ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೂ (Loksabha Election) ಮುನ್ನ ಕಾಂಗ್ರೆಸ್ ಗ್ಯಾರಂಟಿಗಳಿಗೆ (Congress Guarantee) ಸೆಡ್ಡು ಹೊಡೆಯುವಂತಹ ಗ್ಯಾರಂಟಿಗಳನ್ನ ನಾವು ಕೊಡ್ತೇವೆ ಅಂತ ಬಸನಗೌಡ ಆರ್ ಪಾಟೀಲ್ ಯತ್ನಾಳ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜು ಕಟ್ಟಡ ಪರಿಶೀಲನೆ ಸಂಬಂಧ ಆಗಮಿಸಿದ್ದ ಯತ್ನಾಳ್ (Basangouda Patil Yatnal) ಮಾಧ್ಯಮಗಳ ಜೊತೆ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸೀಟು ಬಿಜೆಪಿ ಗೆಲ್ಲಲಿದೆ ಎಂದರು.
ಇನ್ನೂ ಎಂದೂ ಸಹ ನಾನು ಮಂತ್ರಿಗಿರಿಗಾಗಿ ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ಮಾಡಿದನವಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನನ್ನ ಅರ್ಹತೆ ಹಿರಿತನ ಅಧರಿಸಿ ಪಕ್ಷವೇ ಪರಿಗಣಿಸಬೇಕು. ನಾನು ಎಂದೂ ಯಾವುದಕ್ಕೂ ಒತ್ತಾಯ ಮಾಡುವುದಿಲ್ಲ. ನಾನು ಎಂದೂ ಲಾಬಿ ಮಾಡಿದವನಲ್ಲ. ಕೇಂದ್ರ ಮಂತ್ರಿ ಆದಾಗಲೂ ನಾನು ಲಾಬಿ ಮಾಡಿಲ್ಲ. ವಿಧಾನಸಭೆ ಟಿಕೆಟ್ ಸಲುವಾಗಿಯೂ ನಾನು ಲಾಬಿ ಮಾಡಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಲೊಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯಾಧ್ಯಕ್ಷರ ಅಯ್ಕೆ ವಿಳಂಬ ರಾಜ್ಯದ ಸಮಸ್ಯೆಗಳು ಚುನಾವಣೆ ಮೇಲೆ ಪರಿಣಾಮ ಬರಲ್ಲ. ರಾಜ್ಯದ ಸಮಸ್ಯೆಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಲಿವೆ. ಕೇಂದ್ರದ ವಿಚಾರದಲ್ಲಿ ಜನ ಒನ್ ನೇಷನ್ ಒನ್ ಲೀಡರ್ ನರೇಂದ್ರ ಮೋದಿ ಅಂತಾರೆ. ಲೋಕಸಭಾ ಚುನಾವಣೆಗೂ ಮುನ್ನ ದೇಶಕ್ಕೆ ದೊಡ್ಡ ಗ್ಯಾರಂಟಿ ಕೊಡಲಿದ್ದೇವೆ. ಆ ಗ್ಯಾರಂಟಿ ಮುಂದೆ ಕಾಂಗ್ರೆಸ್ ಗ್ಯಾರಂಟಿಗಳು ತಡೆಯೋದಿಲ್ಲ. ಚುನಾವಣೆ ಬರಲಿ ನಮ್ಮ ಗ್ಯಾರಂಟಿ ಗಳು ಏನು ಅಂತ ಗೊತ್ತಾಗಲಿದೆ. ದೇಶದ ಹಿತ ಕಾಯುವ ಗ್ಯಾರಂಟಿಗಳನ್ನ ಕೊಡಲಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿಗೆ ಯಡಿಯೂರಪ್ಪ (B S Yediyurappa) ಅನಿವಾರ್ಯ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ. ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂಬುದು ಕೆಲವರು ಅಭಿಪ್ರಾಯ ಅಷ್ಟೇ. ಬಿಜೆಪಿ ಪಕ್ಷಕ್ಕೆ ಯಾರೂ ಸಹ ಅನಿವಾರ್ಯ ಅಲ್ಲ. ಯಡಿಯೂರಪ್ಪ ಅನಿವಾರ್ಯ ಎಂಬುದು ಕೆಲವು ಮಂದಿ ಕೆಲ ಚಾನೆಲ್‍ಗಳ ಅಭಿಪ್ರಾಯ ಅಷ್ಟೇ. ಯಡಿಯೂರಪ್ಪ ಸಹ ಒಬ್ಬ ಹಿರಿಯ ನಾಯಕರು. ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಿದ್ದಾರೆ ಅವರ ಬಗ್ಗೆ ಚರ್ಚೆ ಬೇಡ ಎಂದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]