ಬೆಳಗಾವಿ: ಜಿಲ್ಲಾ ಸಮಸ್ಯೆಯನ್ನು ನಾವೇ ಇತ್ಯರ್ಥ ಮಾಡಿಕೊಳ್ಳುತ್ತೇವೆ. ನಮಗೆ ಯಾರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಎಲ್ಲ ಆಂತರಿಕ ಸಮಸ್ಯೆಗಳನ್ನು ಪಕ್ಷದಲ್ಲಿಯೇ ಚರ್ಚಿಸುತ್ತೇವೆ. ಪಕ್ಷ ಬಿಡುವ ಯೋಚನೆಯೇ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿಯೇ ನಮ್ಮ ಮುಖಂಡರೂ ಇದ್ದಾರೆ. ನಮ್ಮ ಜಿಲ್ಲೆಯ ಹಿರಿಯ ನಾಯಕರು, ಮಾಜಿ ಸಚಿವರು ಎಲ್ಲರೂ ಇದ್ದಾರೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರವನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಇದನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಎಲ್ಲ ಜಿಲ್ಲೆಯಲ್ಲಿ ಎರಡರಿಂದ ಮೂರು ಗುಂಪುಗಳು ಸಹ ಇರುತ್ತವೆ. ಸಹಜವಾಗಿ ಕೆಲವು ನಾಯಕರು ಕೆಲವರಿಗೆ ಬೆಂಬಲ ಸೂಚಿಸುವುದು ಸಾಮಾನ್ಯ ಆಗಿರುತ್ತದೆ ಅಂತಾ ಅಂದ್ರು.
ಶನಿವಾರ ಬೆಂಗಳೂರಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಬೆಳಗಾವಿ ಸಮಸ್ಯೆಗಳನ್ನು ನಮಗೆ ಬಿಡುವುದು ಸೂಕ್ತ. ಇದೆಲ್ಲ ಜಿಲ್ಲೆಗೆ ಸೀಮಿತವಾದ ವಿಚಾರ. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮಲ್ಲಿ ಏನೇ ಗೊಂದಲಗಳಿದ್ರೂ ಚುನಾವಣೆಯಲ್ಲಿ ನಾವೆಲ್ಲ ಒಂದಾಗಿ ಇರುತ್ತೇವೆ ಎಂಬುದು ಸತ್ಯ ಅಂತಾ ಹೇಳಿದ್ದಾರೆ.
ಬಿಜೆಪಿ ಪ್ರಾಬಲ್ಯದ ನಡುವೆ ದೊಡ್ಡ ಜಿಲ್ಲೆಯಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿದ್ದು ನಾವು. ನಮಗೆ ಗೌರವ ಇಲ್ಲ ಅಂದ್ರೆ ಹೇಗೆ..? ಏನೇ ಇದ್ದರೂ ನಮ್ಮ ಬಳಿ ಚರ್ಚಿಸಬಹುದು. ಅದು ಬಿಟ್ಟು ನಮ್ಮ ಮೇಲೆ ಸವಾರಿ ಮಾಡಿದ್ರೆ ಹೇಗೆ..? ನಮ್ಮ ಮೇಲೆಯೇ ಸವಾರಿ ಮಾಡಿದ್ರೆ ಕೈ ಕಟ್ಟಿ ಕೂರೋಕೆ ಆಗಲ್ಲ. ನನ್ನ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ಪದೇ ಪದೇ ಜಿದ್ದಿಗೆ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಮನವೊಲಿಸೋದು ಕಷ್ಟ ಅಂತ ಸಿದ್ದರಾಮಯ್ಯಗೆ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv