ಬೆಂಗಳೂರು: ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ ಅನೇಕ ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತದೆ. ಇದು ಭಾರತ ಸಂವಿಧಾನಕ್ಕೆ ವಿರೋಧ. ನಮ್ಮ ಭಾರತ ದೇಶದ ಸಂವಿಧಾನ ಧರ್ಮಾತೀತ. ಒಂದು ಧರ್ಮದವರನ್ನು ಕರೆದು ಅವರಿಗೆ ಊಟ ಹಾಕುವುದು ಎಷ್ಟು ಸರಿ ಎಂದು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದಾರೆ.
ಇದುವರೆಗೂ ಯಾರಾದರೂ ಒಬ್ಬ ಎಂಎಲ್‌ಎ ಒಬ್ಬ ದಲಿತನಿಗೆ ಊಟ ಹಾಕಿದ್ದೀರಾ? ಯಾರಾದರೂ ಕಾರ್ಮಿಕರನ್ನು ಕರೆದಿದ್ದೀರಾ? ರಾಜ್ಯದ ಜನರ ತೆರಿಗೆ ದುಡ್ಡನ್ನು ಇಫ್ತಿಯಾರ್ ಕೂಟದಲ್ಲಿ ಊಟಕ್ಕೆ ಹಾಕಿ ಹಾಳು ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ.
Advertisement
ಈ ರೀತಿಯ ಕೂಟವನ್ನು ಇದನ್ನು ಸಂವಿಧಾನ ಒಪ್ಪುವುದಿಲ್ಲ. ಯಾವ ಆಧಾರದ ಮೇಲೆ ಇಫ್ತಿಯಾರ್ ಕೂಟ ನಡೆಸಿಕೊಂಡು ಬಂದಿದ್ದೀರಿ? ಕಳೆದ ವರ್ಷ ಕೂಟವನ್ನು ಮಾಡಿ ಅಲ್ಲಿ ಏನೆಲ್ಲಾ ಬಿದ್ದಿತ್ತು? ಯಾವೆಲ್ಲಾ ಬಾಟಲಿಗಳು ಬಿದ್ದಿದ್ದವು? ಕೊನೆಗೆ ಆ ಪ್ರಕರಣ ಯಾವ ರೀತಿ ಮುಚ್ಚಿ ಹಾಕಿದ್ದೀರಿ ಎಂಬುದು ನೆನಪಿದೆ ಎಂದರು. ಇದನ್ನೂ ಓದಿ: ನ್ಯೂಯಾರ್ಕ್ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ – 13 ಮಂದಿಗೆ ಗಾಯ
Advertisement
Advertisement
ಗೆದ್ದ ಮಾತ್ರಕ್ಕೆ ವಿಧಾನಸೌಧ ಹಾಗೂ ವಿಕಾಸಸೌಧ ನಿಮ್ಮದಲ್ಲ. ಅದು ಈ ರಾಜ್ಯದ ಪ್ರಜೆಗಳ ಹಕ್ಕು. ಈ ಸಲ ಅಲ್ಲಿ ಇಫ್ತಿಯಾರ್ ಕೂಟ ಮಾಡಬಾರದು. ನಿಮಗೆ ಮಾಡಲೇಬೇಕೆಂದರೆ ಯಾವುದಾದರೂ ಹೋಟೆಲ್‌ನಲ್ಲಿ ಮಾಡಿಕೊಳ್ಳಿ. ಇಫ್ತಿಯಾರ್ ಕೂಟ ಮಾಡುವುದಕ್ಕೆ ಅಲ್ಲಿ ವಿರೋಧವಿದೆ. ಯಾಕೆ ಏಕಾದಶಿ, ಶಿವರಾತ್ರಿ, ಸಂಕಷ್ಟಿ, ಯುಗಾದಿ, ವರ್ಷದ ತೊಡಕು, ಕ್ರಿಸ್‌ಮಸ್‌ಗಳಂದು ಕೂಟವನ್ನು ಮಾಡಲ್ಲ ಎಂದು ಪ್ರಶ್ನಿಸಿದರು.
Advertisement
ಒಂದು ಧರ್ಮಕ್ಕೆ ಬೆಣ್ಣೆ, ಇನ್ನೊಂದು ಧರ್ಮಕ್ಕೆ ಸುಣ್ಣ ಹಚ್ಚುವ ಕೆಲಸ ಮಾಡಬೇಡಿ. ಇಫ್ತಿಯಾರ್ ಕೂಟವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದು ಆರಂಭ ಎಂದುಕೊಳ್ಳಿ. ಇದು ತಮಾಷೆಯ ಹೇಳಿಕೆಯಲ್ಲ. ಈಗಾಗಲೇ ಅನುಮತಿ ತೆಗೆದುಕೊಂಡಿದ್ದೇವೆ. ಹೋರಾಟವನ್ನು ಉಗ್ರರೂಪದಲ್ಲಿ ಮಾಡುತ್ತೇವೆ. ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳತ್ತೇವೆ ಎಂದರು. ಇದನ್ನೂ ಓದಿ: ಬೇಲೂರು ದೇವಾಲಯದಲ್ಲಿ ಗಳಿಗೆ ತೇರಿನ ದಿನ ಕುರಾನ್ ಪಠಣೆ ನಡೆಯುತ್ತೆ
ಹಿಂದೂ ಮಠ-ಮಾನ್ಯರಲ್ಲೂ ಪ್ರಶ್ನೆ ಕೇಳುತ್ತಿದ್ದೇವೆ. ಇಫ್ತಿಯಾರ್ ಕೂಟ ಮಾಡುವುದಾದರೆ ಅಲ್ಲಿಗೆ ಬರಬೇಕಾದ ಅವಶ್ಯಕತೆ ಇಲ್ಲ. ಹಿಂದೂಗಳು ಸಂಸ್ಕೃತಿಯ ರಕ್ಷಣೆಗಾಗಿ, ಧರ್ಮದ ಉಳಿವಿಗಾಗಿ ಮಠ ಮಾನ್ಯಗಳಿಗೆ ಬರುತ್ತೇವೆ. ಮುಸ್ಲಿಮರಿಗೆ ನಮ್ಮ ಧರ್ಮದ ಸಂಸ್ಕೃತಿ ಹೇಳಿಕೊಡಿ. 22ನೇ ತಾರೀಖಿಗೂ ಒಳಗಾಗಿ ಇಫ್ತಿಯಾರ್ ಕೂಟ ರದ್ದುಮಾಡಿದ್ದೇವೆ ಎಂದು ಆದೇಶ ಹೊರಡಿಸದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.