ಹುಬ್ಬಳ್ಳಿ: ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೃಷ್ಣಾ ನದಿ 3ನೇ ಹಂತದ ಕಾಮಗಾರಿಗೆ ಪ್ರತಿ ವರ್ಷ 40 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ ಎಂದು ಕಾಂಗ್ರೆಸ್ (Congress) ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ (Randeep Surjewala) ಭರವಸೆ ನೀಡಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿಂದು (Hubballi) ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೃಷ್ಣಾ ನದಿ (Krishna River Project) ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿಯವರು (BJP) ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಪರಿಣಾಮ ಉತ್ತರ ಕರ್ನಾಟಕ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ. ಇನ್ನೂ ಮೂರು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅದಾದ ಮೇಲೆ ಕೃಷ್ಣಾ ನದಿ 3ನೇ ಹಂತದ ಕಾಮಗಾರಿಗೆ ಪ್ರತಿ ವರ್ಷ 40 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು- ಯುವತಿಯ ಹರಕೆ
Advertisement
Advertisement
ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರೂ ಕೃಷ್ಣಾ ಮತ್ತು ಮಹದಾಯಿ ನೀರು ಹಂಚಿಕೆ (Kalasa Banduri Yojana) ವಿಚಾರವಾಗಿ ಮಾತನಾಡಿಲ್ಲ. ಏಕೆಂದರೆ ಅವರ ಮನಸ್ಸಿನಲ್ಲಿ ಕಳ್ಳನಿದ್ದಾನೆ. ಇಂದಿಗೂ ಶಾ ಮತ್ತು ಮೋದಿ ಅವರು ಕೃಷ್ಣಾ ಮತ್ತು ಮಹದಾಯಿ ನೀರಿನ ಹಕ್ಕಿನಿಂದ ಉತ್ತರ ಕರ್ನಾಟಕದ ಜನರನ್ನು ದೂರ ಇಟ್ಟಿದ್ದಾರೆ. ಅರಣ್ಯ ಇಲಾಖೆ ಕ್ಲಿಯರೆನ್ಸ್, ಹಸಿರು ನ್ಯಾಯಾಧಿಕರಣದ ಕ್ಲಿಯರೆನ್ಸ್, ಕಾಮಗಾರಿ ಟೆಂಡರ್ ಎಲ್ಲಿದೆ ತೋರಿಸಲಿ? ಮೋಸಗಾರ ಬಿಜೆಪಿ ಒಂಟೆಯ ಬಾಯಲ್ಲಿ ಜೀರಿಗೆ ಹಾಕುವ ಕೆಲಸ ಮಾಡುತ್ತಿದೆ. ಈಗ ಇಲ್ಲಸಲ್ಲದ ಮಾತನಾಡಿ ದಿಕ್ಕುತಪ್ಪಿಸುತ್ತಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಏನಾದರೂ ನ್ಯಾಯ ಒದಗಿಸಿದ್ದಾರಾ – ಡಿಕೆಶಿ ಪ್ರಶ್ನೆ
Advertisement
ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ತಮ್ಮ ಯಾತ್ರೆಯ ಮೂಲಕ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಳಿಕ ಮುಂದಿನ ಕಾಂಗ್ರೆಸ್ ಸರ್ಕಾರ ಮಹದಾಯಿ ಯೋಜನೆಗೆ 3 ಸಾವಿರ ಕೋಟಿ ರೂ. ಅನುದಾನ ಕೊಡಲಿದೆ. ಮೊದಲ ಕ್ಯಾಬಿನೆಟ್‌ನಲ್ಲಿ ಐದು ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ, ದ್ರೋಹಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.