Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ – ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ ಶಪಥ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ – ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ ಶಪಥ

Latest

ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ – ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ ಶಪಥ

Public TV
Last updated: March 19, 2026 7:47 am
Public TV
Share
3 Min Read
Effie Defrin Mojtaba Khamenei
SHARE

ಟೆಲ್ ಅವಿವ್: ಇಸ್ರೇಲ್ ರಕ್ಷಣಾ ಪಡೆಗಳು ( Israel Defense Forces) ಇರಾನ್‌ನ (Iran) ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಸೇರಿದಂತೆ ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ ಎಂದಿದೆ. ಖಮೇನಿ ಇರುವ ಸ್ಥಳದ ಬಗ್ಗೆ ತಮ್ಮ ಬಳಿ ಪ್ರಸ್ತುತ ಯಾವುದೇ ಮಾಹಿತಿ ಇಲ್ಲ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ (Effie Defrin) ಹೇಳಿದ್ದಾರೆ.

ನೂತನ ಸುಪ್ರೀಂ ಲೀಡರ್ ಎಲ್ಲಿದ್ದಾರೆ ಗೊತ್ತಿಲ್ಲ, ಆದರೆ ನಮಗೆ ಬೆದರಿಕೆ ಹಾಕುವವರನ್ನು ಬೆನ್ನಟ್ಟಿ ಬೇಟೆಯಾಡುತ್ತೇವೆ ಮತ್ತು ನಾಶಪಡಿಸುತ್ತೇವೆ ಎಂದು ಎಫಿ ಡೆಫ್ರಿನ್ ಶಪಥ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಪಾಕಿಸ್ತಾನದಿಂದ ಪರಮಾಣು ಬೆದರಿಕೆಯಿದೆ: ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್

ಸುಪ್ರೀಂಲೀಡರ್ ಆಯತುಲ್ಲಾ ಅಲಿ ಖಮೇನಿ ಸೇರಿ ಇಬ್ಬರು ನಾಯಕರನ್ನು ಕಳೆದುಕೊಂಡು ಕಂಗಲಾಗಿದ್ದ ಇರಾನ್‌ಗೆ ಇಸ್ರೇಲ್ ಮತ್ತೊಂದು ಶಾಕ್ ನೀಡಿದೆ. ವೈಮಾನಿಕ ದಾಳಿ ನಡೆಸುವ ಮೂಲಕ ಇರಾನ್ ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಅವರನ್ನ ಹತ್ಯೆ ಮಾಡಿದೆ. ಈ ದಾಳಿಯ ಬೆನ್ನಲ್ಲೇ ಇಸ್ರೇಲ್ ಇಶಾರೆ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಕಡೆಗೆ ತಿರುಗಿದೆ. ಇದನ್ನೂ ಓದಿ: ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ಪಾಸಿಟಿವ್ ರಿಪೋರ್ಟ್ – ಅಧಿಕಾರಿಗಳೇ ಶಾಕ್

ಕಳೆದ 19 ದಿನಗಳಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಇರಾನ್ ಟಾಪ್ ನಾಯಕರನ್ನೇ ಗುರಿಯಾಗಿಸಿಕೊಂಡಿರುವ ಇಸ್ರೇಲ್ ಒಬ್ಬೊಬ್ಬರನ್ನೇ ಹತ್ಯೆ ಮಾಡುತ್ತಿದೆ. ಆಯತುಲ್ಲಾ ಅಲಿ ಖಮೇನಿ ಸೇರಿ ಇಬ್ಬರು ಪ್ರಮುಖ ನಾಯಕರ ಹತ್ಯೆ ಬಳಿಕ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಜೊತೆಗೆ ಈ ದಾಳಿಯನ್ನು ಇರಾನ್ ಅಧ್ಯಕ್ಷ ಮಸೌದ್ ಖಂಡಿಸಿದ್ದಾರೆ. ಈ ದಾಳಿಯನ್ನು ಹೇಡಿತನದ ಹತ್ಯೆ ಎಂದು ಕರೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

ಇರಾನ್‌ನ ಉನ್ನತ ಅಧಿಕಾರಿ ಅಲಿ ಲಾರಿಜಾನಿ ಮತ್ತು ಬಸಿಜ್ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಹತ್ಯೆಗಳ ಹೊರತಾಗಿಯೂ ಆಡಳಿತ ವ್ಯವಸ್ಥೆಯು ಬಲಿಷ್ಠವಾಗಿ ಉಳಿದಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ದುಲ್ಲಾ ಅರಘ್ಚಿ ಹೇಳಿದ್ದಾರೆ. ಇಸ್ಲಾಮಿಕ್ ಗಣರಾಜ್ಯವನ್ನು ಆಘಾತಗಳಿಂದ ನಾಶಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ವ್ಯಕ್ತಿ, ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಇಡೀ ದೇಶದ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಅರಘ್ಚಿ ಹೇಳಿದ್ದಾರೆ. ಯಾವುದೇ ಒಬ್ಬ ನಾಯಕನ ಅನುಪಸ್ಥಿತಿಯು ವ್ಯವಸ್ಥೆಯ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಇರಾನ್‌ನ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅಮೆರಿಕ-ಇಸ್ರೇಲ್‌ಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ವಿಮಾನದ ಶೇ.60ರಷ್ಟು ಸೀಟುಗಳ ಆಯ್ಕೆ ಫ್ರೀ

