ಬೆಂಗಳೂರು: ಸಿಟಿ ರವಿ (CT Ravi) ಅವರು ಕೂಡ ತಾನು ಸಂಘ ಪರಿವಾರದಿಂದ ಬಂದಿದ್ದು ಎಂದು ಹೇಳಿಕೊಳ್ಳುತ್ತಾರೆ. ಅವರನ್ನು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಆದರೆ ಅವರು ಚಿಕ್ಕಮಗಳೂರು ಪಂಚಾಯ್ತಿ ಮಟ್ಟದ ರಾಜಕಾರಣ ಮನಸ್ಥಿತಿಯಿಂದ ಹೊರ ಬಂದಿಲ್ಲ. ಅವರು ಕಾಂಗ್ರೆಸ್ (Congress) ಪಕ್ಷ ಹಾಗೂ ನಾಯಕರ ನಿಂದನೆ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮೇಶ್ ಬಾಬು (Ramesh Babu) ಕಿಡಿ ಕಾರಿದ್ದಾರೆ.
ಕೆಪಿಸಿಸಿ (KPCC) ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಬಾಬು, ಸಿಟಿ ರವಿ ನೆಹರೂ ಅವರಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರವರೆಗೂ ಹಲವು ರೀತಿಯ ನಿಂದನಾ ಹೇಳಿಕೆ ನೀಡಿದ್ದಾರೆ. ಇವುಗಳನ್ನು ರಾಜಕೀಯವಾಗಿ ಎದುರಿಸುವ ಸಾಮರ್ಥ್ಯ ನಮಗಿದೆ. ಅವರು ಚಿಕ್ಕಮಗಳೂರಿನಲ್ಲಿ ಮಾಡಿರುವ ತಪ್ಪುಗಳನ್ನು ಬಹಿರಂಗ ಪಡಿಸಿದ ಲಕ್ಷ್ಮಣ್ ಅವರ ವಿರುದ್ಧ ನೋಟಿಸ್ ನೀಡಿದ್ದು, ಅದಕ್ಕೆ ನಾವು ಉತ್ತರವನ್ನು ಕೊಟ್ಟಿದ್ದೇವೆ. ಈಗ ಅವರು ಚಿಕ್ಕಮಗಳೂರಿನಲ್ಲಿ ನ್ಯಾಯಾಲಯಕ್ಕೆ ಹೋಗಿ ಅಲ್ಲಿನ ಮಾಧ್ಯಮಗಳ ಮುಂದೆ ನಾನು, ಲಕ್ಷ್ಮಣ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.
Advertisement
Advertisement
ದೇಶದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುವ ಕಾನೂನು ಕೇವಲ ಬಿಜೆಪಿ ಹಾಗೂ ಅದರ ನಾಯಕರಿಗೆ ಮಾತ್ರ ಸೀಮಿತವೇ? ಅಥವಾ ಬೇರೆಯವರಿಗೂ ಅನ್ವಯವಾಗುತ್ತದೆಯೇ? ರಾಜಕಾರಣದಲ್ಲಿ ಟೀಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಗಾಜಿನ ಮನೆಯಲ್ಲಿ ನಿಂತು ಬೇರೆಯವರ ಮನೆಗೆ ಕಲ್ಲು ಹೊಡೆಯಬಾರದು. ಅವರು ಇದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಿಟಿ ರವಿ ಅವರು ಕಾಂಗ್ರೆಸ್ ನಾಯಕರ ಬಗ್ಗೆ ನೀಡಿರುವ ಹೇಳಿಕೆಗೆ ನಾವು ಕೂಡ ಅದೇ ಧಾಟಿಯಲ್ಲಿ ಉತ್ತರ ನೀಡಿದ್ದೇವೆ ಎಂದು ಟಾಂಗ್ ನೀಡಿದರು.
Advertisement
ಸಿಟಿ ರವಿ ವಿರುದ್ಧ ಇರುವ ಹಲವು ಆರೋಪಗಳನ್ನು ದಾಖಲೆ ಸಮೇತ ಲಕ್ಷ್ಮಣ್ ಅವರು ಪ್ರಶ್ನೆ ಮಾಡಿದ್ದಾರೆ. ಲಕ್ಷ್ಮಣ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿಲ್ಲ. ಮುಂದಿನ ದಿನಗಳಲ್ಲಿ ಅವರು ಬಂದು ಮಾತನಾಡುತ್ತಾರೆ. ಸಿಟಿ ರವಿ ಅವರ ವಿರುದ್ಧವೂ ಮೈಸೂರಿನಲ್ಲಿ ಮಾನನಷ್ಟ ಮೊಕದ್ದಮೆಯನ್ನು ಲಕ್ಷ್ಮಣ್ ದಾಖಲು ಮಾಡುತ್ತಾರೆ. ರವಿ ಅವರು ಕಾನೂನು ಇಟ್ಟುಕೊಂಡು ಪಲಾಯನ ಮಾಡಬಾರದು ಎಂದು ಹೇಳಿದರು. ಇದನ್ನೂ ಓದಿ: ವಿಧಾನಸೌಧ ಮುಂಭಾಗ ಬಸವಣ್ಣ, ಕೆಂಪೇಗೌಡ ಪ್ರತಿಮೆಗಳಿಗೆ ಗುದ್ದಲಿ ಪೂಜೆ – 2 ತಿಂಗಳಲ್ಲಿ ಪ್ರತಿಷ್ಠಾಪನೆ: ಬೊಮ್ಮಾಯಿ
Advertisement
ದೇಶದಲ್ಲಿ ಮಾನನಷ್ಟ ಮೊಕದ್ದಮೆ ಅವಕಾಶವನ್ನು ಐಪಿಸಿ ಸೆಕ್ಷನ್ 499 ಹಾಗೂ 500ರಲ್ಲಿ ನೀಡಿದ್ದು ಕಾಂಗ್ರೆಸ್ ಪಕ್ಷ. ನೀವು ಕಾಂಗ್ರೆಸ್‌ಗೆ ಇದರ ಬಗ್ಗೆ ಪಾಠ ಮಾಡಬೇಡಿ. ನಿಮ್ಮ ಕಾನೂನಾತ್ಮಕ ಕ್ರಿಯೆಗೆ ಅದರದೇ ರೀತಿ ಉತ್ತರ ನೀಡುತ್ತೇವೆ. ಸಾರ್ವಜನಿಕ ಟೀಕೆಗೆ ಅದರದೇ ರೀತಿ ಉತ್ತರ ನೀಡುತ್ತೇವೆ. ರವಿ ಅವರ ವಿರುದ್ಧವೂ ಕಾಂಗ್ರೆಸ್ ಪಕ್ಷದ ಲಕ್ಷ್ಮಣ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿದ್ದಾರೆ. ಯಾವ ಆಧಾರದ ಮೇಲೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ರವಿ ಅವರ ಮಾನನಷ್ಟ ಮೊಕದ್ದಮೆ ಬೆದರಿಕೆಗೆ ನಾವು ಜಗ್ಗುವುದಿಲ್ಲ. ನಾವುಗಳು ನಿಮ್ಮ ಹಾಗೂ ನಿಮ್ಮ ಪಕ್ಷದ ಅಕ್ರಮದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k