Bengaluru CityDistrictsKarnatakaLatestLeading NewsMain Post

ದೇಶದ್ರೋಹದ ಪಾಠ ಮಾಡಿದ್ರೆ ನಾವೇ ಮದರಸಾ ಬ್ಯಾನ್ ಮಾಡ್ತೀವಿ – ವಕ್ಫ್ ಅಧ್ಯಕ್ಷ

ಬೆಂಗಳೂರು: ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡೋದು ಗೊತ್ತಾದರೆ ನಾವೇ ಅದನ್ನ ಬ್ಯಾನ್ ಮಾಡ್ತೀವಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸ ಅದಿ ಹೇಳಿದ್ದಾರೆ.

ಮದರಸಾಗಳಿಗೆ ಮೂಗುದಾರ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಮದರಸಾಗೆ ಮಂಡಳಿ ರಚನೆ ಮಾಡುವ ಬಗ್ಗೆ ಸಿದ್ಧತೆಯನ್ನೂ ನಡೆಸಿದೆ. ಅದಕ್ಕಾಗಿ ಇನ್ನು 15 ದಿನಗಳಲ್ಲಿ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಸಾಂದರ್ಭಿಕ ಚಿತ್ರ

ಸರ್ಕಾರದ ಈ ನಿರ್ಧಾರದ ಬಗ್ಗೆ ವಕ್ಫ್ಬೋರ್ಡ್ ಅಧ್ಯಕ್ಷ ಶಾಫೀ ಸಅದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮ್ಮನ ಮಗಳು, ಸ್ವಂತ ಅಜ್ಜಿಯ ಮೇಲೆಯೇ ಅತ್ಯಾಚಾರ – ಇಬ್ಬರು ಸಹೋದರರು ಅರೆಸ್ಟ್

ಮದರಸಾಗಳು ಇರೋದು ವಕ್ಫ್ ಬೋರ್ಡ್ ಅಧೀನದಲ್ಲಿ. ಸರ್ಕಾರದ ಸಭೆ ಮಾಡಿರುವುದು, ನಿರ್ಧಾರ ಕೈಗೊಂಡಿರುವುದು ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

MADRASA
ಸಾಂದರ್ಭಿಕ ಚಿತ್ರ

ಯಾವುದೇ ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡಲ್ಲ. ನಾನು ಸಹ ಮದರಸಾದ ವಿದ್ಯಾರ್ಥಿಯೇ. ಅಲ್ಲಿ ದೇಶಪ್ರೇಮ, ಭಾವೈಕ್ಯತೆ ಹಾಗೂ ಸಹಭಾಳ್ವೆಯ ಪಾಠ ಮಾಡಲಾಗುತ್ತದೆಯೇ ಹೊರತು ದೇಶದ್ರೋಹದ ಪಾಠ ಮಾಡುವುದಿಲ್ಲ. ಒಂದು ವೇಳೆ ದೇಶದ್ರೋಹದ ಪಾಠ ಮಾಡೋದು ಗೊತ್ತಾದರೆ ನಾವೇ ಅದನ್ನ ಬ್ಯಾನ್ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

YouTube video

ಮದರಸಾದಲ್ಲಿ ದೇಶಪ್ರೇಮದ ಪಠ್ಯ ಇದ್ದು, ಅದಕ್ಕಾಗಿಯೇ ಪ್ರತ್ಯೇಕ ತರಗತಿಯನ್ನ ಮಾಡ್ತೀವಿ. ದೇಶಪ್ರೇಮದ ಪಾಠ ಹೇಳುವ ಜಾಗದಲ್ಲಿ ವಿದ್ಯಾರ್ಥಿ ಉಗ್ರವಾದಿ ಹೇಗಾಗುತ್ತಾನೆ? ಮದರಸಾಗಳಲ್ಲಿ ಕದ್ದುಮುಚ್ಚಿ ಯಾವ ವ್ಯವಹಾರವೂ ನಡೆಯಲ್ಲ. ಬೇಕಿದ್ರೆ ಪ್ರತಿ ಮದರಸಾದ ಸಮಿತಿಗಳ ಬ್ಯಾಕ್ ಗ್ರೌಂಡ್ ಪರಿಶೀಲನೆ ಮಾಡ್ತೇವೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿಯೇ ಇದೆ ಎಂದು ವಕ್ಫ್ ಬೋರ್ಡ್ ಪರ ಬ್ಯಾಟಿಂಗ್ ಮಾಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button