ಬೆಂಗಳೂರು: ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೆ ಕೊಡುತ್ತೇವೆ. ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಿಳೆಯರಿಗೆ ಪಾಸ್ (Free Bus pass) ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಬಗ್ಗೆ ಜೂನ್ 1 ರಂದು ಕ್ಯಾಬಿನೆಟ್ ನಲ್ಲಿ ನಿರ್ಧಾರ ಆಗುತ್ತೆ. ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೇ ಕೊಡುತ್ತೇವೆ. ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ. ಆದರೆ ಎಷ್ಟು ಜನ ಓಡಾಡ್ತಾರೆ ಅನ್ನೋ ಬಗ್ಗೆ ಮಾಹಿತಿ ಕೇಳಿದ್ದೇವೆ. ಸ್ಕೂಲ್ ಬಸ್ ಪಾಸ್ ನಂತೆ ಮಹಿಳೆಯರ ಬಸ್‍ಪಾಸ್‍ಗೂ ಇಲಾಖೆಗಳಿಗೆ ಹಣ ಕೊಡ್ತೇವೆ ಎಂದರು.
Advertisement
Advertisement
ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಮಕ್ಕಳಿಗೆ ಬಸ್ ಪಾಸ್ ನಂತೆ ಮಹಿಳೆಯರ ಲೆಕ್ಕದಂತೆ ದುಡ್ಡು ಕೊಡಬೇಕಾಗುತ್ತದೆ. ವಿರೋಧ ಪಕ್ಷದವರು ರಚನಾತ್ಮಕವಾಗಿ ಟೀಕೆ ಮಾಡಲಿ. ಒಟ್ಟಿನಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟೆ ಕೊಡುತ್ತೇವೆ. ರಾಜ್ಯದ ಮಹಿಳೆಯರಿಗೆ ಮಾತ್ರ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಗಾಬರಿ ಬೇಡ, ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿಕೆಶಿ
Advertisement
ಸಾರಿಗೆ ಖಾತೆ ಅಸಮಾಧಾನದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಮಂತ್ರಿ ಸ್ಥಾನ ಶಾಶ್ವತವಲ್ಲ, ಖಾತೆಗಳು ಶಾಶ್ವತವಲ್ಲ, ಕೆಲಸ ಮಾಡಿಕೊಂಡು ಹೋಗುತ್ತೇವೆ. ಅಸಮಾಧಾನವೂ ಇಲ್ಲ, ಸಮಾಧಾನವೂ ಇಲ್ಲ. ಮಂತ್ರಿಗಳು ಬದಲಾಗ್ತಾರೆ. ಸಿಕ್ಕಿರುವಾಗ ಕೆಲಸ ಮಾಡಬೇಕು. ನಾಲ್ಕೂವರೆ ವರ್ಷ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಿದ ಹಾಗೆ ಕೆಲಸ ಮಾಡ್ತೇನೆ. ನಾಲ್ಕು ಕಾರ್ಪೋರೇಷನ್ ಜೊತೆ ಮೀಟಿಂಗ್ ಮಾಡುತ್ತೇನೆ ಎಂದರು.