ಬಾಗಲಕೋಟೆ: ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮುಸ್ಲಿಂ ಮಹಿಳೆ ನಮಗೆ ನ್ಯಾಯ ಬೇಕು. ದುಡ್ಡು ಬೇಡ ಎಂದು ಹೇಳಿ 2 ಲಕ್ಷ ರೂ. ಹಣವನ್ನು ಎಸೆದಿದ್ದಾರೆ.
Advertisement
ಕೆರೂರು ಗಲಭೆ ನಂತರ ನಡೆದ ಹಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯ ಅವರು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಗಾಯಾಳುಗಳಿಗೆ 2 ಲಕ್ಷ ರೂ. ಕೊಟ್ಟು ಬರುತ್ತಿದ್ದರು. ಈ ವೇಳೆ ಗಾಯಾಳುಗಳ ಕುಟುಂಬ ನಮಗೆ ಹಣ ಬೇಡ. ನ್ಯಾಯ ಬೇಕು. ನಮಗೆ ಹಣ ಬೇಡ ಶಾಂತಿ ಬೇಕು, ಎಂದು ಮನವಿ ಮಾಡಿದ್ದಾಳೆ. ಇದನ್ನೂ ಓದಿ: ಪ್ರೀತಿಸುವಂತೆ ವಿವಾಹಿತೆಗೆ ಬ್ಲಾಕ್ ಮೇಲ್ – ಮನನೊಂದ ಗೃಹಿಣಿ ನೇಣಿಗೆ ಶರಣು
Advertisement
Advertisement
ಅಲ್ಲಿಂದ ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಆದರೆ ಇಲ್ಲಿಗೆ ಸುಮ್ಮನಾಗದ ಮಹಿಳೆ ರಾಜ್ಮ ಅವರು ಕಾರಿನ ಹಿಂದೆ ಹೋಗಿ ಹಣವನ್ನು ಬಿಸಾಕಿದ್ದಾಳೆ.
Advertisement
ರಾಜ್ಮ ಹೇಳಿದ್ದೇನು?
ಇಲ್ಲಿಯವರೆಗೂ ಯಾರು ಬಂದಿಲ್ಲ. ಈಗ ಸಿದ್ದರಾಮಯ್ಯ ಬಂದಿದ್ದಾರೆ. ಆದರೆ ವೋಟ್ ಕೇಳಬೇಕಾದ್ರೆ ಇವರಿಗೆ ಯಾವುದೇ ಜಾತಿ ಅಡ್ಡ ಬರುವುದಿಲ್ಲ. ನಿಮಗೆ ಕೈ ಮುಗಿತ್ತೀನಿ ವೋಟ್ ಹಾಕಿ ಎಂದು ಕೇಳಿಕೊಳ್ಳುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅಭಿಯಾನ
ನಾವು ವೋಟ್ ಹಾಕಿದ್ರೆ ತಾನೇ ಅವರು ಅಧಿಕಾರಕ್ಕೆ ಬರುತ್ತಾರೆ. ನಮಗೂ ನ್ಯಾಯ ಬೇಕು, ಹಿಂದೂಗಳಿಗೂ ನ್ಯಾಯ ಬೇಕು. ಎಲ್ಲರೂ ಒಂದೇ ತಾಯಿ ಮಕ್ಕಳ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.
ನನಗೆ ಹೊಟ್ಟೆ ಹಸಿದಿದೆ ಎಂದು ಭಿಕ್ಷೆ ಬೇಡುದ್ರೆ ಹೊಟ್ಟೆ ತುಂಬ ರೊಟ್ಟಿ ಕೊಡುತ್ತಾರೆ. ಯಾರಾದ್ರೂ ಬಡಿತರೆ ಎಂದರೆ ಯಾರು ಯಾರಿಗೂ ಸಹಾಯ ಮಾಡುವುದಿಲ್ಲ. ನಮಗೆ ಆ ಕಷ್ಟ ಗೊತ್ತಿದೆ. ನಾವು ನಮ್ಮ ಮಕ್ಕಳ ಮುಖ ನೋಡಿ 8-10 ದಿನವಾಗಿದೆ ಎಂದು ತಮ್ಮ ಅಳಾಲನ್ನು ಹೇಳಿಕೊಂಡರು.
ನಮಗೆ ಆದ ಘಟನೆ ಯಾವ ಅಣ್ಣ-ತಮ್ಮ, ಹಿಂದೂ-ಮುಸ್ಲಿಮರಿಗೂ ಆಗಬಾರದು. ಇದಕ್ಕೆ ಕಾರಣವಾದರಿಗೆ ಮಾತ್ರ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು. ಹೌದು, ಪರಿಹಾರ ಕೊಟ್ಟಿದ್ದಾರೆ. ಇಂದು ಕೊಡುತ್ತಾರೆ. ಆದರೆ ನನ್ನ ಗಂಡ ಒಂದು ವರ್ಷಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು. ಅಳುವವರು ಒಂದು ದಿನ ಅಳುತ್ತಾರೆ. ದಿನ ಯಾರು ಅಳುವುದಿಲ್ಲ. ಹೊಟ್ಟೆಗೆ ಬೇಕು ಎಂದರೆ ಹಿಂದೂಗಳು ನಮಗೆ ಊಟ ಕೊಡುತ್ತಾರೆ. ಮುಸ್ಲಿಂ ಸಹ ನಮಗೆ ಊಟ ಕೊಡುತ್ತಾರೆ. ಹೊಟ್ಟೆ ಹಸಿದಿದೆ ಎಂದರೆ ಯಾರು ಸುಮ್ಮನೆ ಕುಳಿತು ಕೊಳ್ಳುವುದಿಲ್ಲ ಎಂದರು.
ನಮಗೆ ಯಾರ ಪರಿಹಾರವೂ ಬೇಡ. ಈ ರೀತಿಯ ಗಲಭೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು. ನಮಗೆ ಬಂದ ಪರಿಸ್ಥಿತಿ ಯಾವ ಹಿಂದೂ, ಮುಸ್ಲಿಮರಿಗೂ ಬರಬಾರದು ಎಂದು ವಿನಂತಿ ಮಾಡಿಕೊಂಡರು. ಒಂದು ವೇಳೆ ಈ ಘಟನೆಯಲ್ಲಿ ನಮ್ಮದು ತಪ್ಪು ಎಂದು ತಿಳಿದುಬಂದ್ರೆ, ಕುಟುಂಬ ಸಮೇತ ನಾವು ಪೊಲೀಸರಿಗೆ ಶರಣಾಗುತ್ತೇವೆ ಎಂದು ಹೇಳಿದರು.