಿಕ ಎಂದು ಜೋ ಬೈಡನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ
Advertisement
Advertisement
ತಾಲಿಬಾನಿ ವಕ್ತಾರ ಸೋಹೆಲ್ ಶಾಹಿನ್ ಎಂಬಾತ ಕತಾರ್ ನಲ್ಲಿ ಕುಳಿತು ಹೇಳಿಕೆ ನೀಡಿದ್ದಾನೆ. ಒಂದು ವೇಳೆ ಅಮೆರಿಕ ತನ್ನ ಸೇನೆಯನ್ನ ಹಿಂಪಡೆಯಲು ವಿಳಂಬ ನೀತಿ ತೋರಿದ್ರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ನಾವು ನಿಮಗೆ ಆಗಸ್ಟ್ 31ರವರೆಗೆ ನಿಮ್ಮ ಸೇನೆ ಕರೆಸಿಕೊಳ್ಳಲು ಸಮಯ ನೀಡಿದ್ದೇವೆ ಎಂದು ಹೇಳಿದ್ದಾನೆ. ಇತ್ತ ಅಮೆರಿಕ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ನಿರ್ಧರಿಸಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ವಿದೇಶಿಗರಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ಸುಮಾರು 6 ಸಾವಿರ ಅಮೆರಿಕ ಸೈನಿಕರಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ
Once screened and cleared, we will welcome Afghans who helped us in the war effort to their new home in the United States of America.
Because that's who we are. That's what America is.
— Joe Biden (@JoeBiden) August 23, 2021
ತಾಲಿಬಾನಿಗಳಿಗೆ ಬೈಡನ್ ಎಚ್ಚರಿಕೆ:
ನಾವು 20 ವರ್ಷ ಅಫ್ಘಾನಿಸ್ತಾನದ ಜೊತೆ ಕೆಲಸ ಮಾಡಿದ್ದೇವೆ. ಸದ್ಯ ಕಾಬೂಲ್ ನಲ್ಲಿ ಅಮೆರಿಕದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ಅಮೆರಿಕ ಸೇನೆಯ ಮೇಲೆ ತಾಲಿಬಾನಿಗಳು ದಾಳಿ ನಡೆಸಿದ್ರೆ ಪ್ರತ್ಯುತ್ತರ ನೀಡುತ್ತೇವೆ. ಅಫ್ಘಾನಿಸ್ತಾನದ ಕುರಿತು ಮುಂದಿನ ವಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗವುದು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!