ಮಂಡ್ಯ: ಕರ್ನಾಟಕದ ಮತ್ತು ತಮಿಳುನಾಡು ನಡುವಿನ ದಶಕಗಳ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಇಂದು ಅಂತಿಮ ತೀರ್ಪು ನೀಡಲಿದ್ದು, ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಹೀಗಾಗಿ ತೀರ್ಪು ಕರ್ನಾಟಕದ ಪರವಾಗಿ ಬರಬಹುದು ಎಂದು ಕಾವೇರಿ ಹೋರಾಟಗಾರ ಜಿ.ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಒಂದು ವೇಳೆ ವ್ಯತಿರಿಕ್ತವಾಗಿ ಬಂದರೆ ರೈತರು ಶಾಂತಿಯುತ ಹೋರಾಟ ಮಾಡಬೇಕು. ಯಾವುದೇ ರೀತಿಯ ಹಿಂಸೆಯಲ್ಲಿ ತೊಡಗಬಾರದು ಎಂದು ಮಾದೇಗೌಡ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಂದು ಸುಪ್ರೀಂನಲ್ಲಿ `ಕಾವೇರಿ’ ಅಂತಿಮ ತೀರ್ಪು- ಬೆಂಗ್ಳೂರು, ಮಂಡ್ಯ, ಮೈಸೂರಲ್ಲಿ ಕಟ್ಟೆಚ್ಚರ
ಈ ಹಿಂದೆ ಬರುತ್ತಿದ್ದ ತೀರ್ಪು ಜಯಲಲಿತ ತೀರ್ಪು ಎಂಬಂತಾಗಿತ್ತು. ತಮ್ಮ ರಾಜ್ಯಕ್ಕೆ ಬರುವ ಅಧಿಕಾರಿಗಳಿಂದ ಬೇಕಾದ ರೀತಿ ವರದಿ ಬರೆಸುತ್ತಿದ್ರು. ಆದ್ರೆ ನ್ಯಾಯಾಲಯ ಎಲ್ಲವನ್ನು ಪರಿಶೀಲಿಸಿ ನ್ಯಾಯಯುತ ತೀರ್ಪು ನೀಡಲಿದೆ ಎಂದು ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ಇಲ್ಲಿದೆ ಪೂರ್ಣ ವಿವರ