– ಮುಂದಿನ 3 ವರ್ಷಗಳಲ್ಲಿ 3 ಸಾವಿರ ಶಾಲೆ
ಉಡುಪಿ: ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಬಗ್ಗೆ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ನೂರು ಶಾಲೆಗಳನ್ನು ಇಡೀ ರಾಜ್ಯಾದ್ಯಂತ ತೆರೆಯುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ 3,000 ಶಾಲೆ ತೆರೆಯುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗ್ರೇಸ್ ಮಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ (Udupi) ಪ್ರತಿಕ್ರಿಯಿಸಿದ ಅವರು, ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ. 20 ಗ್ರೇಸ್ ಮಾರ್ಕ್ ಯಾವತ್ತೂ ಇರುತ್ತಾ ಎಂದು ಹಲವರಿಗೆ ಸಂಶಯ ಇದೆ. ಉಡುಪಿ, ದಕ್ಷಿಣ ಕನ್ನಡ ಯಾವತ್ತೂ ಟಾಪರ್ಸ್ ಆಗಿ ಇರುತ್ತಿದ್ದರು. ನಂತರ ರಿಸಲ್ಟ್ ನಲ್ಲಿ ಇಳಿಮುಖವಾಯಿತು. ಈಗ ಮತ್ತೆ ಉಡುಪಿ, ಮಂಗಳೂರು ಟಾಪರ್ಸ್ ಆಗಿದ್ದಾರೆ ಎಂದರು.
Advertisement
Advertisement
ನಾವು ಪರೀಕ್ಷೆಯ ಪವಿತ್ರತೆಯನ್ನು ಉಳಿಸಿದ್ದೇವೆ. ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್ ನೀಡಲಾಗಿದೆ. ಅಗತ್ಯವಿದ್ದವರು ಎರಡು ಮತ್ತು ಮೂರನೇ ಪರೀಕ್ಷೆ ತೆಗೆದುಕೊಳ್ಳಬಹುದು. ಗ್ರೇಸ್ ಮಾರ್ಕ್ ಪಡೆದವರು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯುತ್ತಿದ್ದಾರೆ. ಗ್ರೇಸ್ ಮಾರ್ಕ್ ನೀಡಿರುವುದು ಈ ವರ್ಷಕ್ಕೆ ಮಾತ್ರ. ನಾವೀಗ ಎಲ್ಲಿದ್ದೇವೆ ಅನ್ನೋದು ಅರಿವಿಗೆ ಬಂದಿದೆ. ಇಲಾಖೆಯನ್ನು ಸಮರ್ಥವಾಗಿ ನಡೆಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಪುಟ ಪುನಾರಚನೆ ಇಲ್ಲ, ಕರ್ನಾಟಕದಿಂದ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ: ಸಿಎಂ
Advertisement
Advertisement
ಶಾಲೆ ಪುನಾರಾರಂಭ ವಿಚಾರದ ಕುರಿತು ಮಾತನಾಡಿ, ಪುಸ್ತಕಗಳು ಯೂನಿಫಾರ್ಮ್ ಎಲ್ಲವೂ ಇದೆ. ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸವಲತ್ತು ತಲುಪಲಿದೆ. ಮೇ 27 ರಿಂದ ನಲಿ-ಕಲಿ ಆರಂಭವಾಗುತ್ತೆ. ಕೆಪಿಎಸ್ ಶಾಲೆಗಳ ಬಗ್ಗೆ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ನೂರು ಶಾಲೆಗಳನ್ನು ಇಡೀ ರಾಜ್ಯದ್ಯಂತ ತೆರೆಯುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ 3000 ಶಾಲೆ ತೆರೆಯುತ್ತೇವೆ. ಈ ಶೈಕ್ಷಣಿಕ ವರ್ಷದಿಂದ ಮುಂದಿನ ಮೂರು ವರ್ಷದೊಳಗೆ ಮೂರು ಸಾವಿರ ಕೆಪಿಎಸ್ ಶಾಲೆಗಳು ಆರಂಭವಾಗಲಿವೆ. ಕೆಪಿಎಸ್ ಶಾಲೆಗಳಿಗೆ ತುಂಬಾ ಬೇಡಿಕೆ ಇದ್ದು, ಒಳ್ಳೆಯ ಫಲಿತಾಂಶ ಬರುತ್ತದೆ ಎಂದು ಹೇಳಿದರು.
ಸಿಎಸ್‍ಆರ್ ಫಂಡ್ ನಿಂದ ಅನುದಾನ ವ್ಯವಸ್ಥೆ ಮಾಡಲಾಗುವುದು. ಡಿಸಿಎಂ ಡಿಕೆ ಶಿವಕುಮಾರ್ ಫಂಡ್ ಕಲೆಕ್ಷನ್ ಜವಾಬ್ದಾರಿ ವಹಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮೂರರಿಂದ ಆರು ಶಾಲೆಗಳು ತೆರೆಯಲಿವೆ. ಎಲ್‍ಕೆಜಿ ಸೇರುವ ಮಕ್ಕಳಿಗೆ ನಾಲ್ಕು ವರ್ಷ ಪೂರ್ಣವಾಗಬೇಕು. ಇದು ಕಾನೂನು. ಈ ವಿಚಾರದಲ್ಲಿ ಸಡಿಲಿಕೆ ಸಾಧ್ಯವಿಲ್ಲ. ಆದೇಶವನ್ನು ನಾವು ಕಡ್ಡಾಯವಾಗಿ ಫಾಲೋ ಮಾಡುತ್ತೇವೆ. ಅಧ್ಯಯನದ ಮೂಲಕ ಈ ಕಾನೂನು ಮಾಡಿದ್ದಾರೆ ಎಂದು ಶಿಕ್ಷಣ ಸಚಿವರು ಹೇಳಿದರು.