DharwadLatestLeading NewsMain Post

ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡ್ತೀವಿ: ಪ್ರಮೋದ್ ಮುತಾಲಿಕ್

ಧಾರವಾಡ: ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಎಂಐಎಂ ಪಕ್ಷದವರು ಟಿಪ್ಪು ಜಯಂತಿಗಾಗಿ (Tippu Jayanthi) ಅರ್ಜಿ ಕೊಟ್ಟಿದ್ದಾರೆ. ಇದಕ್ಕೆ ನಾನು ವಿರೋಧಿಸುತ್ತೇನೆ. ಇದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದರು. ‌

ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಪಾಲಿಕೆಯವರು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡುತ್ತೇವೆ. ಅಕಸ್ಮಾತ್‌ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

tippu

ಅಲ್ಲಾ ಒಬ್ಬನೇ ದೇವರು ಎಂದು ಕುರಾನ್‌ನಲ್ಲಿ ಹೇಳಲಾಗಿದೆ. ನೂರಕ್ಕೆ ಶೇ.90 ರಷ್ಟು ಮುಸ್ಲಿಮರು ಇದನ್ನೇ ಪಾಲಿಸುತ್ತ ಬಂದಿದ್ದಾರೆ. ಇನ್ನೊಬ್ಬನ ಪೂಜೆ, ಆರಾಧನೆ ಪದ್ಧತಿ ಇಲ್ಲ. ಎಂಐಎಂ, ‌ಎಸ್‌ಡಿಪಿಐ, ಪಿಎಫ್‌ಐ ಕಿಡಿಗೇಡಿಗಳು ದ್ವೇಷದ ಭಾವನೆಯಿಂದ ಇದನ್ನ ಮಾಡುತಿದ್ದಾರೆ. ಟಿಪ್ಪು ಜಯಂತಿ ಸರಿಯಲ್ಲ, ಟಿಪ್ಪುಗೆ ಒಳ್ಳೆತನ ಇರಲಿಲ್ಲಾ ಎಂದು ಹೇಳಿದರು.

ಟಿಪ್ಪು ಮತಾಂತರ ಮಾಡಿದ ವ್ಯಕ್ತಿ, ದೇವಸ್ತಾನ ಕೆಡವಿದ ವ್ಯಕ್ತಿ, ಸಾವಿರಾರು ಜನರನ್ನು ಕೊಂದಿರುವ ವ್ಯಕ್ತಿ ಹಾಗೂ ಕನ್ನಡ ವಿರೋಧಿ. ಇಂತಹ ವ್ಯಕ್ತಿಯ ಜಯಂತಿಯನ್ನ ಚನ್ನಮ್ಮ ಮೈದಾನದಲ್ಲಿ ಆಚರಣೆ ಮಾಡಲು ಬಿಡಲ್ಲ ಎಂದರು. ಇದನ್ನೂ ಓದಿ: ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಪ್ರಕರಣ ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಸೂಚನೆ – ಸಿಎಂ

ನಿಮ್ಮ ನಮಾಜ್, ಧಾರ್ಮಿಕ ಆಚರಣೆ ವರ್ಷಕ್ಕೆ ಎರಡು ಬಾರಿ ಮಾಡಬೇಕು ಎಂದು ನ್ಯಾಯಾಲಯ‌ ಹೇಳಿದೆ. ಅದೇ‌ ರೀತಿ ನಮಗೆ ಗಣೇಶೋತ್ಸವ ಮಾಡಲು ಕೊಡಿ ಎಂದು ಹೇಳಿದ್ದೇವೆ. ಒಬ್ಬ ವ್ಯಕ್ತಿಯ ವೈಭವೀಕರಣ ಮಾಡಲು ಬಿಡಲ್ಲ. ನೀವು ಅಲ್ಲಿ ಟಿಪ್ಪು ಜಯಂತಿ ಮಾಡಿದರೆ ನಾವು ಅಂಬೇಡ್ಕರ್, ಛತ್ರಪತಿ ಶಿವಾಜಿ, ಬಸವ ಜಯಂತಿ ಮಾಡುತ್ತೇವೆ. ಟಿಪ್ಪು ಜಯಂತಿ ಸಂಘರ್ಷಕ್ಕೆ ಕಾರಣ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

Live Tv

Leave a Reply

Your email address will not be published. Required fields are marked *

Back to top button