ಶಿವಮೊಗ್ಗ: ಈ ಘಟನೆ ಆಗಿದ್ದೇ ಒಳ್ಳೆಯದಾಯ್ತು ಅನ್ಸುತ್ತೆ ಸ್ವಾಮೀಜಿ, ಇಲ್ಲದಿದ್ದರೆ ನಿಮ್ಮನ್ನೆಲ್ಲಾ ಹೀಗೆ ಒಟ್ಟಿಗೆ ನಮ್ಮ ಮನೆಯಲ್ಲಿ ಕಾಣುವ ಭಾಗ್ಯ ಸಿಗುತ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯದ ಹಲವು ಮಠಾಧೀಶರು ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಧೈರ್ಯ ತುಂಬುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್
Advertisement
Advertisement
ಶನಿವಾರವೂ ರಾಜ್ಯದ ಹಲವು ಮಠಗಳ ಸುಮಾರು 10 ಕ್ಕೂ ಹೆಚ್ಚು ಮಠಾಧೀಶರು ಭೇಟಿ ನೀಡಿ, ಈಶ್ವರಪ್ಪ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಭಾನುವಾರ ಕೇದಾರನಾಥ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸುಮಾರು 8 ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ
Advertisement
ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಕೇದಾರನಾಥ ಮಠದ ಸ್ವಾಮೀಜಿ ಅವರಿಗೆ ಕುಟುಂಬ ಸಮೇತರಾಗಿ ಈಶ್ವರಪ್ಪ ಪಾದಪೂಜೆ ಸಲ್ಲಿಸಿದರು. ಬಳಿಕ ಕುಟುಂಬ ಸದಸ್ಯರು ಶ್ರೀಗಳ ಜೊತೆ ಪೋಟೋ ತೆಗೆಸಿಕೊಂಡರು. ಈ ವೇಳೆ ಈಶ್ವರಪ್ಪ ಶ್ರೀಗಳೊಂದಿಗೆ ಮಾತನಾಡುವಾಗ, ರಾಜೀನಾಮೆ ನೀಡಿದ್ದೇ ನನಗೆ ಒಳ್ಳೆಯದಾಯ್ತು ಅನಿಸುತ್ತಿದೆ. ಇದರಿಂದ ಆದರೂ ನೀವುಗಳು ನಮ್ಮ ಮನೆಗೆ ಒಟ್ಟಿಗೆ ಬರುವಂತೆ ಆಯಿತು ಎಂದು ಮಾತನಾಡಿದ್ದಾರೆ.