ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಕೈಬಿಡಲ್ಲ- ಸಿಎಂ

Public TV
2 Min Read
HDK 1

ಬೆಂಗಳೂರು/ತುಮಕೂರು: ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಲ್ಲ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ಆಚರಣೆ ನಿಲ್ಲಿಸಲ್ಲ. ಅಂತಹ ಯೋಚನೆಯೂ ನಮ್ಮ ಬಳಿ ಇಲ್ಲ. ನನಗೆ ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆಯ ಮೇರೆಗೆ ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದ್ರೆ ಯಾವುದೇ ಕಾರಣಕ್ಕೂ ಆಚರಣೆಯನ್ನು ಮಾಡೋದನ್ನು ನಿಲ್ಲಿಸುವುದಿಲ್ಲ ಅಂತ ತಿಳಿಸಿದ್ದಾರೆ.

TIPPU

ಮುಂದಿನ ವರ್ಷಗಳಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿಯೇ ಆಚರಿಸ್ತೀವಿ. ಅದನ್ನು ವಿರೋಧಿಸುವ ಅಜೆಂಡಾವೇ ಇಲ್ಲ. ಮುಖ್ಯಮಂತ್ರಿಗಳು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಲೇ ಬೇಕು ಅಂತ ಏನಿಲ್ಲ ಅಂತ ಸಿಎಂ ಖಡಕ್ ಆಗಿಯೇ ನುಡಿದಿದ್ದಾರೆ. ಭಾರೀ ವಿರೋಧದ ನಡುವೆಯೂ ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗಿತ್ತು. ಕೆಲವೆಡೆ ಆಚರಣೆ ವಿರುದ್ಧ ಪ್ರತಿಭಟನೆಗಳು ನಡೆದಿತ್ತು.

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಯಾರನ್ನೂ ನಾವು ಟಾರ್ಗೆಟ್ ಮಾಡಿಲ್ಲ. ಟಿಪ್ಪುಜಯಂತಿ ಸರ್ಕಾರಿ ಕಾರ್ಯಕ್ರಮವಾಗಿದೆ. ಇದಕ್ಕೆ ಟೀಕೆ ಟಿಪ್ಪಣಿಗಳನ್ನ ಮಾಡಬಹುದು. ಆದ್ರೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಬಾರದು. ಹೇಳಿಕೆ ಯಾರೇ ನೀಡಿದ್ರೂ ಕಾನೂನು ಕ್ರಮಕ್ಕೆ ನಾವೇ ಸೂಚಿಸಿದ್ದೀವಿ ಅಂದ್ರು.

dcm tippu jayanthi

ಇದೇ ವೇಳೆ ಹಿಂದೂ ದೇವರ ಮೇಲೆ ಚಿಂತಕ ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಮೇಲೂ ಕ್ರಮ ಕೈಗೊಳ್ತೀವಿ. ಯಾರೂ ಪ್ರಚೋದನಕಾರಿಯಾಗಿ ಮಾತಾಡ್ತಾರೋ ಅಂಥವರ ಮೇಲೆ ನಾವು ಕ್ರಮ ಕೈಗೊಳ್ತೇವೆ ಅಂತ ತಿಳಿಸಿದ್ರು.

ಟಿಪ್ಪು ಜಯಂತಿ ಆಚರಣೆ ಮುಂದಿನ ವರ್ಷ ಆಚರಣೆ ಬೇಕೋ ಬೇಡವೋ ಎಂಬ ವಿಚಾರದ ಕುರಿತು ಯಾವ ಸಮನ್ವಯ ಸಮಿತಿಯಲ್ಲೂ ಅದರ ಚರ್ಚೆ ಆಗಿಲ್ಲ. ಅದು ಮುಂದಿನ ವರ್ಷಕ್ಕೆ ನೋಡಿಕೊಳ್ಳೋಣ ಅಂತ ಅವರು ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *