ಮುಂಬೈ: ಕೊರೊನಾ ಸೋಂಕಿತರ ಸಂಖ್ಯೆ ಇಪ್ಪತ್ತು ಸಾವಿರದ ಗಡಿ ದಾಟಿದರೆ ಮುಂಬೈನಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
Advertisement
ಮುಂಬೈನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಇಂದು ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದರು. ಮುಂಬೈನಲ್ಲಿ ಸೋಮವಾರ 8000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಇದು 2021 ರ ಏಪ್ರಿಲ್ 18 ರ ಬಳಿಕ ಪತ್ತೆಯಾದ ಅತೀ ಹೆಚ್ಚು ಪ್ರಕರಣಗಳಾಗಿದೆ. ನಿತ್ಯ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಜೊತೆಗೆ ಓಮಿಕ್ರಾನ್ ಕೂಡಾ ಹೆಚ್ಚು ಕಂಡು ಬರುತ್ತಿದ್ದು ಮಹಾರಾಷ್ಟ್ರದಲ್ಲಿ ಈವರೆಗೂ 500 ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಈ ಸಂಖ್ಯೆಯಲ್ಲಿ ಬಹುತೇಕ ಪ್ರಕರಣಗಳು ಮುಂಬೈ ಮೂಲದ್ದಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜೊತೆಗೆ ಶಾಲಾ-ಕಾಲೇಜು ಬಂದ್
Advertisement
We will have to impose lockdown in Mumbai if daily COVID cases cross the 20,000-mark: Mumbai Mayor Kishori Pednekar pic.twitter.com/7AV7fMSjS0
— ANI (@ANI) January 4, 2022
Advertisement
ಮುಂಬೈನಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಈಗಾಗಲೇ 1 ರಿಂದ 9 ಮತ್ತು 11 ನೇ ತರಗತಿಗಳ ಎಲ್ಲಾ ಮಾಧ್ಯಮಗಳ ಶಾಲೆಗಳನ್ನು ಜನವರಿ 31 ರವರೆಗೆ ಮುಚ್ಚಲು ಪಾಲಿಕೆ ನಿರ್ಧರಿಸಿದೆ. ಆನ್ ಲೈನ್ ತರಗತಿಗಳಿಗೆ ಆದ್ಯತೆ ನೀಡಲು ಸೂಚಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್ ಬಂದ್
Advertisement
ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಅಪಾರ್ಟ್ ಮೆಂಟ್‍ಗಳಲ್ಲಿ 20% ಕ್ಕಿಂತ ಹೆಚ್ಚು ಸೋಂಕು ಪತ್ತೆಯಾದರೆ ಇಡೀ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲು ನಿರ್ಧರಿಸಿದೆ. ಒಂದು ವರದಿಯ ಪ್ರಕಾರ, ಪ್ರಕರಣಗಳ ಹೆಚ್ಚಳದಿಂದಾಗಿ ನಗರದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಪ್ರಮಾಣ ಕಳೆದ ನಾಲ್ಕು ದಿನಗಳಲ್ಲಿ 15% ಹೆಚ್ಚಾಗಿದೆ ಎಂದು ಅವರು ಹೇಳಿದರು.