ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರ (KR Pete Constituency) ದ ಜೆಡಿಎಸ್ (JDS) ಬಂಡಾಯದ ಬಿಸಿ ಜೋರಾಗಿದೆ. ಇಷ್ಟು ದಿನ ಬಿ.ಎಲ್ ದೇವರಾಜುಗೆ ಟಿಕೆಟ್ ನೀಡಬೇಕು ಎಂದು ಸಿಡಿದೆದ್ದ ನಾಯಕರು, ಇದೀಗ ಮತ್ತೊಂದು ವರಸೆ ತೆಗೆದಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ರ ಕುಟುಂಬದವರನ್ನೇ ಅಸ್ತ್ರವಾಗಿ ಬಳಸಿಕೊಂಡು ಅಭ್ಯರ್ಥಿ ಹೆಚ್.ಟಿ ಮಂಜುರನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಿದ್ದಾರೆ.
Advertisement
ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆಪ್ತ ಹೆಚ್.ಟಿ ಮಂಜುಗೆ ಟಿಕೆಟ್ ಘೋಷಣೆ ಬೆನ್ನಲ್ಲೆ ಮಾಜಿ ಸಚಿವ ರೇವಣ್ಣ (HD Revanna) ಆಪ್ತರಾದ ಬಿ.ಎಲ್ ದೇವರಾಜು, ಬಸ್ ಸಂತೋಷ್, ಬಸ್ ಕೃಷ್ಣೇಗೌಡ ಬಂಡಾಯ ಸಾರಿದ್ದಾರೆ. ಮೂಲ, ವಲಸಿಗ ಚರ್ಚೆ ಹುಟ್ಟು ಹಾಕಿದ್ದಾರೆ. ಅಲ್ಲದೇ ಒಂದು ದಿನದ ಹಿಂದೆಯಷ್ಟೇ ಬೆಂಬಲಿಗರ ಸಭೆ ಕರೆದ ಬಂಡಾಯ ನಾಯಕರು ಅಭ್ಯರ್ಥಿಯನ್ನ ಮತ್ತೊಮ್ಮೆ ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಆದರೆ ವರಿಷ್ಠರು ಅಭ್ಯರ್ಥಿ ಬದಲಾವಣೆ ಮಾಡೋದು ಡೌಟ್ ಎನ್ನಲಾಗ್ತಿದ್ದು, ಇದರಿಂದ ಕಂಗೆಟ್ಟಿರುವ ಬಂಡಾಯ ಮುಖಂಡರು ಹೆಚ್.ಡಿ.ಡಿ ಕುಟುಂಬವನ್ನೇ ಅಸ್ತ್ರವಾಗಿ ಬಳಸಿಕೊಂಡು ಘೋಷಣೆಯಾದ ಅಭ್ಯರ್ಥಿಗೆ ಬಿ ಫಾರಂ ತಪ್ಪಿಸಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಬಂಡಾಯದ ಬಾವುಟ – ಹೆಚ್‍ಡಿಕೆ ನಡೆಗೆ ವಿರೋಧ
Advertisement
Advertisement
ಹೆಚ್.ಟಿ ಮಂಜು ಕೆಲ ವರ್ಷಗಳ ಹಿಂದೆಯಷ್ಟೆ ಪಕ್ಷಕ್ಕೆ ಬಂದಿರೋದು. ಪಕ್ಷಕ್ಕಾಗಿ ದುಡಿದ ಹಲವು ನಾಯಕರಿದ್ದು, ಇವರಿಗೆ ಟಿಕೆಟ್ ಘೋಷಣೆ ಮಾಡಿರೋದು ಸರಿಯಲ್ಲ. ಪಕ್ಷಕ್ಕಾಗಿ 45 ವರ್ಷಗಳ ಕಾಲ ದುಡಿದ ಬಿ.ಎಲ್ ದೇವರಾಜು ಗೆ ಟಿಕೆಟ್ ನೋಡಿ, ಇಲ್ಲ ಹೆಚ್.ಡಿ ದೇವೇಗೌಡರ ಕುಟುಂಬದವರಿಗೆ ಟಿಕೆಟ್ ನೀಡಿ. ನಿಖಿಲ್, ರೇವಣ್ಣ, ಕುಮಾರಸ್ವಾಮಿ ಸೇರಿದಂತೆ ಹೆಚ್.ಡಿ ದೇವೇಗೌಡರ ಕುಟುಂಬದ ಯಾರೇ ಬರಲಿ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ. ಮಂಜುಗೆ ಟಿಕೆಟ್ ಎಂದ್ರೆ ನಾವು ಬಂಡಾಯವಾಗಿ ಸ್ಪರ್ಧಿಸಲು ಸಿದ್ಧ ಎಂದು ಬಂಡಾಯ ಮುಖಂಡ ಬಸ್ ಸಂತೋಷ್ ಹೇಳಿದ್ದಾರೆ. ಈ ಅಸಮಾಧಾನಿತ ನಾಯಕರ ಈ ವರಸೆಯನ್ನ ಹೆಚ್.ಡಿ ದೇವೇಗೌಡರ ಕುಟುಂಬ ಹೇಗೆ ಪರಿಗಣಿಸುತ್ತೆ ಎಂಬುದನ್ನ ಕಾದು ನೋಡಬೇಕಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k