ಕೊಪ್ಪಳ: ನಾವು ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
Advertisement
ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಆಂಜನೇಯ ಶೂದ್ರ ಅದಕ್ಕೆ ಬಿಜೆಪಿಯವರು ಅಭಿವೃದ್ಧಿ ಮಾಡ್ತಿಲ್ಲ ಅನ್ನೋ ಮಾಜಿ ಸಂಸದ ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. ನನಗೆ ಜಾತಿ ಅದ್ಯಾವುದೂ ಗೊತ್ತಿಲ್ಲ. ನಾವು 100ಕ್ಕೆ ನೂರು ಅಂಜನಾದ್ರಿ ಅಭಿವೃದ್ಧಿ ಮಾಡ್ತೀವಿ ಎಂದರು. ಇದನ್ನೂ ಓದಿ: ಮಹಿಳಾ ಪೊಲೀಸರಿಗೆ ಕ್ಯಾಕರಿಸಿ ಉಗಿದು ಕೈ ನಾಯಕಿ ನೆಟ್ಟಾ ಡಿಸೋಜಾ ಆಕ್ರೋಶ
Advertisement
Advertisement
ಈಗಾಗಲೇ ಬ್ಲೂ ಪ್ರೀಂಟ್ ರೆಡಿ ಆಗಿದೆ. ಕಾಂಗ್ರೆಸ್ ನವರು ನಮಗೆ ಬೇಗ ಮಾಡಲಿ ಎಂದು ಪ್ರಚೋದನೆ ಮಾಡ್ತಿದ್ದಾರೆ. ಅಂಜನಾದ್ರಿ ಅಭಿವೃದ್ಧಿ ಮಾಡಲಿ ಎಂದು ಪ್ರಚೋದನೆ ಮಾಡುತ್ತಿದ್ದಾರೆ. ನಮ್ಮ ಮನೆಯಲ್ಲೂ ದೇವರು ಇದ್ದಾರೆ, ನಿಮ್ಮ ಮನೆಯಲ್ಲೂ ದೇವರಿದ್ದಾರೆ. ದೇವರು ನಮ್ಮ ಮನೆಯಲ್ಲಿ ಇಲ್ಲ, ಹೀಗಾಗಿ ನಿಮ್ಮ ಮನೆಯಲ್ಲಿ ಇಡಬೇಡಾ ಅಂತಾ ಹೇಳೋಕೆ ಆಗತ್ತಾ.ಅದೆಲ್ಲ ನಂಬಿಕೆ ಎಂದು ಹೇಳಿದರು.
Advertisement
ಬೇರೆ ರಾಜ್ಯಗಳ ಕ್ಯಾತೆಗೆ ಮಾರ್ಮಿಕ ಉತ್ತರ ನೀಡಿದ ಆನಂದ್ ಸಿಂಗ್, ತುಂಗಭದ್ರಾ ಜಲಾಶಯದಿಂದ ಜುಲೈ 10 ರಿಂದ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಒಮ್ಮತದ ಮೇರೆಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
Live Tv