ಬೆಂಗಳೂರು: ಶಿರಾಗೆ (Sira) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ ಎಂದು ದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ (TB Jayachandra) ಹೇಳಿದರು.ಇದನ್ನೂ ಓದಿ: ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು 30 ಕ್ಕೂ ಹೆಚ್ಚು ಶಾಸಕರಿಂದ ಮನವಿ
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) 4,000 ಎಕರೆಯಲ್ಲಿ ನಿರ್ಮಾಣ ಆಗಿದೆ. ದೇಶದ ನಂಬರ್ ಒನ್ ವಿಮಾನ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣ. 5 ಕೋಟಿ ಜನ ಇಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಇರುವ ಮಾನ್ಯತೆ ಕಾರಣಕ್ಕೆ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ. 150 ಕಿ.ಮೀ ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ಮಾಡಬೇಕು ಅಂತಿದೆ ಎಂದು ತಿಳಿಸಿದರು.
ಶಿರಾದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಇವೆ. ಬೆಂಗಳೂರು, ಶಿರಾ ನಡುವೆ 1 ಗಂಟೆಯ ಪ್ರಯಾಣ. ಈ ಎಲ್ಲಾ ಕಾರಣಗಳನ್ನು ಸಿಎಂಗೆ ಮನವಿ ಮಾಡಿದ್ದೇವೆ. ಕೇಂದ್ರ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡುತ್ತೇವೆ. ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡುತ್ತೇವೆ. ಏರ್‌ಪೋರ್ಟ್ ಅಥಾರಿಟಿ ಅವರು ಇಷ್ಟು ಬೇಗ ಬರುತ್ತಾರೆ ಎಂದು ನಮಗೂ ಗೊತ್ತಿರಲಿಲ್ಲ. ಆದರೂ ಈಗಲೂ ಅವಕಾಶ ಇದೆ, ಶಿರಾದಲ್ಲಿ ಆಗುತ್ತಾ ಎಂಬುದನ್ನ ಪರಿಶೀಲಿಸಬಹುದು. ಏರ್‌ಪೋರ್ಟ್ 2032ಕ್ಕೆ ಆಗುತ್ತದೆ. ಇನ್ನೂ 8 ವರ್ಷ ಬೇಕು. ಶಿರಾದಲ್ಲಿ ಏರ್‌ಪೋರ್ಟ್ ಆದರೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಕ್ಕೆ ಸಹಾಯವಾಗಲಿದೆ ಎಂದಿದ್ದಾರೆ.ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‍ಐಆರ್