ಸಿದ್ದರಾಮಯ್ಯ ಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲಬೇಕು: ಕೆಹೆಚ್ ಮುನಿಯಪ್ಪ

Public TV
1 Min Read
KH Muniyappa

ಬೆಂಗಳೂರು: ಶೋಷಿತ ಸಮುದಾಯಗಳ ಪರ ನಿಂತಿರುವ ಸಿದ್ದರಾಮಯ್ಯಗೆ (Siddaramaiah) ಅವರ ಕಷ್ಟದ ಸಮಯದಲ್ಲಿ ಶಾಸಕರು, ಸಚಿವರು, ಸಮುದಾಯಗಳು ಅವರ ಜೊತೆ ನಿಲ್ಲಬೇಕು. ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಎಂದು ಸಚಿವ ಕೆಹೆಚ್ ಮುನಿಯಪ್ಪ (KH Muniyappa) ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ (Valmiki Jayanthi) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಒಳ್ಳೆ ಕೆಲಸ ಮಾಡಿದ್ದರು. ಪ್ರತಿ ತಾಲೂಕಿನಲ್ಲಿ ಹಾಸ್ಟೆಲ್ ಮಾಡಿದ್ದಾರೆ. ಪ್ರತಿ ಹೋಬಳಿಯಲ್ಲಿ ಎಸ್‌ಸಿ-ಎಸ್ಟಿ ಹಾಸ್ಟೆಲ್ ಕೋಲಾರ-ಚಿಕ್ಕಬಳ್ಳಾಪುರಲ್ಲಿ ಪ್ರಾರಂಭ ಮಾಡಿದ್ದರು ಎಂದರು. ಇದನ್ನೂ ಓದಿ: ತುಂತುರು ಮಳೆಗೆ ನೆನೆದಿದ್ದ ಮನೆಗೋಡೆ ಕುಸಿದು ವೃದ್ಧೆ ಸಾವು

Valmiki Jayanthi 2024

ಇದೇ ವೇಳೆ ಶೋಷಿತ ಸಮುದಾಯದ ನಿಗಮಗಳಿಗೆ ಅಭಿವೃದ್ಧಿಗಾಗಿ, ಭೂ ಒಡೆತನಕ್ಕೆ ಹೆಚ್ಚು ಒತ್ತು ನೀಡಿ ನಿಗಮಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು. ಇದನ್ನೂ ಓದಿ: Uttar Pradesh | ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಹಿಂಸಾಚಾರ – ಪ್ರಮುಖ ಆರೋಪಿಗೆ ಗುಂಡೇಟು

ಈ ವೇಳೆ ಸಿದ್ದರಾಮಯ್ಯ ಪರ ಮಾತನಾಡಿದ ಅವರು, ಶೋಷಿತ, ರೈತರು, ಬಡವರ ಪರ ಕಾರ್ಯಕ್ರಮ ತಂದಿರುವ ಸಿದ್ದರಾಮಯ್ಯ ಪರ ನಾವು ನಿಲ್ಲಬೇಕು. ಸಿದ್ದರಾಮಯ್ಯ ಕೈ ಬಲಪಡಿಸಬೇಕು. ನಾವೆಲ್ಲರು ಅವರ ಜೊತೆ ಇರಬೇಕು. ಕಷ್ಟದ ಸಮಯದಲ್ಲಿ ನಾವು ಸಿದ್ದರಾಮಯ್ಯ ಜೊತೆ ಇರೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ವಾಲ್ಮೀಕಿ ಆದರ್ಶ ಮೈಗೂಡಿಸಿಕೊಂಡು ಸಿಎಂ ಸಿದ್ದರಾಮಯ್ಯ ಈಗಲೇ ರಾಜೀನಾಮೆ ನೀಡಲಿ: ಕ್ಯಾ.ಬ್ರಿಜೇಶ್ ಚೌಟ

Share This Article