ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡುತ್ತಿದ್ದು, ಒಂದೆಡೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾನ ವಚನ ಸ್ವೀಕಾರ ಮಾಡಿದ್ದಾರೆ. ಇನ್ನೊಂದೆಡೆ ಜೆಡಿಎಸ್- ಕಾಂಗ್ರೆಸ್ ನಾಯಕರು ಪ್ರತಿಭಟನೆಗಿಳಿದಿದ್ದಾರೆ.
ಈ ಕುರಿತು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ರಾಜ್ಯಪಾಲರು ಮತ್ತು ಸುಪ್ರೀಂ ಕೋರ್ಟ್ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
Advertisement
#Bengaluru: BJP's BS Yeddyurappa takes oath as the Chief Minister of Karnataka. pic.twitter.com/f33w4GZjrS
— ANI (@ANI) May 17, 2018
Advertisement
ಬಿಜೆಪಿಯವರು ಬಹುಮತ ಸಾಧಿಸಿದ್ದೇವೆ ಅಂತ ಹೇಳುತ್ತಿದ್ದಾರೆ. ನಮ್ಮಲ್ಲೂ ಎರಡು ಪಕ್ಷ ಸೇರಿದಾಗ ಸಂಖ್ಯಾಬಲ ಜಾಸ್ತಿಯಾಗುತ್ತದೆ. ಹೀಗಾಗಿ ಎರಡೂ ಪಕ್ಷದವರೂ ಕೂಡ ಲಿಖಿತ ಪತ್ರದ ಮೂಲಕ ತಿಳಿಸಿದ್ದೆವು. ಈ ವೇಳೆ ಸಂವಿಧಾನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ರಾಜ್ಯಪಾಲರು ನಮಗೆ ಆಶ್ವಾಸನೆ ಕೊಟ್ಟಿದ್ರು. ಆದ್ರೆ ಇದೀಗ ರಾಜ್ಯಪಾಲರು 104 ಜನ ಇದ್ರು ಕೂಡ ಯಡಿಯೂರಪ್ಪನವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನವರು ಸೇರಿ ಪ್ರತಿಭಟನೆ ಕೈಗೊಳ್ಳುತ್ತೇವೆ. ಆ ಬಳಿಕ ನಾವು ಕಾನೂನಾತ್ಮಕವಾಗಿ ಹೋರಾಟಕ್ಕೆ ಕ್ರಮಕೈಗೊಳ್ಳುತ್ತೇವೆ.
Advertisement
Bengaluru: BJP's BS Yeddyurappa sworn-in as Chief Minister of Karnataka pic.twitter.com/TrkgFYNoPC
— ANI (@ANI) May 17, 2018
Advertisement
ಅವರಿಗೆ 15 ದಿನ ಕಾಲಾವಕಾಶ ನೀಡಿದ್ದಾರೆ. ಈ 15 ದಿವಸದೊಳಗೆ ಅವರು ನಮ್ಮವರನ್ನು ಹಾಗೂ ನಮ್ಮ ಶಾಸಕರನ್ನು ಅವರು ಕರೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಂತ ಅವರು ಹೇಳಿದ್ರು.
ಚುನಾವಣಾ ಫಲಿತಾಂಶಕ್ಕೂ ಮೊದಲೇ ತಾನೇ ಸಿಎಂ ಆಗುವುದು ಅಂತ ಹೇಳುತ್ತಿದ್ದ ಬಿಎಸ್‍ವೈ ಯಡಿಯೂರಪ್ಪ ಅವರು ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಗಳಿಸಿದ್ರೂ, ಜೆಡಿಎಸ್- ಕಾಂಗ್ರೆಸ್ ಮೈತ್ರಿಯ ಕಾರಣದಿಂದ ಸಾಧ್ಯವಾಗಿಲ್ಲ. ಆದ್ರೂ ಇಂದು ಬಿಎಸ್ ವೈ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದು ಇದೀಗ ಕಾಂಗ್ರೆಸ್ಸಿಗೆ ಭಾರೀ ಹೊಡೆತವೇ ಬಿದ್ದಿದೆ.
Bengaluru: BJP's BS Yeddyurappa shows the victory sign after being sworn-in as Chief Minister of Karnataka. pic.twitter.com/UMM10wQKbY
— ANI (@ANI) May 17, 2018