ಬೆಳಗಾವಿ: ಮತ್ತೆ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ. ಎರಡು ಬಾರಿ ನಮಗೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ಈಗ ಜನ ತೀರ್ಮಾನ ಮಾಡಿದ್ದಾರೆ. ನಾವು ಮಾಡಿದ ಸಾಧನೆ, ಕೆಲಸದ ಮೇಲೆ ಆತ್ಮವಿಶ್ವಾಸವಿದೆ, ನಾವು ಗೆದ್ದು ಬರುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತಕ್ಕೆ (Lokayukta) ಸದೃಢ ಶಕ್ತಿ ನೀಡಿದ್ದೇವೆ. ಇಂದು ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಪಕ್ಷ, ಪಂಗಡ, ಜಾತಿ, ಧರ್ಮ ಯಾವುದೂ ನೋಡದೆ ನಿಷ್ಪಕ್ಷಪಾತ ಕೆಲಸಕ್ಕೆ ಅವಕಾಶ ನೀಡಲಾಗಿದೆ. ನಿವೃತ್ತ ಜಡ್ಜ್ ಗಳು ಅದರ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ (Congress) ಪಕ್ಷದವರು ತಿಪ್ಪರಲಾಗ ಹಾಕಿದರೂ ಮೇ ತಿಂಗಳಿನಲ್ಲಿ ಬಿಜೆಪಿ (BJP) ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ಕಾಯುತ್ತಿದ್ದಾರೆ; ಜೆಡಿಎಸ್‌ಗೆ ಮತ ಕೊಟ್ರೆ ಕಾಂಗ್ರೆಸ್‌ಗೆ ಕೊಟ್ಟಂತೆ – ಅಮಿತ್ ಶಾ
ಬೆಳಗಾವಿ (Belagavi) ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆ (Vijay Sankalpa Yatra) ಆರಂಭಿಸಿದ್ದೇವೆ. ದೊಡ್ಡ ಸಮಾವೇಶ ಮಾಡಿ ರೋಡ್ ಶೋ ಮಾಡಿದ್ದೇವೆ. ಕಾಂಗ್ರೆಸ್‌ನವರು ಪ್ರಜಾಧ್ವನಿ (Prajadhwani) ಯಾತ್ರೆ ಶುರು ಮಾಡಿದ್ದಾರೆ. 60 ವರ್ಷ ಆಡಳಿತ ಮಾಡಿ ಪ್ರಜೆಗಳ ಧ್ವನಿ ಕಳೆದಿಟ್ಟವರು ಪ್ರಜಾಧ್ವನಿಗಾಗಿ ಓಡಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವುದರಿಂದ ನಿಮಗೆ ಯಾವುದೇ ಲಾಭವಾಗುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾದ ಕಾನ್ರಾಡ್ ಸಂಗ್ಮಾ – ಮೇಘಾಲಯದಲ್ಲಿ ಸರ್ಕಾರ ರಚನೆಗೆ ಮನವಿ
60 ವರ್ಷದ ಆಡಳಿತದಲ್ಲಿ ಏನು ಮಾಡಿದ್ದೀರಿ ಅದನ್ನು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡುತ್ತಿದ್ದಾರೆ. ಆದರೆ ನಾವು ಯಾವತ್ತಿಗೂ ಇದಕ್ಕೆ ಅವಕಾಶ ಕೊಡಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) 9 ವರ್ಷಗಳ ಸಾಧನೆ, ದೇಶದ ಅಭಿವೃದ್ಧಿ, ಗೌರವ, ರಕ್ಷಣೆ ಬಗ್ಗೆ ಜನರಿಗೆ ತಿಳಿಸಿರುವುದಷ್ಟೇ ಅಲ್ಲದೇ ಯಡಿಯೂರಪ್ಪ (B.S.Yediyurappa) , ಬೊಮ್ಮಾಯಿ (Basavaraj Bommai) ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸವನ್ನೂ ತಿಳಿಸುತ್ತಿದ್ದೇವೆ. ನಾವು ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲಂಚ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ರಣದೀಪ್ ಸುರ್ಜೇವಾಲ