ಈ ಮಧ್ಯೆ ಲೆಬನಾನ್‌ನಲ್ಲಿ ಹೆಜ್ಬೊಲ್ಲಾದ 80 ಕೇಂದ್ರಗಳನ್ನು ಗುರಿಯಾಸಿ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿದೆ. ಬೈರೂತ್‌ನಲ್ಲಿ 15 ಅಂತಸ್ತಿನ ಜನವಸತಿ ಕಟ್ಟಡ ಧ್ವಂಸಗೊಳಿದೆ. ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇರಾನ್‌ನ ಬುಶೆಹರ್ ನ್ಯೂಕ್ಲಿಯರ್ ಘಟಕದ ಬಳಿ ಇಸ್ರೇಲ್ ದಾಳಿ ಮಾಡಿದೆ. ಇರಾನ್ ಕೂಡ ದಾಳಿ ಹೆಚ್ಚಿಸಿದ್ದು, ಇಸ್ರೇಲ್‌ನ ಟೆಲ್ ಅವಿವ್ ಮೇಲೆ ಕ್ಲಸ್ಟರ್ ಬಾಂಬ್ ಮಳೆ ಸುರಿಸಿದೆ. ಇರಾಕ್‌ನ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ಇರಾನ್ ದಾಳಿ ಮುಂದುವರಿಸಿದೆ. ಯುಎಇಯ ಹಲವೆಡೆ ಮತ್ತೆ ಮಿಸೈಲ್, ಡ್ರೋನ್ ದಾಳಿ ಮಾಡಿದೆ. ದುಬೈ ಮೇಲೆ ಕೇವಲ 30 ನಿಮಿಷದಲ್ಲಿ 5 ಕ್ಷಿಪಣಿಗಳನ್ನು ಇರಾನ್ ಉಡಾಯಿಸಿದೆ. ಇದನ್ನೂ ಓದಿ: ಕನ್ನಡಿಗ ಪಡೆದಿದ್ದ ರ‍್ಯಾಂಕ್‌ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್

TAGGED:Effie DefrinIsrael Defense ForcesMojtaba Khameneiಇರಾನ್ಇರಾನ್‌ ಇಸ್ರೇಲ್‌ ವಾರ್‌ಇಸ್ರೇಲ್ಎಫಿ ಡೆಫ್ರಿನ್ಮೊಜ್ತಬಾ ಖಮೇನಿ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

LSG Vs KKR 2 1
Cricket

ಕೊನೆಯಲ್ಲಿ ಮುಕುಲ್‌ ಅಬ್ಬರ; ರೋಚಕ ಪಂದ್ಯದಲ್ಲಿ ಲಕ್ನೋಗೆ 3 ವಿಕೆಟ್‌ ಜಯ – ಖಾತೆ ತೆರೆಯದ ಕೆಕೆಆರ್‌

Public TV
By Public TV
1 minute ago
PUC Student
Bagalkot

2nd PUC Result | ರಾಜ್ಯಕ್ಕೆ ಉಡುಪಿ ಪ್ರಥಮ – ಕಾಮರ್ಸ್‌ನಲ್ಲಿ ಇಬ್ಬರಿಗೆ 600ಕ್ಕೆ 600 ಅಂಕ

Public TV
By Public TV
27 minutes ago
kea
Bengaluru City

ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ: ಕೆಇಎ

Public TV
By Public TV
34 minutes ago
Benjamin Netanyahu 1
Latest

ಲೆಬನಾನ್‌ ಜೊತೆ ನೇರ ಮಾತುಕತೆ ಆರಂಭಿಸಲು ಸಂಪುಟಕ್ಕೆ ನೆತನ್ಯಾಹು ಆದೇಶ

Public TV
By Public TV
40 minutes ago
Social Media Ban
Bengaluru City

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶುರು

Public TV
By Public TV
1 hour ago
Dunia Vijay
Bengaluru City

Video Viral | ಬೆಂಗಳೂರಲ್ಲಿ `ಜೊಂಬಿ ಡ್ರಗ್’ ನಶೆಯಲ್ಲಿ ತೇಲಾಡಿದ ಆರೋಪ – ನಟ ದುನಿಯಾ ವಿಜಯ್‌ ಕಳವಳ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?