ನವದೆಹಲಿ: ಪುಲ್ವಾಮದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಭಾರತೀಯ ಯೋಧರನ್ನು ಬಲಿಪಡೆದಿದ್ದನ್ನು ನಾವು ಮರೆಯುವುದೂ ಇಲ್ಲ, ಕೃತ್ಯ ಎಸಗಿದ ಪಾಪಿಗಳನ್ನು ನಾವು ಕ್ಷಮಿಸುವುದು ಇಲ್ಲ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಟ್ವೀಟ್ ಮಾಡಿ ಉಗ್ರರಿಗೆ ಎಚ್ಚರಿಕೆ ನೀಡಿದೆ.
ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಸುಮಾರು 47 ಸಿಆರ್‌ಪಿಎಫ್ ಯೋಧರ ಜೀವವನ್ನು ಬಲಿಪಡೆದಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದಿರುವ ಸಿಆರ್‌ಪಿಎಫ್ ಉಗ್ರರು ಈ ದುಷ್ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ ಎಂದು ಹೇಳಿ ಖಡಕ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಒಳಸಂಚಿನಿಂದ ಭಾರತವನ್ನು ಅಸ್ಥಿರಗೊಳಿಸಬಹುದೆಂಬ ಕನಸನ್ನು ಬಿಟ್ಟುಬಿಡಿ- ಪಾಕಿಗೆ ಮೋದಿ ಸಂದೇಶ
Advertisement
WE WILL NOT FORGET, WE WILL NOT FORGIVE:We salute our martyrs of Pulwama attack and stand with the families of our martyr brothers. This heinous attack will be avenged. pic.twitter.com/jRqKCcW7u8
— ????????CRPF???????? (@crpfindia) February 15, 2019
Advertisement
ಟ್ವೀಟ್‍ನಲ್ಲಿ ಏನಿದೆ?
ನಾವು ದುಷ್ಕೃತ್ಯ ಮೆರೆದವರನ್ನು ಮರೆಯುವುದಿಲ್ಲ, ಅವರನ್ನು ಕ್ಷಮಿಸುವುದೂ ಇಲ್ಲ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನಾವು ಗೌರವಿಸುತ್ತೇವೆ. ಹಾಗೆಯೇ ಹುತಾತ್ಮರಾಗಿರುವ ನಮ್ಮ ಸಹೋದರರ ಕುಟುಂಬದೊಂದಿಗೆ ನಾವಿದ್ದೇವೆ. ಈ ಘೋರ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ನಾವು ನೀಡುತ್ತೇವೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಆರ್‌ಪಿಎಫ್ ಬರೆದುಕೊಂಡಿದೆ.
Advertisement
Advertisement
ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರಿಗಾಗಿ ಇಡೀ ದೇಶವೆ ಸಂತಾಪ ಸೂಚಿಸುತ್ತಿದೆ. ಅಲ್ಲದೇ ಕೃತ್ಯವೆಸೆಗಿರುವ ಉಗ್ರರ ವಿರುದ್ಧ ಎಲ್ಲಡೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಭದ್ರತಾ ಪಡೆಗೆ ಈ ದಾಳಿಗೆ ಪ್ರತ್ಯುತ್ತರ ನೀಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv