ಗದಗ: ಜೂನ್ 1 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆ ಮೂಲಕ ಗ್ಯಾರಂಟಿ ಕಾರ್ಡ್ (Guarantee Card) ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ ಎಂದು ಸಚಿವ ಹೆಚ್‌ಕೆ ಪಾಟೀಲ್ (HK Patil) ಟಾಂಗ್ ನೀಡಿದ್ದಾರೆ.
ನೂತನವಾಗಿ ಸಚಿವರಾದ ನಂತರ ಮೊದಲ ಬಾರಿಗೆ ಸ್ವಕ್ಷೇತ್ರ ಗದಗ (Gadag) ನಗರಕ್ಕೆ ಆಗಮಿಸಿದ ಹೆಚ್‌ಕೆ ಪಾಟೀಲ್ ನಗರ ಮುಳಗುಂದ ನಾಕಾದಿಂದ ಕಾಂಗ್ರೆಸ್ (Congress) ಕಚೇರಿ ವರೆಗೆ ಬೃಹತ್ ರ‍್ಯಾಲಿ ನಡೆಸಿದರು. ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಹೂ ಎರಚಿ ಜೈಘೋಷ ಕೂಗಿ ಸಂಭ್ರಮಿಸಿದರು. ನಂತರ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಅವರ ತಂದೆ ಕೆಹೆಚ್ ಪಾಟೀಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
Advertisement
Advertisement
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್ 1 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆ ಮೂಲಕ ಗ್ಯಾರಂಟಿ ಕಾರ್ಡ್ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ. ಗ್ಯಾರಂಟಿ ಕಾರ್ಡ್ಗಳ ಗೊಂದಲವಿದೆ ಎಂದು ಕೆಲವರು ಭಾವಿಸಿಕೊಳ್ಳುವವರಿದ್ದಾರೆ. ಅಂಥವರಿಗೆ ನಾನು ಏನನ್ನೂ ಹೇಳಲು ಬಯಸೋದಿಲ್ಲ. ಕ್ಯಾಬಿನೆಟ್ ಸಭೆಯಲ್ಲಿ ವಿವರವಾದ ಕ್ರಾಂತಿಕಾರಕ, ಬಹು ದೊಡ್ಡ ನಿರ್ಣಯವನ್ನು ಕೈಗೊಳ್ಳಲಿದ್ದೇವೆ ಎಂದರು.
Advertisement
ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸ್ಥಾನ ನನಗೆ ನೀಡಿದ್ದಕ್ಕೆ ತೃಪ್ತಿ ತಂದಿದೆ. ಖಾತೆಗಳ ಬಗ್ಗೆ ಗೊತ್ತಿಲ್ಲದವರು ಏನಾದ್ರೂ ವ್ಯಾಖ್ಯಾನ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ ಈಗಾಗಲೇ ಈ ಖಾತೆಯನ್ನು ಒಮ್ಮೆ ನಿರ್ವಹಿಸಿದ್ದೇನೆ. ಅದರ ಅನುಭವವಿದೆ ಎಂದು ತಿಳಿಸಿದರು.
Advertisement
ಆ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಕಾನೂನು ವಿಶ್ವವಿದ್ಯಾಲಯ, 2 ಹೈಕೋರ್ಟ್ ಸಂಚಾರಿ ಪೀಠ ತರುವ ದೊಡ್ಡ ಪ್ರಯತ್ನ ಮಾಡಿದ್ದೆ. ಅದರ ಜೊತೆಗೆ ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ ಸಿಕ್ಕಿದೆ. ಈ ಖಾತೆಗಳನ್ನು ನಿರ್ವಹಿಸಲು ನನಗೆ ಸಂತೋಷ, ಅಭಿಮಾನ ಅನ್ನಿಸುತ್ತದೆ. ಈ ಖಾತೆಗಳ ಮೂಲಕ ಬಾಕಿ ಉಳಿದ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್
ಇನ್ನು ಸ್ಥಳೀಯ ಅನೇಕ ಅಭಿವೃದ್ಧಿ ಬಗ್ಗೆ ಸಹ ಮಾತನಾಡಿದ ಅವರು, ಗದಗ ಐತಿಹಾಸಿಕ ಸ್ಥಳವಾಗಿದ್ದು, ಔಷಧೀಯ ಸಸ್ಯಕಾಶಿ ಕಪ್ಪತ್ತಗುಡ್ಡ, ಗದುಗಿನ ವೀರನಾರಾಯಣ, ತ್ರಿಕೂಟೇಶ್ವರ, ಲಕ್ಕುಂಡಿ, ಮುಳಗುಂದ ಕಣಿವೆ, ಲಕ್ಷ್ಮೇಶ್ವರ ಸೇರಿದಂತೆ ಅನೇಕ ಐತಿಹಾಸಿಕ ದೇವಸ್ಥಾನಗಳಿವೆ. ಜೊತೆ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತೇನೆ. ಐತಿಹಾಸಿಕ ಭೀಷ್ಮ ಕೆರೆಯ ಆವರಣದಲ್ಲಿ 117 ಅಡಿ ಎತ್ತರದ ಬಸವಣ್ಣ ಮೂರ್ತಿ ಇರುವುದರಿಂದ, ಕೆರೆಯಲ್ಲಿ ಮತ್ತೆ ಬೋಟಿಂಗ್, ಕಾರಂಜಿ ಸೇರಿದಂತೆ ಅನೇಕ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಪ್ರೇಕ್ಷಣಿಯ ತಾಣವನ್ನಾಗಿ ಮಾಡುವುದಾಗಿ ಹೇಳಿದರು.
ಈ ವೇಳೆ ಮಾಜಿ ಸಚಿವ ಡಿಆರ್ ಪಾಟೀಲ್, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಚುನಾವಣಾ ಪ್ರಣಾಳಿಕೆ ರಾಜಕೀಯ ಪಕ್ಷಗಳಿಗೆ ಬೈಬಲ್ ಇದ್ದ ಹಾಗೆ: ಹೆಚ್‌ಸಿ ಮಹದೇವಪ್ಪ