– ಪಿಒಕೆ ಬಿಟ್ಟು ತೆರಳಿದರೆ ಮಾತ್ರ ಪಾಕ್ ಜೊತೆ ಮಾತುಕತೆ
– ಯಾರ ಮಧ್ಯಸ್ಥಿಕೆಯನ್ನೂ ಒಪ್ಪಲ್ಲ
ನವದೆಹಲಿ: ಪಾಕ್ (Pakistan) ದಾಳಿ ಮಾಡಿದರೆ ಭಾರತ ಪ್ರತಿಯಾಗಿ ಭೀಕರ ದಾಳಿ ಮಾಡುತ್ತದೆ ಎಂದು ಪ್ರಧಾನಿ ಮೋದಿ (Narendra Modi) ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಪಾಕ್‌ನೊಂದಿಗಿನ ಸಂಘರ್ಷದ ಕುರಿತು ದೂರವಾಣಿ ಕರೆ ಮೂಲಕ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಪ್ರಧಾನಿ ಮೋದಿ ಚರ್ಚಿಸಿದರು. ಈ ವೇಳೆ ಪಾಕಿಸ್ತಾನ ದಾಳಿ ಮಾಡಿದರೆ ನಮ್ಮ ದಾಳಿ ಬಲವಾಗಿರುತ್ತದೆ. ಮತ್ತೆ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಭಾರತದ ರಾಜಕೀಯ, ಸಾಮಾಜಿಕ, ಮಿಲಿಟರಿ ಶಕ್ತಿಯ ಬಲ – ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ ಇನ್ನೂ ಪೂರ್ಣಗೊಂಡಿಲ್ಲ. ಪಾಕ್ ಗುಂಡು ಹೊಡೆದರೆ, ನಾವು ಫಿರಂಗಿಗಳ ಮೂಲಕ ಉತ್ತರಿಸಬೇಕು. ಉಗ್ರವಾದ ನಿಲ್ಲುವವರೆಗೂ ಸಿಂಧೂ ಒಪ್ಪಂದ ಸ್ಥಗಿತಗೊಳಿಸಲಾಗುವುದು. ನಾಳಿನ ಸಭೆಯಲ್ಲಿ ಪಿಒಕೆ ವಿಚಾರ ಮಾತ್ರ ಚರ್ಚೆ ಮಾಡಲಾಗುವುದು. ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ಅಗತ್ಯವಿಲ್ಲ. ಕಾಶ್ಮೀರ ವಿವಾದ ಬಗೆಹರಿಸುವ ಶಕ್ತಿ ಭಾರತಕ್ಕಿದೆ. ಕಾಶ್ಮೀರ ವಿವಾದ ಜಾಗತಿಕಗೊಳಿಸಲು ಇಚ್ಛೆ ಪಡಲ್ಲ ಎಂದು ಮೋದಿ, ದೊಡ್ಡಣ್ಣ ಅಮೆರಿಕಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಪಾಕ್ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ
ಮ್ಯಾರಥಾನ್ ಸಭೆ ನಡೆಸಿದ ಮೋದಿ, ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್, ಸಿಡಿಎಸ್ ಮೇಜರ್ ಅನಿಲ್ ಚೌಹಾಣ್, ಮೂರೂ ಸೇನೆಗಳ ಮುಖ್ಯಸ್ಥರ ಜೊತೆ ಎರಡು ಗಂಟೆ ಚರ್ಚೆ ನಡೆಸಿದ್ದಾರೆ. ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಪಿಒಕೆ ಬಿಟ್ಟು ತೆರಳಿದರೆ ಮಾತ್ರ ಪಾಕ್ ಜೊತೆ ನಮ್ಮ ಮಾತುಕತೆ. ಇನ್ನೂ ನಾವು ಯಾರ ಮಧ್ಯಸ್ಥಿಕೆಯನ್ನೂ ಒಪ್ಪುವುದಿಲ್ಲ. ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ನಾವು ಒಪ್ಪಲ್ಲ. ನಾಳೆ ಪಿಓಕೆ ವಿಚಾರವಾಗಿ ಮಾತುಕತೆ ನಡೆಸಿ ನಿರ್ಣಯ ಮಾಡಲಾಗುವುದು ಎಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: Explainer | ಬ್ರಹ್ಮೋಸ್ ನಿರ್ಮಾಣಕ್ಕೆ ಕೈ ಹಾಕಿದ್ದು ಯಾಕೆ? ಪಾಕ್ ರೇಡಾರ್ ಕಣ್ಣಿಗೆ ಬಿದ್ದಿಲ್ಲ ಯಾಕೆ?