ಮಂಡ್ಯ: ಪಾಪಿ ಪಾಕಿಸ್ತಾನ (Pakistan) ಸರ್ವನಾಶವಾಗಲಿ ಎಂದು ಮಂಡ್ಯ (Mandya) ಜಿಲ್ಲೆಯ ಮದ್ದೂರಿನ ಕೊಪ್ಪದಲ್ಲಿ ಪಾಕಿಸ್ತಾನದ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ.
ಎಂಎಲ್‌ಸಿ ವಿವೇಕಾನಂದ ನೇತೃತ್ವದಲ್ಲಿ ಕೊಪ್ಪದಲ್ಲಿ ಮುಸ್ಲಿಮರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್, ಪಾಕಿಸ್ತಾನ ಸರ್ವನಾಶವಾಗಲಿ ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಪತ್ರ
ನಾವೆಂದು ಹಿಂದೂಸ್ತಾನದ ಜೊತೆಗಿರುತ್ತೇವೆ. ನಾವೆಲ್ಲಾ ಹುಟ್ಟಿ ಬೆಳೆದಿರುವುದು ಭಾರತದಲ್ಲಿ. ಭಯೋತ್ಪಾದನೆ ಬೆಂಬಲಿಸುವ ಪಾಕ್‌ಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸುತ್ತಾರೆ. ಮೋದಿಯವರ ನಡೆಯನ್ನ ನಾವು ಬೆಂಬಲಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮನಸ್ಸು ಮಾಡಿದ್ರೆ ಎರಡೇ ದಿನಕ್ಕೆ ಪಾಕಿಸ್ತಾನ ನಿರ್ನಾಮ ಮಾಡ್ಬೋದು: ಜಮೀರ್