ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ

Public TV
2 Min Read
D K Shivakumar 1

– ಬಿಜೆಪಿಯವ್ರು ಹೆಣದ ಮೇಲೆ ರಾಜಕೀಯ ಮಾಡ್ತಾರೆ ಎಂದ ಡಿಸಿಎಂ

ಬೆಂಗಳೂರು: ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತದ (Chinnaswamy Stampede) ವಿಚಾರವಾಗಿ ಬಿಜೆಪಿ (BJP) ಹೋರಾಟ ಮಾಡಿರೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಕೂಡ ಹೆಗಲು ಮೇಲೆ ಹೊರೋಣ. ನೋಡೋಣ ಏನಾಗುತ್ತೆ. ಹೆಣದ ಮೇಲೆ ರಾಜಕೀಯ ಬಿಟ್ಟು, ಅವ್ರೇನು ಮಾಡಿದ್ದಾರೆ? ಯಾವ ಸಾಮಾಜಿಕ ಕಾರ್ಯಕರ್ತರು ಸಹಕಾರ ನೀಡೋದಿಲ್ಲ. ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಾವು ಅನೇಕ ಪ್ರಕರಣಗಳನ್ನು ಕೇಳುತ್ತೇವೆ. ಗಂಗಾಧರ ಪ್ರಕರಣದ ಬಗ್ಗೆ ನಾವು ಕೇಳುತ್ತೇವೆ. ನಾನು ಅಹಮದಾಬಾದ್‌ಗೆ ಹೋಗಿದ್ದೆ. ನಾನು ಕೇಂದ್ರ ಸರ್ಕಾರವನ್ನ ಯಾವತ್ತೂ ದೂಷಿಸಿಲ್ಲ. ದೇವಾಲಯದಲ್ಲಿ ಕಾಲ್ತುಳಿತ ಆಗಿದೆ. ಅನೇಕ ಕಡೆ ಕಾಲ್ತುಳಿತ ಆಗಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಾಡೆಲ್ ಹತ್ಯೆ ಕೇಸ್ – ಗಂಡನ ಬಿಟ್ಟಿದ್ದ ರೂಪದರ್ಶಿಗೆ ನನ್ನ ಮದುವೆಯಾಗು ಅಂತ ಪೀಡಿಸ್ತಿದ್ದ 2 ಮಕ್ಕಳ ತಂದೆ

ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಪರಿಸರ ನಡಿಗೆ ಕಾರ್ಯಕ್ರಮವನ್ನ ಸರ್ಕಾರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಬಹಳ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನೀವೆಲ್ಲರೂ ನಮ್ಮ ದೇಶವನ್ನು ರಕ್ಷಣೆ ಮಾಡಲು ಬಂದಿದ್ದೀರಿ. ನಮ್ಮ ಮಕ್ಕಳು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ನಾವು ನಿಮ್ಮೆಲ್ಲರಿಗೂ ವಿಧಾನಸೌಧ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದೇವೆ. ವಿಧಾನಸೌಧಕ್ಕೆ ಭೇಟಿ ನೀಡಿ ಎಂದಿದ್ದಾರೆ. ಇದನ್ನೂ ಓದಿ: ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕ್ರಾಂತಿಕಾರಿ ಹೋರಾಟ ಮಾಡಿ
ಒಳ್ಳೆಯ ಆಲೋಚನೆಗಳಿಂದ ಭವಿಷ್ಯ ನಿರ್ಮಾಣ ಮಾಡಿಕೊಂಡು, ದೇಶಕ್ಕೆ, ರಾಜ್ಯಕ್ಕೆ ಏನು ಆಗಬೇಕು ಅನ್ನೋದನ್ನ ಚಿಂತನೆ ಮಾಡಬೇಕು. ಇವತ್ತು ಪರಿಸರ ನಾಶ ಆಗದಂತೆ ನಾವು ಹೆಜ್ಜೆ ಹಾಕಲು ಬಂದಿದ್ದೇವೆ. ಇದು ಬರೀ ಸರ್ಕಾರದ ಕಾರ್ಯಕ್ರಮ ಅಲ್ಲ, ನಿಮ್ಮ ಕಾರ್ಯಕ್ರಮವಾಗಿದೆ. ಎಲ್ಲಾ ಶಾಲೆಗಳಲ್ಲಿ ಎನ್ವಿರಾನ್ಮೆಂಟ್ ಕ್ಲಬ್ ಮಾಡಲು ಆದೇಶ ನೀಡಿದ್ದೇವೆ. ವಿದ್ಯಾಥಿಗಳು ಪರಿಸರದ ಬಗ್ಗೆ ಕ್ರಾಂತಿಕಾರಿ ಹೋರಾಟ ಮಾಡಿ ಎಂದು ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

ಈ ವರ್ಷದ ಪರಿಸರ ದಿನದ ಮೂಲ ಸಂದೇಶ ಪ್ಲಾಸ್ಟಿಕ್ ನಿಷೇಧ ಮಾಡುವುದು. ಅಲ್ಲದೇ ನೀರು, ಗಾಳಿ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವುದು. ಪ್ರತಿಯೊಂದು ವಿದ್ಯಾರ್ಥಿಗಳು ಮರಗಳನ್ನು ದತ್ತು ಪಡೆದುಕೊಳ್ಳಬೇಕು. ಈಗಾಗಲೇ 50 ಸಾವಿರ ಮಕ್ಕಳು ದತ್ತು ಪಡೆದುಕೊಂಡಿದ್ದಾರೆ. ಹಸಿರು ಕಾಪಾಡಬೇಕು. ಪರಿಸರ ಇಲ್ಲ ಅಂದ್ರೆ ಏನೂ ಇಲ್ಲ ಎಂದು ಹೇಳಿದ್ದಾರೆ..

Share This Article